12 ವರ್ಷಗಳ ನಂತರ ಈ ರಾಶಿಯವರ ಜೀವನದಲ್ಲಿ ಗುರು ದೆಸೆ! ಪ್ರತೀ ಕೆಲಸದಲ್ಲಿಯೂ ಸಿಗಲಿದೆ ಅದ್ಭುತ ಯಶಸ್ಸು

ಗುರುವಿನ ಸಂಚಾರದಿಂದ ಯಾವ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುವ ಸಾಧ್ಯತೆ ಇದೆ ನೋಡೋಣ.

ಬೆಂಗಳೂರು : ಪ್ರತಿಯೊಂದು ಗ್ರಹವು ತನ್ನದೇ ಆದ ನಿಗದಿತ ಸಮಯದಲ್ಲಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುತ್ತದೆ. 12 ವರ್ಷಗಳ ನಂತರ ದೇವಗುರು ಬೃಹಸ್ಪತಿ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾರೆ. ಏಪ್ರಿಲ್ 22 ರಂದು ಗುರು ಗ್ರಹದ ಸ್ಥಾನದಲ್ಲಿ ಆಗುವ ಬದಲಾವಣೆಯು ಈ ರಾಶಿಯವರ ಮೇಲೆ ಭಾರೀ ಪರಿಣಾಮ ಬೀರಲಿದೆ.  ಗುರುವಿನ ಸಂಚಾರದಿಂದ ಯಾವ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುವ ಸಾಧ್ಯತೆ ಇದೆ ನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಒಡೆಯ ಗುರು, ಏಪ್ರಿಲ್ 22 ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಮೇಷ ರಾಶಿಯವರು ಏನೇ ಕೆಲಸ ಮಾಡಿದರೂ ನೀವು ಬಯಸುವ ಫಲಿತಾಂಶವೇ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಈ ಅವಧಿಯಲ್ಲಿ ಬಡ್ತಿ ಸಿಗಲಿದೆ.  ವ್ಯಾಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸಲಿದ್ದಾರೆ. ಅವಿವಾಹಿತರಿಗೆ ವಿವಾಹ ಸಂಬಂಧ ಮಾತುಕತೆ ಸಫಲವಾಗಲಿದೆ.   

2 /3

ಕರ್ಕಾಟಕ ರಾಶಿ : ಗುರುವಿನ ಈ ಸಂಚಾರವು ಕರ್ಕಾಟಕ ರಾಶಿಯವರಿಗೂ ಮಂಗಳಕರವೆಂದು ಸಾಬೀತಾಗಲಿದೆ.  ಕರ್ಕಾಟಕ ರಾಶಿಯವರ ಜಾತಕದಲ್ಲಿ ಗುರುವಿನ ಸಂಕ್ರಮಣ ವು ಕಾರ್ಯದ ಮನೆಯಲ್ಲಿ ನಡೆಯಲಿದೆ. ಹಾಗಾಗಿ ಈ ಸಮಯದಲ್ಲಿ ಆರ್ಥಿಕ ಲಾಭವಾಗಲಿದೆ. ವೃತ್ತಿಜೀವನಕ್ಕೆ ಕಾಲಿಡುವವರಿಗೆ ಈ ಸಮಯ ಅದ್ಭುತವಾಗಿರಲಿದೆ. ನೀವು ಬಯಸುವ ಉದ್ಯೋಗ ಸಿಗಲಿದೆ. ವ್ಯಾಪಾರಸ್ಥರಿಗೂ ಉತ್ತಮ ಲಾಭವಾಗಲಿದೆ. 

3 /3

ಮೀನ ರಾಶಿ :ಗುರುವಿನ ಸಂಕ್ರಮಣವು ಮೀನ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಈ ಸಂಕ್ರಮಣ ನಡೆಯಲಿದೆ. ಇದನ್ನು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಹೇಳಲಾಗುತ್ತದೆ. ಈ ಹೊತ್ತಿನಲ್ಲಿ ಹಠಾತ್ ವಿತ್ತೀಯ ಲಾಭವಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)