Easy Hacks : ಚಹಾ ಮತ್ತು ಎಣ್ಣೆ ಕಲೆಗಳನ್ನು ತೆಗೆಯಲು ಇಲ್ಲಿದೆ ಸುಲಭ ಉಪಾಯ

ಮನೆಯಲ್ಲಿಯೇ ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ಬಟ್ಟೆಗಳ ಮೇಲಾಗುವ ಹಠಮಾರಿ ಕಲೆಗಳನ್ನು ತೆಗೆದುಹಾಕಬಹುದು. 
 

ನವದೆಹಲಿ :  How To Remove Stains From Clothes: ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ಬಟ್ಟೆಯ ಮೇಲೆ ಕಲೆಗಳಾಗುವುದು ಸಾಮಾನ್ಯ. ಆದರೆ ಆ ಕಲೆಗಳನ್ನು ತೆಗೆಯಲು ಹರ ಸಾಹಸ ಪಡಬೇಕಾಗುತ್ತದೆ. ಬಟ್ಟೆಯ ಮೇಲೆ  ಚಹಾ ಅಥವಾ ಎಣ್ಣೆಯ ಕಲೆಗಳಾದರೆ ಅದನ್ನು ಕ್ಲೀನ್ ಮಾಡುವುದೇ ದೊಡ್ಡ ಕೆಲಸ. ಆದರೆ ಈ ಹಟಮಾರಿ ಕಲೆಗಳನ್ನು ಕೂಡಾ ಸುಲಭವಾಗಿ ತೆಗೆದು ಹಾಕಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಮನೆಯಲ್ಲಿಯೇ ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ಬಟ್ಟೆಗಳ ಮೇಲಾಗುವ ಹಠಮಾರಿ ಕಲೆಗಳನ್ನು ತೆಗೆದುಹಾಕಬಹುದು. ಇಲ್ಲಿ ನಾವು ಹೇಳುವ ವಸ್ತುಗಳನ್ನು ಬಳಸಿದರೆ ಬಟ್ಟೆಯ ಮೇಲಿನ ಕಲೆಗಳನ್ನು ಸುಲಭವಾಗಿ ತೊಡೆದು ಹಾಕಬಹುದು. 

2 /5

ಸುಟ್ಟ ಪಾತ್ರೆಗಳನ್ನು ಸ್ವಚಗೊಳಿಸಲು ಅಥವಾ ಬಟ್ಟೆಗಳ ಮೇಲೆ ಚಹಾ ಮತ್ತು ಎಣ್ಣೆಯ ಕಲೆಗಳನ್ನು ತೆಗೆದುಹಾಕಬೇಕಾದರೆ ಅದರ ಮೇಲೆ ಬೇಕಿಂಗ್ ಸೋಡಾವನ್ನು ಸಿಂಪಡಿಸಿ. ನಂತರ ಬಟ್ಟೆಯನ್ನು ನೀರಿನಿಂದ ಸ್ವಚಗೊಳಿಸಿ.  ಹೀಗೆ ಮಾಡಿದರೆ ಎಲ್ಲಾ ರೀತಿಯ ಕಲೆಗಳನ್ನು ತಕ್ಷಣ ತೆಗೆದುಹಾಕಬಹುದು. ಒಂದು ವೇಳೆ, ಅಡಿಗೆ ಸೋಡಾದಿಂದ  ಕಲೆ ಹೋಗದಿದ್ದರೆ ಅಡುಗೆ ಸೋಡಗೆ ಸ್ವಲ್ಪ ವಿನೆಗರ್ ಬೆರೆಸಿ ಆ ದ್ರಾವಣದಿಂದ ಬಟ್ಟೆ ಸ್ವಚಗೊಳಿಸಿ.   

3 /5

ಬಟ್ಟೆಯ ಮೇಲಿನ ಯಾವುದೇ ರೀತಿಯ ಕಲೆಗಳನ್ನು ತೆಗೆದುಹಾಕಲು ನಿಂಬೆ ರಸ ತುಂಬಾ ಪ್ರಯೋಜನಕಾರಿ. ಕಲೆಯಾದ ಜಾಗದಲ್ಲಿ ನಿಂಬೆಯನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಕಲೆಗಳು ಮಾಯವಾಗುತ್ತದೆ. ಚಹಾದ ಕಲೆಯ ಮೇಲೆ ಮೊಸರು ಹಾಕಿ ಸ್ವಲ್ಪ ಹೊತ್ತು ಬಿಟ್ಟು, ಬ್ರಷ್‌ನಿಂದ ಸ್ವಚ್ಚಗೊಳಿಸಿದರೆ ಕಲೆ ಮಾಯವಾಗುತ್ತದೆ.  

4 /5

ಕಾರ್ನ್ ಸ್ಟಾರ್ಚ್ ಸಹಾಯದಿಂದಲೂ, ಬಟ್ಟೆಗಳ ಮೇಲಿನ ಕಲೆಗಳನ್ನು ತೆಗೆದುಹಾಕಬಹುದು. ಕಾರ್ನ್  ಸ್ಟಾರ್ಚ್ ಮತ್ತು ಡಿಟರ್ಜೆಂಟ್ ಪೌಡರ್ ದ್ರಾವಣವನ್ನು ತಯಾರಿಸಿ. ನಂತರ ಕಲೆಯಾದ ಬಟ್ಟೆಯನ್ನು ಈ ದ್ರಾವಣದಲ್ಲಿ ಅದ್ದಿ ಸ್ವಲ್ಪ ಹೊತ್ತು ಬಿಡಿ. ನಂತರ ಬ್ರಷ್‌ನಿಂದ ತಿಕ್ಕಿ. ಈ ಪ್ರಕ್ರಿಯೆಯನ್ನು 1-2 ಬಾರಿ ಪುನರಾವರ್ತಿಸುವುದರಿಂದ ಕಲೆ ಹೋಗಿಬಿಡುತ್ತದೆ. 

5 /5

ಕಲೆಗಳನ್ನು ತೆಗೆದುಹಾಕಲು ರಬ್ಬಿಂಗ್ ಆಲ್ಕೋಹಾಲ್ ಕೂಡಾ ಬಳಸಬಹುದು.  ಅಂದರೆ ಐಸೊಪ್ರೊಪಿಲ್ ಆಲ್ಕೋಹಾಲ್ (Isopropyl Alcohol), ಬಟ್ಟೆಯ ಕಲೆಗಳನ್ನು ತೆಗೆದುಹಾಕಲು ಅತ್ಯಂತ ಪರಿಣಾಮಕಾರಿ. ಕಲೆಯಾದ ಜಾಗದಲ್ಲಿ ರಬ್ಬಿಂಗ್ ಆಲ್ಕೋಹಾಲ್  ಹಾಕಿ ಸ್ವಲ್ಪ ಸಮಯದವರೆಗೆ ಬಿಡಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಚಗೊಳಿಸಿದರೆ ಕಲೆ ಸುಲಭವಾಗಿ ಮಾಯವಾಗುತ್ತದೆ.