Shani Dev: ಮರೆತೂ ಕೂಡ ಈ ವಸ್ತುಗಳನ್ನು ಉಚಿತವಾಗಿ ಪಡೆಯಬೇಡಿ, ಕಾರಣ ಇಲ್ಲಿದೆ

Shani Dev Remedies: ಸಾಮಾನ್ಯವಾಗಿ ಶನಿ ದೇವನ ವಕ್ರದೃಷ್ಟಿಗೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆತನ ಕೋಪದ ದೃಷ್ಟಿಯಿಂದ ಪಾರಾಗಲು ಜನರು ತರಹೇವಾರಿ ಉಪಾಯಗಳನ್ನು ಅನುಸರಿಸುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಶನಿಯ ನಕಾರಾತ್ಮಕ ದೃಷ್ಟಿಯಿಂದ ಪಾರಾಗಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. 

Shani Dev Remedies: ಸಾಮಾನ್ಯವಾಗಿ ಶನಿ ದೇವನ ವಕ್ರದೃಷ್ಟಿಗೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆತನ ಕೋಪದ ದೃಷ್ಟಿಯಿಂದ ಪಾರಾಗಲು ಜನರು ತರಹೇವಾರಿ ಉಪಾಯಗಳನ್ನು ಅನುಸರಿಸುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಶನಿಯ ನಕಾರಾತ್ಮಕ ದೃಷ್ಟಿಯಿಂದ ಪಾರಾಗಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಈ ಉಪಾಯಗಳ ಪ್ರಕಾರ ಕೆಲ ಸಂಗತಿಗಳನ್ನು ಫ್ರೀಯಾಗಿ ಅಥವಾ ಉಚಿತವಾಗಿ ಎಂದಿಗೂ ಕೂಡ ಪಡೆಯಬಾರದು ಎಂದು ಹೇಳಲಾಗಿದೆ. ಈ ರೀತಿ ಮಾಡುವುದು ಶನಿಯ ಪ್ರಕೋಪಕ್ಕೆ ಕಾರಣವಾಗಬಹುದು ಮತ್ತು ಜಾತಕದ ವ್ಯಕ್ತಿಗಳಿಗೆ ವಿಭಿನ್ನ ರೀತಿಯ ಸಮಸ್ಯೆಗಳು ಎದುರಾಗಬಹುದು ಎನ್ನಲಾಗಿದೆ.

 

ಇದನ್ನೂ ಓದಿ-December ಮೊದಲ ವಾರದಿಂದಲೇ ಈ ರಾಶಿಯ ಜನರಿಗೆ ಸಾಕಷ್ಟು ಪ್ರೀತಿಯ ಜೊತೆಗೆ ಧನ ಸಂಪತ್ತು ಲಭಿಸಲಿದೆ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಶನಿ ದೇವನನ್ನು ಪ್ರಸನ್ನಗೊಳಿಸಲು ಆತನಿಗೆ ಕಪ್ಪು ಉದ್ದಿನ ಬೆಲೆಯನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ಶನಿದೋಷದಿಂದ ಮುಕ್ತಿ ಸಿಗುತ್ತದೆ. ಆದರೆ, ಉದ್ದಿನ ಬೇಳೆಯನ್ನು ಎಂದಿಗೂ ಕೂಡ ಉಚಿತವಾಗಿ ಪಡೆದು ಮನೆಗೆ ತರಬೇಡಿ, ಇದರಿಂದ ಶನಿ ಮುನಿಸಿಕೊಳ್ಳುತ್ತಾನೆ.  

2 /5

2. ಶನಿವಾರದ ದಿನ ಶನಿಯ ಮುಂದೆ ಸಾಸಿವೆ ಎಣ್ಣೆ ದೀಪ ಉರಿಸುವುದು ಎಂದಿಗೂ ಕೂಡ ಶುಭ ಎಂದು ಹೇಳಲಾಗುತ್ತದೆ. ಆದರೆ ಅದನ್ನು ಉಚಿತವಾಗಿ ಎಂದಿಗೂ ಕೂಡ ಪಡೆಯಬೇಡಿ. ಇದರಿಂದ  ನಿಮಗೆ ಶನಿಯ ಅಶುಭ ದೆಸೆ ಎದುರಾಗುವ ಸಾಧ್ಯತೆ ಇರುತ್ತದೆ.  

3 /5

3. ಶನಿವಾರದ ದಿನ ಕಬ್ಬಿಣ ಖರೀದಿ ಮತ್ತು ಮಾರಾಟ ಮಾಡಬಾರದು. ಇದರಿಂದ ನೀವು ಶನಿಯ ಕೆಟ್ಟ ದೃಷ್ಟಿ ಎದುರಿಸಬೇಕಾಗಬಹುದು ಹಾಗೂ ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳು ಎದುರಾಗಬಹುದು.  

4 /5

4. ಕಪ್ಪು ಎಳ್ಳನ್ನು ಉಚಿತವಾಗಿ ಪಡೆಯುವುದರಿಂದ ಶನಿಯ ನಕಾರಾತ್ಮಕ ದೃಷ್ಟಿ ನಿಮ್ಮ ಮೇಲಾಗುವ ಸಾಧ್ಯತೆ ಇದೆ. ಹೀಗಾಗಿ ಎಳ್ಳನ್ನು ಎಂದಿಗೂ ಕೂಡ ಫ್ರೀಯಾಗಿ ಪಡೆದುಕೊಳ್ಳಬೇಡಿ.  

5 /5

5. ಯಾವುದೇ ಓರ್ವ ವ್ಯಕ್ತಿಯಿಂದ ನೀವು ಯಾವುದಾದರೊಂದು ಕೆಲಸವನ್ನು ಮಾಡಿಸಿಕೊಂಡರೆ. ಅವರಿಗೆ ಅವರ ಕೆಲಸದ ಪ್ರತಿಯಾಗಿ ನೀಡಲಾಗುವ ಶುಲ್ಕವನ್ನು ಕೊಟ್ಟು ಕಳುಹಿಸಿ. ಈ ರೀತಿ ಮಾಡದೆ ಹೋದರೆ ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ. ಯಾರಿಂದಲೂ ಉಚಿತ ಸೇವೆ ಪಡೆಯುವುದು ಶನಿಗೆ ಇಷ್ಟವಾಗುವುದಿಲ್ಲ.