ಆಧಾರ್ ಗೆ ಸಂಬಂಧಿಸಿದಂತೆ ಈ ಐದು ವಿಚಾರಗಳ ಬಗ್ಗೆ ನಿರ್ಲಕ್ಷ್ಯ ಬೇಡ


 ಯುಐಡಿಎಐನಿಂದ ಕಾಲಕಾಲಕ್ಕೆ ಸಲಹೆಗಳನ್ನು ನೀಡಲಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಯಾವಾಗಲೂ ಆಧಾರ್‌ನಲ್ಲಿ ಅಪ್‌ಡೇಟ್ ಮಾಡಿ. 

ನವದೆಹಲಿ : Aadhaar Alert : ವಂಚನೆ ಪ್ರಕರಣಗಳು ಆಧಾರ್ ಕಾರ್ಡ್ ಮೂಲಕವೂ ಮುನ್ನೆಲೆಗೆ ಬರುತ್ತಿವೆ. ಈ ನಿಟ್ಟಿನಲ್ಲಿ, ಆಧಾರ್ ನೀಡುವ ಸಂಸ್ಥೆ ಯುಐಡಿಎಐ ಕಾಲಕಾಲಕ್ಕೆ ಎಚ್ಚರಿಕೆಗಳನ್ನು ನೀಡುತ್ತದೆ. ಅನೇಕ ರೀತಿಯ ಡಿಜಿಟಲ್ ವಹಿವಾಟುಗಳನ್ನು ಈಗ ಆಧಾರ್ ಸಂಖ್ಯೆಯ ಮೂಲಕವೂ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಜಾಗರೂಕರಾಗಿರುವುದು ಅತಿ ಅಗತ್ಯವಾಗಿದೆ. ಆಧಾರ್ ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಕೂಡ ಒಳಗೊಂಡಿದೆ. ಆದ್ದರಿಂದ, ವಂಚನೆಯನ್ನು ತಪ್ಪಿಸಲು, ಆಧಾರ್ ಕಾರ್ಡ್ ಹೊಂದಿರುವವರು ಕೆಲವು ವಿಶೇಷ ವಿಷಯಗಳನ್ನು ಪರಿಗಣಿಸಬೇಕು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಯುಐಡಿಎಐನಿಂದ ಕಾಲಕಾಲಕ್ಕೆ ಸಲಹೆಗಳನ್ನು ನೀಡಲಾಗುತ್ತದೆ. ಅವರ ಪ್ರಕಾರ, ಇ-ಆಧಾರ್ ಅನ್ನು ಡೌನ್ಲೋಡ್ ಮಾಡಲು ಇಂಟರ್ ನೆಟ್ ಕೆಫೆ ಅಥವಾ ಕಿಯೋಸ್ಕ್‌ನಲ್ಲಿ ಸಾರ್ವಜನಿಕ ಕಂಪ್ಯೂಟರ್ ಅನ್ನು ಎಂದಿಗೂ ಬಳಸಬಾರದು. ಉಚಿತ ವೈಫೈ ಅಥವಾ ಸಾರ್ವಜನಿಕ ವೈಫೈ ಬಳಸದಿರಲು ಪ್ರಯತ್ನಿಸಿ.  

2 /5

 ಆಧಾರ್ ಒಟಿಪಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇದು ವಂಚನೆಗೆ ಪ್ರಮುಖ ಕಾರಣವಾಗಬಹುದು. ವೈಯಕ್ತಿಕ ವಿವರಗಳನ್ನು ಯಾರಿಗೂ ನೀಡಬೇಡಿ. ಸಾಮಾನ್ಯವಾಗಿ, KYC ಅಪ್ಡೇಟ್ ಹೆಸರಿನಲ್ಲಿ, ವಂಚಕರು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವೈಯಕ್ತಿಕ ವಿವರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುವುದು ನೆನೆಪಿರಲಿ. 

3 /5

ನಿಮ್ಮ ಮೊಬೈಲ್ ಸಂಖ್ಯೆಯನ್ನು ಯಾವಾಗಲೂ ಆಧಾರ್‌ನಲ್ಲಿ ಅಪ್‌ಡೇಟ್ ಮಾಡಿ. ಆಧಾರ್ ಲಿಂಕ್ಡ್ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯೊಂದಿಗೆ ಯಾವುದೇ ಸಂದೇಹಗಳಿದ್ದಲ್ಲಿ, ಆಧಾರ್ ವೆಬ್‌ಸೈಟ್ https://resident.uidai.gov.in/verify-email-mobile ಗೆ ಭೇಟಿ ನೀಡುವ ಮೂಲಕ ಅದನ್ನು ತಕ್ಷಣವೇ ವೆರಿಫೈ ಮಾಡಿಕೊಳ್ಳಿ.   

4 /5

ಈಗ 16 ಅಂಕಿಯ ಆಧಾರ್ ಸಂಖ್ಯೆಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಬದಲಾಗಿ ನೀವು ವಿಐಡಿ (ವರ್ಚುವಲ್ ಐಡಿ) ಅಥವಾ ಮಾಸ್ಕ್ದ್ ಆಧಾರ್ ಅನ್ನು ಬಳಸಬಹುದು. 

5 /5

 UIDAI ಎಂದಿಗೂ ಆಧಾರ್ OTP ಮಾಹಿತಿಗಾಗಿ ಫೋನ್, SMS ಅಥವಾ ಇಮೇಲ್ ಕಳುಹಿಸುವುದಿಲ್ಲ. ಹಾಗಾಗಿ ನಿಮಗೆ ಅಂತಹ ಸಂದೇಶ ಬಂದರೆ ಜಾಗರೂಕರಾಗಿರಿ.