Covid-19: ಕರೋನಾ ಯುಗದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದ Xiaomi, Airtel, OPPO

               

ನವದೆಹಲಿ: ದೇಶಾದ್ಯಂತ ಕೋವಿಡ್ -19 (Covid-19) ಅಟ್ಟಹಾಸ ಕೊಂಚ ಇಳಿಮುಖವಾದಂತಿದೆ. ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಬಹುತೇಕ ಜನರಿಗೆ ವರ್ಕ್ ಫ್ರಮ್ ಹೋಂ ನೀಡಲಾಗಿದೆ. ಕರೋನಾ ಸಾಂಕ್ರಾಮಿಕದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಆನ್ಲೈನ್ ನಲ್ಲಿ ಪಾಠ ಕೇಳುವಂತಾಗಿದೆ. ಈ ಮಧ್ಯೆ ರಿಲಯನ್ಸ್ ಜಿಯೋ, ಶಿಯೋಮಿ, ಏರ್‌ಟೆಲ್ ಮತ್ತು ಒಪ್ಪೋ ಮುಂತಾದ ಕಂಪನಿಗಳು ತಮ್ಮ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿವೆ. ಕಂಪೆನಿಗಳು ಯಾವ ಸೌಲಭ್ಯಗಳನ್ನು ಒದಗಿಸುತ್ತಿವೆ ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ರಿಲಯನ್ಸ್ ಜಿಯೋ (Reliance Jio) ರಿಲಯನ್ಸ್ ಫೌಂಡೇಶನ್‌ನೊಂದಿಗೆ ತಿಂಗಳಿಗೆ 300 ನಿಮಿಷಗಳ ಉಚಿತ ಟಾಕ್ ಟೈಮ್ ಒದಗಿಸಲು ಕೆಲಸ ಮಾಡುತ್ತಿದೆ. ಸಾಂಕ್ರಾಮಿಕ ರೋಗದಿಂದಾಗಿ ರೀಚಾರ್ಜ್ ಮಾಡಿಸಲು ಸಾಧ್ಯವಾಗದಿರುವ ಜಿಯೋಫೋನ್ (JioPhone) ಬಳಕೆದಾರರಿಗೆ ಈ ಯೋಜನೆಯ ಪ್ರಯೋಜನವನ್ನು ನೀಡಲಾಗುವುದು. ಈ ಸೌಲಭ್ಯದ ಮೂಲಕ, ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಮಾತನಾಡಲು ಸಾಧ್ಯವಾಗುತ್ತದೆ. ಟಾಕ್ ಟೈಂ ಹೊರತಾಗಿ, ರೀಚಾರ್ಜ್ ಮಾಡಿದ ಜಿಯೋಫೋನ್ ಬಳಕೆದಾರರಿಗೆ ಪ್ರತಿಯೊಂದು ಜಿಯೋಫೋನ್ ಯೋಜನೆ ಅದೇ ಮೌಲ್ಯದ ಹೆಚ್ಚುವರಿ ರೀಚಾರ್ಜ್ ಯೋಜನೆಯನ್ನು ಉಚಿತವಾಗಿ ಪಡೆಯುತ್ತದೆ. ಈ ರೀಚಾರ್ಜ್‌ನಲ್ಲಿ ನೀವು ಡಬಲ್ ಪ್ರಯೋಜನಗಳನ್ನು ಪಡೆಯುತ್ತೀರಿ.

2 /7

ರಿಯಲ್ಮೆ ತನ್ನ ಉತ್ಪನ್ನದ ಖಾತರಿಯನ್ನುಅಂದರೆ ವ್ಯಾರಂಟಿ ಅನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈ ಕೊಡುಗೆ ಮೇ 1 ರಿಂದ ಜೂನ್ 30 ರವರೆಗೆ ವ್ಯಾರಂಟಿ ಅವಧಿ ಮುಗಿಯುವ ಉತ್ಪನ್ನಗಳಿಗಾಗಿ ಆಗಿದೆ. ಈ ಉತ್ಪನ್ನಗಳಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ವಾಚ್ ಮತ್ತು ಇಯರ್‌ಫೋನ್ ಸೇರಿವೆ.

3 /7

ಶಿಯೋಮಿ ಎಂಐ (Mi) ಮತ್ತು ರೆಡ್‌ಮಿ (Redmi) ಸಾಧನಗಳಲ್ಲಿನ ಖಾತರಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಿದೆ. ಮೇ ಮತ್ತು ಜೂನ್ 30 ರ ನಡುವೆ ಖರೀದಿಸಿದ ಸಾಧನಗಳಿಗೆ ಈ ಖಾತರಿ ಅನ್ವಯಿಸುತ್ತದೆ. ಇದನ್ನೂ ಓದಿ- ಕಡಿಮೆ ಬೆಲೆಗೆ ಫೋನ್ ಖರೀದಿಸಬೇಕೆ? ಇಲ್ಲಿದೆ Best options

4 /7

ಒಪ್ಪೋ ತನ್ನ ಗ್ರಾಹಕರಿಗೆ ವ್ಯಾರಂಟಿ ಅನ್ನು ಜೂನ್ 30 ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್ ಸಮಯದಲ್ಲಿ ವ್ಯಾರಂಟಿ ಅವಧಿ ಮುಗಿಯುವ ಸಾಧನಗಳಿಗೆ ಇದು ಅನ್ವಯಿಸುತ್ತದೆ.

5 /7

ವಿವೋ ತನ್ನ ಬಳಕೆದಾರರ ಸಾಧನದ ವ್ಯಾರಂಟಿಯನ್ನು ಸಹ ವಿಸ್ತರಿಸಿದೆ. ಆದಾಗ್ಯೂ, ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕಂಪನಿಯು ಸೇವಾ ಅವಧಿಯನ್ನು ಮೂವತ್ತು ದಿನಗಳವರೆಗೆ ವಿಸ್ತರಿಸಿದೆ. ಇದನ್ನೂ ಓದಿ- Reliance Jio: ಕೈಗೆಟಕುವ ದರದಲ್ಲಿ ಪಡೆಯಿರಿ ಐದು ಅದ್ಭುತ ರಿಚಾರ್ಜ್ ಯೋಜನೆಗಳು

6 /7

ಏರ್‌ಟೆಲ್ ತನ್ನ ಕಡಿಮೆ ಆದಾಯದ ಗ್ರಾಹಕರಿಗೆ 49 ರೂ. ರೀಚಾರ್ಜ್ ಪ್ಯಾಕ್ ಅನ್ನು ಉಚಿತವಾಗಿ ನೀಡಿದೆ. ಇದು 38 ರೂ. ಟಾಕ್ ಟೈಮ್ ಜೊತೆಗೆ 100 ಎಂಬಿ ಮೊಬೈಲ್ ಡೇಟಾದ ಸೌಲಭ್ಯವನ್ನು ಹೊಂದಿದೆ. ಇದರ ಸಿಂಧುತ್ವವು 28 ದಿನಗಳು. ಇದಲ್ಲದೆ, 79 ರೂಪಾಯಿಗಳ ರೀಚಾರ್ಜ್ ಕೂಪನ್ ಖರೀದಿಸುವುದರಿಂದ ಡಬಲ್ ಬೆನಿಫಿಟ್ ಲಭ್ಯವಿರುತ್ತದೆ.

7 /7

ವೊಡಾಫೋನ್ ಐಡಿಯಾ ತನ್ನ ಕಡಿಮೆ ಆದಾಯದ ಗ್ರಾಹಕರಿಗೆ 49 ರೂ.ಗಳ ಉಚಿತ ಯೋಜನೆಯನ್ನು ನೀಡಿದೆ. ಇದಲ್ಲದೆ, ವೊಡಾಫೋನ್ ಐಡಿಯಾ ಎರಡು ಕಾಂಬೊ ವೋಚರ್ ಬಿಡುಗಡೆ ಮಾಡಿದೆ. ಇವುಗಳ ಬೆಲೆ 79 ಮತ್ತು 128 ರೂಪಾಯಿಗಳು. ಇದು ಡಬಲ್ ಟಾಕ್ ಟೈಮ್ ಹೊಂದಿದೆ. ಇದರ ಸಿಂಧುತ್ವವು 28 ದಿನಗಳು.