ಎಷ್ಟು ಪ್ರತಿಭಾನ್ವಿತರಾಗಿದ್ದರೂ ಯಶಸ್ಸು ಪಡೆಯುವುದೇ ಇಲ್ಲ ಈ ನಾಲ್ಕು ರಾಶಿಯವರು

ಅನೇಕ ಬಾರಿ ಪ್ರತಿಭೆಯ ಕಾರಣದಿಂದಾಗಿ ಯಶಸ್ಸಿನ ಸಮೀಪದವರೆಗೂ ಹೋಗುತ್ತಾರೆ. ಆದರೆ ಆತ್ಮವಿಶ್ವಾಸದ ಕೊರತೆಯಿಂದಾಗಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅಥವಾ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ.  

ನವದೆಹಲಿ : ಜ್ಯೋತಿಷ್ಯದ ಪ್ರಕಾರ (Astrology), ಪ್ರತಿಯೊಬ್ಬರ ಗುಣ ಸ್ವಭಾವವು ಆಯಾ ರಾಶಿಚಕ್ರದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಎಷ್ಟೇ ಸಮರ್ಥರಾಗಿದ್ದರು, ಎಷ್ಟೇ ಪ್ರತಿಭಾನ್ವಿತರಾಗಿದ್ದರೂ, ಇತರರ ಸಹಾಯವಿಲ್ಲದೆ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಯಾವುದೇ ಕೆಲಸದಲ್ಲಿ ಇವರಿಗೆ ಸುಲಭವಾಗಿ ಯಶಸ್ಸು ಸಿಗುವುದೇ ಇಲ್ಲ. ಇದಕ್ಕೆ ಆತ್ಮವಿಶ್ವಾಸದ ಕೊರತೆಯೇ ಕಾರಣವಾಗಿರಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಅನೇಕ ಬಾರಿ ಪ್ರತಿಭೆಯ ಕಾರಣದಿಂದಾಗಿ ಯಶಸ್ಸಿನ ಸಮೀಪದವರೆಗೂ ಹೋಗುತ್ತಾರೆ. ಆದರೆ ಆತ್ಮವಿಶ್ವಾಸದ ಕೊರತೆಯಿಂದಾಗಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅಥವಾ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ.  ಬೇರೆಯವರು ಇವರ ಪ್ರತಿಭೆಯ ಬಗ್ಗೆ ಮನವರಿಕೆ ಮಾಡುವವರೆಗೂ ಇವರು ಅದನ್ನು ನಂಬುವುದೇ ಇಲ್ಲ. ಅವರಿಗೆ ಕಾಲಕಾಲಕ್ಕೆ ಇತರರಿಂದ ಸ್ಫೂರ್ತಿ ಮತ್ತು ಪ್ರೋತ್ಸಾಹದ ಅಗತ್ಯವಿದೆ.   

2 /5

ಮಿಥುನ ರಾಶಿಯವರು ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರೆ. ತಮ್ಮ ಕನಸನ್ನು ಈಡೇರಿಸಲು ಸರ್ವ ಪ್ರಯತ್ನವನ್ನು ಮಾಡುತ್ತಾರೆ. ಆದರೂ ತಾವು ಯಶಸ್ವಿಯಾಗುತ್ತೇವೆ ಎನ್ನುವ ಬಗ್ಗೆ ಸಂದೇಹ ಇವರಲ್ಲಿರುತ್ತದೆ.  ತಮ್ಮ ಸಾಮರ್ಥ್ಯ ಮತ್ತು ಶ್ರಮದ ಬಗ್ಗೆ ಇವರಿಗೆ ನಂಬಿಕೆ ಇರುವುದೇ ಇಲ್ಲ.  ಆತ್ಮವಿಶ್ವಾಸದ ಕೊರತೆಯಿಂದಾಗಿ, ಬಂದ ಅವಕಾಶಗಳನು ಕೂಡಾ ಕಳೆದುಕೊಳ್ಳುತ್ತಾರೆ. 

3 /5

ಕರ್ಕ ರಾಶಿಯ ಜನರು, ಪ್ರತಿಭಾವಂತರಾಗಿರುವುದರ ಜೊತೆಗೆ ತುಂಬಾ ಭಾವನಾತ್ಮಕವಾಗಿರುತ್ತಾರೆ. ಅಲ್ಲದೆ, ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಹೀಗಾಗಿ, ತಮ್ಮ ಕೆಲಸವನ್ನು ಬಿಟ್ಟು ಇತರರ ಸಮಸ್ಯೆಗಳನ್ನು  ಪರಿಹರಿಸುವಲ್ಲಿ ತೊಡಗುತ್ತಾರೆ. ಆಗಾಗ ತಮ್ಮ ಗುರಿಗಳಿಂದ ವಿಮುಖರಾಗುತ್ತಾರೆ. ಇವರು ಯಶಸು ಪಡೆಯಬೇಕಾದರೆ, ಇವರಿಗೆ ತಮ್ಮ ಜೀವನದ ಗುರಿಯ ಬಗ್ಗೆ  ಆಗಾಗ ನೆನಪೂ ಮಾಡುತ್ತಾ ಇರಬೇಕು. 

4 /5

ಕನ್ಯಾ ರಾಶಿಯ ಜನರು ದೊಡ್ಡ ಕನಸುಗಳನ್ನು ಹೊಂದಿರುತ್ತಾರೆ. ಮಾತ್ರವಲ್ಲ ಅವುಗಳನ್ನು ಸಾಕಾರಗೊಳಿಸುವ ಸಾಮರ್ಥ್ಯವನ್ನು ಕೂಡಾ ಹೊಂದಿರುತ್ತಾರೆ. ಆದರೆ ಕೆಲವು ಕಾರಣಗಳಿಂದ ಅವರು ಅವುಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ, ಕೆಲಸದಲ್ಲಿ ಸಫಲರಾಗಿಲ್ಲ ಎಂದರೆ, ತೀವ್ರ ಹತಾಶೆಯಲ್ಲಿ ಮುಳುಗುತ್ತಾರೆ. ಆ ಹತಾಶೆಯಿಂದ ಹೊರಬರಲು ಯಾರೊಬ್ಬರದಾದರೂ ಸಹಾಯ ಬೇಕು. 

5 /5

ಮೀನ ರಾಶಿಯ ಜನರು, ಬುದ್ಧಿವಂತರಾಗಿದ್ದರೂ ಯಾರ ಮಾತಿನಲ್ಲೂ ಸುಲಭವಾಗಿ ಸಿಲುಕುತ್ತಾರೆ. ಈ ಜನರ ಹಾದಿಯಿಂದ ವಿಮುಖವಾಗುವ ಎಲ್ಲ ಸಾಧ್ಯತೆಗಳಿವೆ. ಈ ಜನರಿಗೆ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅವರು ನಿಜವಾದ ಸ್ನೇಹಿತ ಅಥವಾ ಮಾರ್ಗದರ್ಶಿಯನ್ನು ಕಂಡುಕೊಂಡರೆ, ಅವರು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.