ನವೆಂಬರ್ ನಿಂದ ಈ ರಾಶಿಯವರ ಬಂಗಾರದ ಬದುಕು ಶುರು ! ಸದಾ ಬೆನ್ನಿಗಿರುವುದು ಅದೃಷ್ಟ ! ಪ್ರತಿ ಹೆಜ್ಜೆಗೂ ವಿಜಯಮಾಲೆಯೇ !

ಜನವರಿ 17, 2023 ರಂದು ಸಂಜೆ 5:47 ಕ್ಕೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಗ್ರಹ ಪ್ರಸ್ತುತ ವಕ್ರ ನಡೆಯಲ್ಲಿದ್ದಾನೆ.  ನವೆಂಬರ್ 4ರಿಂದ ಶನಿ ಗ್ರಹ ಮತ್ತೆ ನೇರ ನಡೆಗೆ ಮರಳಲಿದೆ.   

ಬೆಂಗಳೂರು : ದೀರ್ಘಕಾಲದವರೆಗೆ ವಕ್ರ ಸ್ಥಿತಿಯಲ್ಲಿಯೇ ಇದ್ದ ಶನಿ ಗ್ರಹ  ನವೆಂಬರ್ 4, 2023 ರಂದು ಕುಂಭ ರಾಶಿಯಲ್ಲಿ ಮತ್ತೆ ನೇರ ನಡೆ ಆರಂಭಿಸಲಿದ್ದಾನೆ. ಶನಿಯೂ ನೇರ ನಡೆಗೆ ಮರಳುವುದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯವರಿಗೆ ಇದು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅವರ ಜೀವನದಲ್ಲಿ ಸಂತೋಷದ ಹೊನಲು ಹರಿಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /12

ಮೇಷ ರಾಶಿ :  ಮೇಷ ರಾಶಿಯವರ ಇಷ್ಟಾರ್ಥಗಳು ನೆರವೇರಲಿವೆ. ಆದರೆ ನಿಮ್ಮ ಆದಾಯವನ್ನು ಹೆಚ್ಚಿಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಕೆಲಸವನ್ನು  ಆರಂಭಿಸುವುದಾದರೆ ಯಶಸ್ಸು ಸಿಗುತ್ತದೆ. 

2 /12

ವೃಷಭ ರಾಶಿ : ತಂದೆಯ ವೃತ್ತಿಯಲ್ಲಿ ಏರಿಳಿತಗಳು ಉಂಟಾಗಬಹುದು. ಈ ಅವಧಿಯಲ್ಲಿ ಅವರ ಆರೋಗ್ಯದ ಬಗ್ಗೆ ಗಮನ ಕೊಡಿ. ಇದಲ್ಲದೆ, ನಿಮ್ಮ ಕೆಲಸ ಅಥವಾ ಕೆಲಸದ ಸ್ಥಳದಲ್ಲಿಯೂ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎಲ್ಲಾ ಕಾರ್ಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ.   

3 /12

ಮಿಥುನ ರಾಶಿ : ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಅದು ಸರಿಯಾದ ಸಮಯ. ಹಿರಿಯರ ಸಲಹೆಯನ್ನು ತೆಗೆದುಕೊಂಡರೆ ಅದೃಷ್ಟ ಕೈ ಹಿಡಿಯುತ್ತದೆ. ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ.     

4 /12

ಕರ್ಕ ರಾಶಿ : ಆರೋಗ್ಯ ಕ್ಷೀಣಿಸಬಹುದು. ಶನಿ ದೇವರನ್ನು ಮತ್ತು ಕುಲದೇವತೆಯನ್ನು ಪೂಜಿಸಿದರೆ, ಎಲ್ಲಾ ಸವಾಲುಗಳನ್ನು ಜಯಿಸಿ ಯಶಸ್ಸು  ಕಾಣಬಹುದು.   

5 /12

ಸಿಂಹ ರಾಶಿ : ಶನಿಯ ಈ ಸಂಚಾರವು ನಿಮ್ಮ ವೈವಾಹಿಕ ಸಂಬಂಧಗಳನ್ನು ಉತ್ತಮಗೊಳಿಸುತ್ತದೆ. ಆದರೆ ನಿಮ್ಮ ಹೆಂಡತಿಯ ಭಾವನೆಗಳನ್ನು ಗೌರವಿಸಿ. ವೃತ್ತಿಜೀವನದ ಬಗ್ಗೆ ಯೋಚಿಸುವುದು ಉತ್ತಮ.   

6 /12

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಕೆಲವು ಕೆಲಸಗಳಲ್ಲಿ ಸ್ನೇಹಿತರ ಸಹಾಯ ಸಿಗಲಿದೆ. ಶತ್ರುಗಳು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಸ್ನೇಹಿತರ ಸಹಾಯದಿಂದ  ಶತ್ರುಗಳನ್ನು ಸೋಲಿಸಬಹುದು. 

7 /12

ತುಲಾ ರಾಶಿ : ತುಲಾ ರಾಶಿಯವರು ತಮ್ಮ ಊರು ಅಥವಾ ದೇಶದ ಹೊರಗಿನ ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.  ಕುಟುಂಬದಲ್ಲಿ ಸಂತೋಷ ಇರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.  

8 /12

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರ ತಾಯಿಯ ಆರೋಗ್ಯ ಸುಧಾರಿಸಲಿದೆ. ಭೂಮಿಯನ್ನು ಖರೀದಿಸಲು ಬಯಸಿದರೆ, ಕೆಲವು ದಿನಗಳವರೆಗೆ ಕಾಯಿರಿ.    ಇಲ್ಲದಿದ್ದರೆ ನೀವು ಅಂದುಕೊಂಡ ಹಾಗೆ ಏನೂ ನಡೆಯುವುದಿಲ್ಲ. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ.   

9 /12

ಧನು ರಾಶಿ :  ಧನು ರಾಶಿಯವರ ವ್ಯಕ್ತಿತ್ವವು ಉತ್ತಮಗೊಳ್ಳುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಸಹೋದರ-ಸಹೋದರಿಯರ ಸಂಬಂಧಗಳು ಬಲವಾಗಿರುತ್ತವೆ. ಆದರೆ ಅವರೊಂದಿಗೆ ಜಗಳವಾಡುವುದನ್ನು ಆದಷ್ಟು ತಪ್ಪಿಸಿ. ಖ್ಯಾತಿ ಮತ್ತು ಗೌರವವನ್ನು ಕಾಪಾಡಿಕೊಳ್ಳಲು, ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರಬೇಕು

10 /12

ಮಕರ ರಾಶಿ : ಈ ಅವಧಿಯಲ್ಲಿ ಮಕರ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಬೇಡಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ. 

11 /12

ಕುಂಭ ರಾಶಿ : ಆರೋಗ್ಯ ಸಂಬಂಧಿ ಸಮಸ್ಯೆಗಳು ಪರಿಹಾರವಾಗಲಿವೆ. ವಿದ್ಯಾರ್ಥಿಗಳು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಈ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಅಡೆತಡೆಗಳನ್ನು ನಿವಾರಿಸಬಹುದು. ಕಠಿಣ ಪರಿಶ್ರಮವು ಖಂಡಿತವಾಗಿಯೂ ಫಲ ನೀಡುತ್ತದೆ. 

12 /12

ಮೀನ ರಾಶಿ : ಮೀನ ರಾಶಿಯವರಿಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಹುದಿನಗಳ ಚಿಂತೆಯಿಂದ ಮುಕ್ತಿ ಸಿಗಲಿದೆ. ಕೈಗೆತ್ತಿಕೊಂಡ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗಲಿದೆ.