Anti Ageing Foods For Younger Skin: ಈ ಸುಕ್ಕುಗಳನ್ನು ನಿವಾರಿಸಲು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸಿದರೆ ಅಷ್ಟೇ ಸಾಕು.
Anti Ageing Foods For Younger Skin: ವಯಸ್ಸಾದಂತೆ ಚರ್ಮದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವುದು ಸಹಜ. ಆದರೆ, ಪ್ರಸ್ತುತ ಕಳಪೆ ಜೀವನ ಶೈಲಿಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮುಖದಲ್ಲಿ ಸುಕ್ಕು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಆದರೆ, ಈ ಸುಕ್ಕುಗಳನ್ನು ನಿವಾರಿಸಲು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸಿದರೆ ಅಷ್ಟೇ ಸಾಕು. ಸುಕ್ಕುಗಳನ್ನು ನಿವಾರಿಸಿ ಯಂಗ್ ಆಗಿ ಕಾಣಲು ಇಂದಿನಿಂದಲೇ ಈ ಆಹಾರಗಳನ್ನು ಸೇವಿಸಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದುಬಾರಿ ಸೌಂದರ್ಯವರ್ಧಕಗಳು ಮಾತ್ರವಲ್ಲ, ಆಂಟಿ ಏಜಿಂಗ್ ಆಹಾರಗಳ ಸೇವನೆಯಿಂದಲೂ ಕೂಡ ಮುಖದ ಮೇಲೆ ಕಾಣುವ ಸುಕ್ಕುಗಳನ್ನು ಸುಲಭವಾಗಿ ನಿವಾರಿಸಬಹುದು. ಮಾತ್ರವಲ್ಲ, ಈ ಆಹಾರಗಳ ಸೇವನೆಯಿಂದ ಕಾಂತಿಯುತವಾದ ಸುಂದರ ತ್ವಚೆ ನಿಮ್ಮದಾಗುತ್ತದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಉತ್ಕರ್ಷಣ ನಿರೋಧಕ ಆಹಾರವಗಿರುವ ಪರಂಗಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಖನಿಜಗಳು ಕಂಡು ಬರುತ್ತದೆ. ಇವು ಮುಖದ ಸುಕ್ಕುಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಿತ್ಯ ಬೆಳಿಗ್ಗೆ ಬ್ರೇಕ್ ಫಾಸ್ಟ್ ಸಮಯದಲ್ಲಿ ಪರಂಗಿ ಸೇವನೆಯಿಂದ ನಿರೀಕ್ಷಿತ ಫಲಿತಾಂಶ ಪಡೆಯಬಹುದು.
ಪ್ರೋಟೀನ್, ಖನಿಜಗಳು, ಫೈಟೊನ್ಯೂಟ್ರಿಯೆಂಟ್‌ಗಳು, ವಿಟಮಿನ್‌ಗಳು ಮತ್ತು ಫೈಬರ್‌ನಂತಹ ಪ್ರಮುಖ ಪೋಷಕಾಂಶಗಳು ಬೇಳೆಕಾಳುಗಳಲ್ಲಿ ಕಂಡುಬರುತ್ತವೆ. ಇದರ ಸೇವನೆಯಿಂದ ಚರ್ಮದ ಕೋಶಗಳು ಅಭಿವೃದ್ಧಿ ಹೊಂದುತ್ತವೆ. ಇದು ಮುಖದ ಸುಕ್ಕುಗಳನ್ನು ನಿವಾರಿಸಿ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಆವಕಾಡೊ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಕಂಡುಬರುತ್ತವೆ. ಇವು ಚರ್ಮದ ಆರೋಗ್ಯಕ್ಕೆ ಸಹಕಾರಿ ಆಗಿವೆ.
ಆರೋಗ್ಯದ ನಿಧಿ ಎಂದು ಪರಿಗಣಿಸಲಾಗಿರುವ ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿವೆ. ಪಾಲಕ್ ಸೇವನೆಯಿಂದ ತ್ವಚೆ ತೇವಾಂಶದಿಂದ ಕೂಡಿರುವುದರ ಜೊತೆಗೆ ಸುಕ್ಕುಗಳನ್ನು ಕೂಡ ನಿವಾರಿಸಬಲ್ಲದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.