ಇಂದಿನಿಂದ ಈ ರಾಶಿಯವರಿಗೆ ಒಲಿದು ಬರುವುದು ಅಷ್ಟೈಶ್ವರ್ಯ! ಬೆನ್ನಿಗೆ ನಿಲ್ಲುವುದು ಅದೃಷ್ಟ

Gajakesari yoga effect : ಗಜ ಕೇಸರಿ ಯೋಗ ರೂಪುಗೊಂಡಾಗ ಕೆಲವು ರಾಶಿಯವರ ಅದೃಷ್ಟ ಬೆಳಗುತ್ತದೆ. ಗಜಕೇಸರಿ ಯೋಗವು ಈ ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ . 

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಯೋಜನೆಯು ಶುಭ ಮತ್ತು ಅಶುಭ ಯೋಗವನ್ನು ಸೃಷ್ಟಿಸುತ್ತದೆ. ಇಂಥಹ ಯೋಗಗಳಲ್ಲಿ ಗಜಕೇಸರಿ ರಾಜಯೋಗ ಅತ್ಯಂತ ಮಂಗಳಕರ. ಜಾತಕದಲ್ಲಿ ಗಜಕೇಸರಿ ರಾಜಯೋಗ ಇರುವ ವ್ಯಕ್ತಿಗೆ ಉನ್ನತ ಸ್ಥಾನ, ಅಪಾರ ಸಂಪತ್ತು, ಗೌರವ ದೊರೆಯುತ್ತದೆ. ಒಂದೇ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗ ಏರ್ಪಡುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಪ್ರಸ್ತುತ ದೇವಗುರು ಬೃಹಸ್ಪತಿ ಸ್ವರಾಶಿ ಮೀನ ರಾಶಿಯಲ್ಲಿದ್ದಾರೆ. ಇಂದು ಚಂದ್ರ ಕೂಡಾ ಸಂಕ್ರಮಿಸಿದ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದರಿಂದ ಮೇಷ ರಾಶಿಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದೆ.ಈ ರಾಜಯೋಗ 3 ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. 

2 /5

ಗುರು ಮತ್ತು ಚಂದ್ರರು ಯಾವುದೇ ರಾಶಿಯಲ್ಲಿ ಸೇರಿದಾಗ ಗಜಕೇಸರಿ ರಾಜಯೋಗ ಉಂಟಾಗುತ್ತದೆ.  ಹೀಗೆ ಗಜ ಕೇಸರಿ ಯೋಗ ರೂಪುಗೊಂಡಾಗ ಕೆಲವು ರಾಶಿಯವರ ಅದೃಷ್ಟ ಬೆಳಗುತ್ತದೆ. ಕೆಲಸ ಕಾರ್ಯಗಳಲ್ಲಿ  ಅದ್ಭುತ, ಯಶಸ್ಸು, ಮತ್ತು ಸಂತೋಷದ ಜೀವನ ಪ್ರಾಪ್ತಿಯಾಗುತ್ತದೆ. ಗಜಕೇಸರಿ ಯೋಗವು ಈ ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ . 

3 /5

ಮೇಷ ರಾಶಿ : ಗಜಕೇಸರಿ ರಾಜಯೋಗವು ಮೇಷ ರಾಶಿಯವರಿಗೆ ಅಪಾರ ಲಾಭವನ್ನು ನೀಡುತ್ತದೆ. ಈ ಜನರು ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಹಣ ಪಡೆಯಲು ಹೊಸ ಮಾರ್ಗಗಳು  ಸೃಷ್ಟಿಯಾಗುತ್ತವೆ. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ.   

4 /5

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕೂಡಾ ಗಜಕೇಸರಿ ಯೋಗ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ರಾಶಿಯವರು ಸಮಾಜದಲ್ಲಿ ಗೌರವ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ಉನ್ನತ ಸ್ಥಾನಕ್ಕೆ ಏರುತ್ತಾರೆ. ಹೊಸ ಉದ್ಯೋಗ ಅಥವಾ ಬಡ್ತಿ ಪಡೆಯಬಹುದು. ಆದಾಯ ಹೆಚ್ಚಾಗಲಿದೆ. ಉದ್ಯಮಿಗಳಿಗೆ, ಈ ಸಮಯವು ದೊಡ್ಡ ಮಟ್ಟದ ಲಾಭವನ್ನು ನೀಡುತ್ತದೆ.   

5 /5

ತುಲಾ ರಾಶಿ: ಗಜಕೇಸರಿ ಯೋಗವು ತುಲಾ ರಾಶಿಯವರಿಗೆ ಯಶಸ್ಸು ಮತ್ತು ಸಂಪತ್ತನ್ನು ನೀಡುತ್ತದೆ. ವ್ಯಾಪಾರ-ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ನಿರಂತರವಾಗಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವುದು ಸಾಧ್ಯವಾಗುತ್ತದೆ. ನಿಮಗೇ ಗೊತ್ತಿಲ್ಲದ ಮೂಲದಿಂದ ಹಣ ಹರಿದು ಬರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)