Foods For Diabetic: ಈ ಆಹಾರಗಳ ಸೇವನೆಯಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು

Foods For Diabetic: ಕೆಲವು ಆಹಾರಗಳನ್ನು ನಿಮ್ಮ ನಿತ್ಯದ ಡಯಟ್ನಲ್ಲಿ ಸೇರಿಸುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...  

Foods For Diabetic: ಪ್ರಸ್ತುತ ಅತಿ ಚಿಕ್ಕ ವಯಸ್ಸಿನಲ್ಲಿಯೇ ಜನರು ಬಿಪಿ, ಶುಗರ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಒತ್ತಡ ಭರಿತ ಕೆಲಸ, ಕೆಟ್ಟ ಜೀವನ ಶೈಲಿ ಹೀಗೆ ಹಲವು ಕಾರಣಗಳಿವೆ. ಆದರೆ, ಕೆಲವು ಆಹಾರಗಳನ್ನು ನಿಮ್ಮ ನಿತ್ಯದ ಡಯಟ್ನಲ್ಲಿ ಸೇರಿಸುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನೇರಳೆ ಹಣ್ಣಿನಲ್ಲಿ ಫೈಬರ್, ವಿಟಮಿನ್‌ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡು ಬರುತ್ತವೆ. ಇದು ಬ್ಲಡ್ ಶುಗರ್ ನಿಯಂತ್ರಿಸಲು ಬಹಳ ಪ್ರಯೋಜನಕಾರಿ ಆಗಿದೆ.

2 /5

ಬಾದಾಮಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಕಂಡು ಬರುತ್ತವೆ. ಇದರಲ್ಲಿರುವ ಮೆಗ್ನೀಸಿಯಂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

3 /5

ಪ್ರೋಟೀನ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳ ಆಗರವಾಗಿರುವ ಚಿಯಾ ಸೀಡ್ಸ್ ಅನ್ನು ಸಾಮಾನ್ಯವಾಗಿ ತೂಕ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ. ಆದರೆ, ಇದು ಮಧುಮೇಹವನ್ನು ನಿಯಂತ್ರಿಸಲು ಕೂಡ ತುಂಬಾ ಪರಿಣಾಮಕಾರಿ ಆಗಿದೆ.

4 /5

ಸೊಪ್ಪು ತರಕಾರಿಗಳಲ್ಲಿ ಫೈಬರ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳು ಹೇರಳವಾಗಿ ಕಾನು ಬರುತ್ತವೆ. ಅದರಲ್ಲೂ ಪಾಲಕ್ ಸೊಪ್ಪು ಡಯಾಬಿಟಿಸ್ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿ ಆಗಿದೆ.

5 /5

ಸಾಮಾನ್ಯವಾಗಿ ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರು ಹೆಚ್ಚಾಗಿ ಓಟ್ಸ್ ಸೇವಿಸುತ್ತಾರೆ. ಆದರೆ, ಕಡಿಮೆ ಫೈಬರ್ ಆಹಾರವಾಗಿರುವ ಓಟ್ಸ್ ಡಯಾಬಿಟಿಸ್ ನಿಯಂತ್ರಣಕ್ಕೂ ಕೂಡ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.  ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.