Honey Lemon Water: ತೂಕ ನಷ್ಟಕ್ಕೆ ಹೆಚ್ಚಾಗಿ ಜೇನುತುಪ್ಪ ಮತ್ತು ನಿಂಬೆ ನೀರನ್ನು ಶಿಫಾರಸು ಮಾಡಲಾಗುತ್ತದೆ. ಅನೇಕ ಬಾರಿ ಜನರು ಇದನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಅದರ ನಕಾರಾತ್ಮಕ ಪರಿಣಾಮದ ಬಗ್ಗೆ ಹಲವರಿಗೆ ತಿಳಿದಿರುವುದಿಲ್ಲ. ವಾಸ್ತವವಾಗಿ, ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಮತ್ತು ನಿಂಬೆ ರಸ ಬೆರೆಸಿದ ನೀರು ಕುಡಿಯುವುದರಿಂದ ನಿಮಗೆ ಹಾನಿಯೂ ಉಂಟಾಗಬಹುದು. ನಿಮ್ಮ ತೂಕವು ಕಡಿಮೆಯಾಗುವ ಬದಲು ಅಧಿಕವಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ನಿಂಬೆ ಮತ್ತು ಜೇನುತುಪ್ಪ ಬೆರೆಸಿದ ನೀರು ಆಮ್ಲೀಯವಾಗಿದೆ ಮತ್ತು ನಾವು ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದಾಗ ಅದು ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ಜೇನುತುಪ್ಪದಲ್ಲಿ ಸಕ್ಕರೆಯ ಪ್ರಮಾಣ ಹಲವು ಪಟ್ಟು ಅಧಿಕವಾಗಿರುತ್ತದೆ. ನೀವು ಈ ಜೇನುತುಪ್ಪವನ್ನು ಬಳಸಿದರೆ, ಅದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ತಯಾರಿಸಲಾಗುತ್ತದೆ ಮತ್ತು ತೂಕವು ಕಡಿಮೆಯಾಗುವ ಬದಲು ಹೆಚ್ಚಾಗಲು ಆರಂಭವಾಗುತ್ತದೆ. ಇದನ್ನೂ ಓದಿ- Almonds During Pregnancy: ಗರ್ಭಿಣಿಯರು ಬಾದಾಮಿ ತಿನ್ನಬೇಕೇ? ಬೇಡವೇ? ಈ ವಿಷಯಗಳನ್ನು ತಪ್ಪದೇ ತಿಳಿಯಿರಿ
ಖಾಲಿ ಹೊಟ್ಟೆಯಲ್ಲಿ ನಿಂಬೆ (Lemon) ಮತ್ತು ಜೇನಿನ ನೀರು ಕುಡಿಯುವುದರಿಂದ ಹಲ್ಲಿನ ದಂತಕವಚ ಹಾಳಾಗುತ್ತದೆ. ಇದು ಹಲ್ಲುಗಳಲ್ಲಿ ಸೂಕ್ಷ್ಮತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದನ್ನೂ ಓದಿ- Beauty Tips: ನಿಮ್ಮ ಮುಖದ ಕಾಂತಿಗೆ ಮಾಂತ್ರಿಕ ಟಾನಿಕ್ ಆಗಲಿದೆ ಒಂದು ಹಾಗಲಕಾಯಿ
ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದೆ, ಇದು ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡಬಹುದು. ಖಾಲಿ ಹೊಟ್ಟೆಯಲ್ಲಿ ನಿಂಬೆ ಮತ್ತು ಜೇನುತುಪ್ಪದ (Honey) ನೀರಿನ ಸೇವನೆಯು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನೀವು ದಣಿದಂತೆ ಭಾಸವಾಗಬಹುದು ಮತ್ತು ಹಲವು ಬಾರಿ ಇದು ದೇಹ ಮತ್ತು ಮುಖದಲ್ಲಿ ಊತವನ್ನು ಉಂಟುಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಮತ್ತು ಜೇನುತುಪ್ಪದ ನೀರನ್ನು ಕುಡಿಯುವುದರಿಂದ ಕೆಲವೊಮ್ಮೆ ಎದೆ ಮತ್ತು ಹೊಟ್ಟೆ ಉರಿಯುವುದರೊಂದಿಗೆ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ದಿನಚರಿಗೆ ಈ ಪಾನೀಯವನ್ನು ಸೇರಿಸುವ ಮೊದಲು, ತಜ್ಞರ ಸಲಹೆ ಪಡೆಯಿರಿ.