ವೆಯಿಟ್ ಲಾಸ್ ಡಯಟ್ ನಲ್ಲಿ ಸೂಪ್ ಮತ್ತು ಸಲಾಡ್‌ಗಳನ್ನು ಸೇರಿಸಿದಾಗ, ಇದು ಆರೋಗ್ಯಕರ ಎಂದು ಭಾವಿಸಿರಬಹುದು. ಆದರೆ, ತಜ್ಞರು ಅದರ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ.
ನವದೆಹಲಿ : ಸೂಪ್ ಮತ್ತು ಸಲಾಡ್ ಅನ್ನು ಪೋಷಣೆಯ ಏಕೈಕ ಮೂಲವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ತೂಕ ಇಳಿಸುವ ಡಯಟ್ ನಲ್ಲಿದ್ದಾಗ, ಹಸಿವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಈ ಸಂದರ್ಭಗಳಲ್ಲಿ ಅನೇಕ ಬಾರಿ, ಸಲಾಡ್ ಮತ್ತು ಸೂಪ್ ಅನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಸಲಾಡ್‌ಗಳು ಮತ್ತು ಸೂಪ್‌ಗಳು ನಿಜವಾಗಿಯೂ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆಯೇ? ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ವೆಯಿಟ್ ಲಾಸ್ ಡಯಟ್ ನಲ್ಲಿ ಸೂಪ್ ಮತ್ತು ಸಲಾಡ್‌ಗಳನ್ನು ಸೇರಿಸಿದಾಗ, ಇದು ಆರೋಗ್ಯಕರ ಎಂದು ಭಾವಿಸಿರಬಹುದು. ಆದರೆ, ತಜ್ಞರು ಅದರ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ತೂಕ ಇಳಿಸುವ ವಿಚಾರ ಬಂದಾಗ ಕೇವಲ ಸೂಪ್ ಮತ್ತು ಸಲಾಡ್ ಮಾತ್ರ ಆಯ್ಕೆಯಾಗಿರಬಾರದು ಎಂದು ತಜ್ಞರು ಹೇಳುತ್ತಾರೆ.
ಪೌಷ್ಠಿಕಾಂಶ ತಜ್ಞರು, ಸಲಾಡ್‌ಗಳು ಮತ್ತು ಸೂಪ್‌ಗಳನ್ನು ಡಯಟ್ ವೇಳೆ ಮುಖ್ಯ ಆಹಾರಗಳಾಗಿ ಸೇರಿಸಲು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಇದು ಸಮತೋಲಿತ ಡಯಟ್ ಆಗಿರುವುದಿಲ್ಲ. ತಜ್ಞರ ಪ್ರಕಾರ, ನೀವು ಇದನ್ನು ಬೆಳಗಿನ ಉಪಾಹಾರದಲ್ಲಿ ಅಥವಾ ರಾತ್ರಿಯ ಊಟದಲ್ಲಿ ತೆಗೆದುಕೊಳ್ಳಬಹುದು. ಊಟದಲ್ಲಿ, ನೀವು ಅಕ್ಕಿ ಅಥವಾ ಗೋಧಿ, ಜೋಳ ಅಥವಾ ರಾಗಿಗಳಿಂದ ಮಾಡಿದ ರೊಟ್ಟಿ ಮುಂತಾದ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಬೇಕು. ಮಶ್ರೂಮ್ ಸೂಪ್, ಬ್ರೊಕೋಲಿ ಸೂಪ್ ಅಥವಾ ಮಿಶ್ರಿತ ತರಕಾರಿ ಸೂಪ್ ಉತ್ತಮ ಆಯ್ಕೆಗಳಾಗಿವೆ. ಆದರೆ, ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸುವುದಾದರೆ ನಿಮ್ಮ ಆಹಾರದಲ್ಲಿ ಸಕ್ಕರೆ, ಜೇನು, ಜೋಳ ಮತ್ತು ಬೆಣ್ಣೆಯನ್ನು ತಪ್ಪಿಸಬೇಕಾಗುತ್ತದೆ. ಏಕೆಂದರೆ ಅವುಗಳಲ್ಲಿ ಕ್ಯಾಲೊರಿಗಳ ಪ್ರಮಾಣವು ಅಧಿಕವಾಗಿರುತ್ತದೆ.
ಸೂಪ್ ಅನ್ನು ಆರೋಗ್ಯಕರವಾಗಿಸಲು, ಅದಕ್ಕೆ corn starch ಸೇರಿಸಬೇಡಿ. ಸಕ್ಕರೆ ಬಳಸದೆ ಸೂಪ್ ಕುಡಿಯಿರಿ. ಆದರೆ ನೆನಪಿರಲಿ ಅದರಲ್ಲಿ ಸಾಕಷ್ಟು ತರಕಾರಿಗಳಿರಬೇಕು. ಅದರಲ್ಲಿ ನಟ್ಸ್ , ಸೀಡ್ಸ್ ಮತ್ತು ಇತರ ಆರೋಗ್ಯಕರ ಕೊಬ್ಬುಗಳನ್ನು ಸೇರಿಸಿ. ಅಲ್ಲದೆ ಇದರಲ್ಲಿ ಪ್ರೋಟೀನ್ ಮೂಲ ಹೊಂದಿರುವುದು ಕೂಡಾ ಮುಖ್ಯ. ಆದ್ದರಿಂದ ಅದಕ್ಕೆ ಬೀನ್ಸ್, ಬೇಳೆ, ಸೋಯಾ ಪನೀರ್ ಸೇರಿಸಿ.
ಸಲಾಡ್ ಆರೋಗ್ಯಕರವಾಗಿಸಲು, ಅದಕ್ಕೆ ಪನೀರ್, ಸಾಯ ಪನೀರ್ ಮತ್ತು ಸೋಯಾ ಚಂಕ್ ಗಳನ್ನು ಸೇರಿಸಬಹುದು. ಈ ರೀತಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ಸಿಗುತ್ತದೆ.
ತಜ್ಞರ ಪ್ರಕಾರ, ತೂಕ ನಷ್ಟಕ್ಕೆ ಸಲಾಡ್ ಮತ್ತು ಸೂಪ್ ಗಳನ್ನು ಮಾತ್ರ ಅವಲಂಬಿಸುವುದು ಸರಿಯಲ್ಲ. ಇವು ಆರೋಗ್ಯಕರ ಮತ್ತು ಪೌಷ್ಟಿಕಾಂಶದ ವಸ್ತುಗಳು. ಆದರೆ ಕೇವಲ ಇದನ್ನೇ ಅವಲಂಬಿಸುವುದು ಸರಿಯಲ್ಲ.