Foods to avoid : ಖಾಲಿ ಹೊಟ್ಟೆಯಲ್ಲಿ ಈ ಆಹಾರವನ್ನು ಸೇವಿಸುವ ತಪ್ಪು ಯಾವತ್ತು ಮಾಡಬೇಡಿ

ಆರೋಗ್ಯವಾಗಿರುವ ಸಲುವಾಗಿ ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಎಷ್ಟು ಮುಖ್ಯವೋ ಯಾವ ಸಮಯದಲ್ಲಿ ಸೇವಿಸುತ್ತೇವೆ ಎನ್ನುವುದು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಕೆಲ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. 

ನವದೆಹಲಿ : ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ಹಸಿವಾಗುತ್ತಿದ್ದರೆ,  ಏನು ಸಿಗುತ್ತದೋ ಅದನ್ನು ತಿಂದು ಬಿಡುವ ಅಭ್ಯಾಸವಿರುತ್ತದೆ.  ಇನ್ನು ಕೆಲವರಿಗೆ ಖಾಲಿ ಹೊಟ್ಟೆಗೆ ಚಹಾ, ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ನೆನೆಪಿಡಿ, ಇಂಥಹ ಅಭ್ಯಾಸಗಳು ಆರೋಗ್ಯವನ್ನು ಹಾಳು ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ನೀವು ಏನು ಸೇವಿಸುತ್ತೀರಿ ಅದರ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಬೀಳುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಏನು ತಿನ್ನಬಾದರು ಎಂಬ ಮಾಹಿತಿ ಇಲ್ಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸಿಟ್ರಸ್ ಹಣ್ಣುಗಳು : ಕಿತ್ತಳೆ , ಮೋಸಂಬಿ, ಪೇರಳೆಯಂಥಹ ಹಣ್ಣುಗಳು ಹೊಟ್ಟೆಯಲ್ಲಿ ಆಸಿಡ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಜಠರದುರಿತ ಮತ್ತು ಗ್ಯಾಸ್ಟ್ರಿಕ್ ರೋಗಗಳ ಅಪಾಯ ಹೆಚ್ಚುತ್ತದೆ. ಈ ಹಣ್ಣುಗಳಲ್ಲಿ ಫೈಬರ್ ಮತ್ತು ಫ್ರಕ್ಟೋಸ್ ಕೂಡ ಅಧಿಕವಾಗಿರುತ್ತದೆ. ಈ ಕಾರಣದಿಂದಾಗಿ, ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣ ಕ್ರಿಯೆ ನಿಧಾನವಾಗುತ್ತದೆ.  

2 /5

ಅನೇಕರಿಗೆ  ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ  ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ನಿಮಗೂ ಈ ಅಭ್ಯಾಸವಿದ್ದರೆ ಅದನ್ನು ತಕ್ಷಣ ಬಿಟ್ಟು ಬಿಡಿ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಎದುರಾಗುತ್ತದೆ.  ಏಕೆಂದರೆ ಇದನ್ನು ಕುಡಿದ ನಂತರ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆ ಶುರುವಾಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ. 

3 /5

ಹಸಿ ತರಕಾರಿಗಳನ್ನು ಬೆರೆಸಿ ತಯಾರಿಸಿದ ಸಲಾಡ್ ಬೆಳಗಿನ ಉಪಾಹಾರಕ್ಕಿಂತ ಮಧ್ಯಾಹ್ನದ ಊಟಕ್ಕೆ ಉತ್ತಮವಾಗಿರುತ್ತದೆ.  . ಹಸಿ  ತರಕಾರಿಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿನಾಮ ಬೀರುತ್ತದೆ. 

4 /5

ಖಾಲಿ ಹೊಟ್ಟೆಯಲ್ಲಿ ಮೆಣಸು ಮತ್ತು ಮಸಾಲೆಯುಕ್ತ ವಸ್ತುಗಳನ್ನು ತಿನ್ನುವುದರಿಂದ stomach liningನಲ್ಲಿ  ಉರಿ ಕಾಣಿಸಿಕೊಳ್ಳುತ್ತದೆ. ಖಾಲಿ ಹೊಟ್ಟೆಯಲ್ಲಿ ಹೆಚ್ಚು ಖಾರವಾಗಿರುವ ಆಹಾರ ಸೇವಿಸುವುದರಿಂದ, ಆಸಿದಿಕಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗೂ ಕಾರಣವಾಗುತ್ತದೆ.   

5 /5

ಇನ್ನುಕೆಲವರಿಗೆ ಬೆಳಿಗ್ಗೆ ಬರೀ ಹಣ್ಣಿನ ರಸ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಖಾಲಿ ಹೊಟ್ಟೆಗೆ  ಹಣ್ಣಿನ ರಸ ತೆಗೆದುಕೊಂಡರೆ, ಮೇದೋಜ್ಜೀರಕ ಗ್ರಂಥಿಯ ಮೇಲಿನ ಹೊರೆ ಹೆಚ್ಚಾಗುತ್ತದೆ. ಮತ್ತು ಹಣ್ಣಿನಲ್ಲಿರುವ ಫ್ರಕ್ಟೋಸ್ ಯಕೃತ್ತಿನ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ, ಖಾಲಿ ಹೊಟ್ಟೆಗೆ ಹಣ್ಣಿನ ರಸವನ್ನು ಕುಡಿಯುವುದರಿಂದ ಮಧುಮೇಹದ  ಅಪಾಯ ಕೂಡಾ ಕಂಡುಬರುತ್ತದೆ.