Tatkal Ticket Booking Tricks: ದೃಢೀಕೃತ ರೈಲು ಟಿಕೆಟ್‌ಗಳನ್ನು ಪಡೆಯಲು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವಾಗ ಕೆಲವು ತಂತ್ರಗಳು ತುಂಬಾ ಸಹಾಯಕವಾಗಿವೆ.
Tatkal Ticket Booking Tips For Confirmed Train Ticket: ನೀವು ರೈಲಿನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡುತ್ತಿದ್ದರೆ ಕೆಲವು ಸುಲಭ ಟಿಪ್ಸ್ ಅನುಸರಿಸಿದರೆ ದೃಢೀಕೃತ ಟಿಕೆಟ್ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತೀಯ ರೈಲ್ವೆ ಸುಖಕರ, ಆನಂದದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿದೆ. ಆದರೆ, ಹಬ್ಬಗಳ ಋತುವಿನಲ್ಲಿ ದೂರದ ಊರುಗಳಿಗೆ ಪ್ರಯಾಣಿಸಲು ಕನ್ಫರ್ಮ್ ಟಿಕೆಟ್ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ.
ಆಕಸ್ಮಿಕ ಅಥವಾ ತಕ್ಷಣದ ಪ್ರಯಾಣಕ್ಕಾಗಿ ರೈಲಿನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಅವಕಾಶವಿದೆ. ಆದರೂ, ಇದರಲ್ಲಿಯೂ ದೃಢೀಕೃತ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿರುವುದಿಲ್ಲ.
ಆದಾಗ್ಯೂ, ನೀವು ತತ್ಕಾಲ್ ಟಿಕೆಟ್ ಬುಕಿಂಗ್ ವೇಳೆ ಕೆಲವು ಟಿಪ್ಸ್ ಅನುಸರಿಸಿದರೆ ಸುಲಭವಾಗಿ ಕನ್ಫರ್ಮ್ ರೈಲು ಟಿಕೆಟ್ ಪಡೆಯಬಹುದು.
ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ: ನೀವು ರೈಲು ಪ್ರಯಾಣಕ್ಕಾಗಿ ತತ್ಕಾಲ್ ಟಿಕೆಟ್ ಕಾಯ್ದಿರಿಸುವ ಮೊದಲು, ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಬೇಕು. ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಹೆಚ್ಚು ದ ಸಮಯ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ನಿಮ್ಮ ಇಂಟರ್ನೆಟ್ ಸಂಪರ್ಕದಿಂದಾಗಿ ಅಡ್ಡಿಯಾದರೆ ಕನ್ಫರ್ಮ್ ಟಿಕೆಟ್ ಪಡೆಯುವುದು ಕಷ್ಟಕರವಾಗುತ್ತದೆ.
ಲಾಗಿನ್ ಮಾಡಲು ಸರಿಯಾದ ಸಮಯ ಯಾವುದು? ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಸರಿಯಾದ ಸಮಯಕ್ಕೆ ಲಾಗಿನ್ ಆಗುವುದು ಅತ್ಯಗತ್ಯ. ಎಸಿ ಕೋಚ್‌ಗಳಿಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮತ್ತು ಸ್ಲೀಪರ್ ಕೋಚ್‌ಗಳಿಗೆ ಬೆಳಿಗ್ಗೆ 11 ಗಂಟೆಗೆ ತತ್ಕಾಲ್ ಬುಕಿಂಗ್ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬುಕಿಂಗ್ ಪ್ರಾರಂಭವಾಗುವ 2-3 ನಿಮಿಷಗಳ ಮೊದಲು ನೀವು ಲಾಗಿನ್ ಆಗಬೇಕು.
ಮಾಸ್ಟರ್ ಪಟ್ಟಿ ಸಿದ್ಧತೆ: ಐಆರ್‌ಸಿಟಿಸಿ (IRCTC) ತನ್ನ ಗ್ರಾಹಕರಿಗೆ ಮಾಸ್ಟರ್ ಲಿಸ್ಟ್ ಎಂಬ ವಿಶೇಷ ವೈಶಿಷ್ಟ್ಯವನ್ನು ನೀಡುತ್ತದೆ, ಇದರಲ್ಲಿ ಅವರು ಬುಕ್ ಮಾಡುವ ಮೊದಲು ಪ್ರಯಾಣಿಕರ ಎಲ್ಲಾ ವಿವರಗಳನ್ನು ಭರ್ತಿ ಮಾಡಬಹುದು. ಬುಕ್ಕಿಂಗ್ ಮಾಡುವಾಗ ಇದು ನಿಮ್ಮ ಸಮಯವನ್ನು ಉಳಿಸಲು ಹಾಗೂ ದೃಢೀಕರಣ ಟಿಕೆಟ್ ಪಡೆಯಲು ಪ್ರಯೋಜನಕಾರಿ ಆಗಿದೆ.
ಯುಪಿಐ ಪಾವತಿ: ನೀವು ರೈಲಿನ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯದಲ್ಲಿ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬದಲಿಗೆ ಯುಪಿಐ ಪಾವತಿ ಮಾಡುವುದರಿಂದ ಶೀಘ್ರದಲ್ಲೇ ಟಿಕೆಟ್ ಬುಕ್ ಆಗುತ್ತದೆ. ಇದರಿಂದ ದೃಢೀಕೃತ ಟಿಕೆಟ್ ಪಡೆಯಬಹುದು.
ಆಯ್ಕೆಗಳ ಅನ್ವೇಷಣೆ: ನೀವು ಎರಡು ನಗರಗಳ ನಡುವೆ ಪ್ರಯಾಣಿಸಬೇಕಾದರೆ, ದೀರ್ಘ ಪ್ರಯಾಣದ ರೈಲುಗಳ ಬದಲಿಗೆ ಈ ನಿಲ್ದಾಣಗಳ ನಡುವಿನ ರೈಲುಗಳಲ್ಲಿ ಟಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬುಕಿಂಗ್ ಮಾಡುವ ಮೊದಲು, ನೀವು ತತ್ಕಾಲ್ ಟಿಕೆಟ್‌ಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿರುವ ರೈಲುಗಳನ್ನು ಆಯ್ಕೆ ಮಾಡಬೇಕು. ಇದರಿಂದ ಖಂಡಿತವಾಗಿಯೂ ನೀವು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವಾಗ ದೃಢೀಕೃತ ಟಿಕೆಟ್ ಪಡೆಯಬಹುದು.