ಈ ಕಾರಣಗಳಿಗಾಗಿ ಮೇ 31ರೊಳಗೆ ನಿಮ್ಮ ಖಾತೆಯಲ್ಲಿರಲಿ 342 ರೂ.

ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ  ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ  2  ಲಕ್ಷದ ಕವರ್ ಒಳಗೊಂಡಿದೆ.  ಪಿಎಂ ಸುರಕ್ಷಾ ಬಿಮಾ ಯೋಜನೆ ಆಕ್ಸಿಡೆಂಟಲ್ ಇನ್ಶುರೆನ್ಸ್ ಯೋಜನೆಯಾಗಿದ್ದು, 2 ಲಕ್ಷ ರೂಪಾಯಿಗಳ ಕವರ್ ಕೂಡ ಇದೆ. 

ನವದೆಹಲಿ : ಕರೋನಾ ಸಾಂಕ್ರಾಮಿಕ (Coronavirus) ಯುಗದಲ್ಲಿ, ಉಳಿತಾಯದ ಜೊತೆಗೆ ವಿಮೆಯ ಮಹತ್ವದ ಬಗ್ಗೆ ಜನರು ತಿಳಿದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ವಿಮೆ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ದುಬಾರಿ ಕಂತುಗಳನ್ನು ಪಾವತಿಸುವ ಮೂಲಕ ವಿಮಾ ರಕ್ಷಣೆಯನ್ನು ಪಡೆಯಲು ಸಾಧ್ಯವಾಗದ ಬಹಳಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಅಂತಹ ಜನರಿಗೆ ಕೇಂದ್ರ ಸರ್ಕಾರದ ಎರಡು ಯೋಜನೆಗಳಿವೆ. ಈ ಯೋಜನೆಗಳಲ್ಲಿ  2 ಲಕ್ಷದ ಲೈಫ್ ಕವರ್ ನೀಲಾಗುತ್ತದೆ.  ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2  ಲಕ್ಷದ ಕವರ್ ಒಳಗೊಂಡಿದೆ.  ಪಿಎಂ ಸುರಕ್ಷಾ ಬಿಮಾ ಯೋಜನೆ ಆಕ್ಸಿಡೆಂಟಲ್ ಇನ್ಶುರೆನ್ಸ್ ಯೋಜನೆಯಾಗಿದ್ದು, 2 ಲಕ್ಷ ರೂಪಾಯಿಗಳ ಕವರ್ ಕೂಡ ಇದೆ. ಈ ಎರಡೂ ಯೋಜನೆಗಳ ಅಡಿಯಲ್ಲಿ ಕವರ್ ಪಡೆಯಲು, ಈ ಯೋಜನೆಗಳಲ್ಲಿ ಬ್ಯಾಂಕ್ ಖಾತೆ ಮತ್ತು ನೋಂದಣಿಯನ್ನು ಹೊಂದಿರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೋದಿ ಸರ್ಕಾರದ ಈ ಯೋಜನೆಗಳಲ್ಲಿ ಬ್ಯಾಂಕ್ ಖಾತೆದಾರರು ನೋಂದಾಯಿಸಿಕೊಂಡಿದ್ದರೆ, ಎರಡೂ ಯೋಜನೆಗಳ ಅಡಿಯಲ್ಲಿ 4 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಈ ಯೋಜನೆಗಳ ಪ್ರೀಮಿಯಂ ಬಗ್ಗೆ ಹೇಳುವುದಾದರೆ, ಖಾತೆದಾರರು PMJJBYಗೆ  ವಾರ್ಷಿಕವಾಗಿ 330 ರೂ ಮತ್ತು PMSBYಗೆ ವಾರ್ಷಿಕವಾಗಿ 12 ರೂಯನ್ನು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ಖಾತೆಯಿಂದ ವಾರ್ಷಿಕವಾಗಿ ಕಡಿತಗೊಳಿಸಲಾಗುತ್ತದೆ. ಈ ಎರಡೂ ಯೋಜನೆಗಳನ್ನು ಮೇ 31 ರವರೆಗೆ ನಡೆಯುತ್ತದೆ. ಅಂದರೆ, ಈ ಯೋಜನೆಗಳ ಅಡಿಯಲ್ಲಿ ವಾರ್ಷಿಕ ಪ್ರೀಮಿಯಂ ಅನ್ನು ಪ್ರತಿ ವರ್ಷ ಮೇ ತಿಂಗಳಲ್ಲಿ ಕಡಿತಗೊಳಿಸಲಾಗುತ್ತದೆ. ನಿಮ್ಮ ಖಾತೆಯಲ್ಲಿ 342 ರೂಗಳನ್ನು ಹೊಂದಿಲ್ಲದಿದ್ದರೆ, ವಿಮೆಯನ್ನು ರದ್ದುಗೊಳಿಸಲಾಗುತ್ತದೆ.

2 /4

ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಅಡಿಯಲ್ಲಿ 55 ವರ್ಷ ವಯಸ್ಸಿನವರೆಗೆ ಲೈಫ್ ಕವರ್ ಸಿಗುತ್ತದೆ. ಈ ಯೋಜನೆಯಲ್ಲಿ ವಿಮಾದಾರನ ಮರಣದ ನಂತರ, ಅವನ ನಾಮಿನಿಗೆ 2 ಲಕ್ಷ ರೂಪಾಯಿಗಳ ಹಕ್ಕು ಸಿಗುತ್ತದೆ. ಈ ಯೋಜನೆಯಲ್ಲಿ 18 ರಿಂದ 50 ವರ್ಷ ವಯಸ್ಸಿನವರು ನೋಂದಾಯಿಸಬಹುದು. ಪಿಎಂಜೆಜೆಬಿವೈ ಯೋಜನೆಯನ್ನು ಎಲ್ಐಸಿ ಮತ್ತು ಇತರ ಖಾಸಗಿ ಜೀವ ವಿಮಾ ಕಂಪನಿಗಳ ಮೂಲಕ ನಿರ್ವಹಿಸಲಾಗುತ್ತದೆ. 

3 /4

ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2  ಲಕ್ಷದ ಕವರ್ ಒಳಗೊಂಡಿದೆ.  ಪಿಎಂ ಸುರಕ್ಷಾ ಬಿಮಾ ಯೋಜನೆ ಆಕ್ಸಿಡೆಂಟಲ್ ಇನ್ಶುರೆನ್ಸ್ ಯೋಜನೆಯಾಗಿದ್ದು, 2 ಲಕ್ಷ ರೂಪಾಯಿಗಳ ಕವರ್ ಕೂಡ ಇದೆ. ಇದರಲ್ಲಿ ವಿಮೆದಾರರ ಸಾವು ಸಂಭವಿಸಿದರೆ, ಅಥವಾ ವಿಮಾದಾನ ವಿಕಲಾಂಗನಾದರೆ,  2 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ವಿಮೆದಾರನು ಭಾಗಶಃ ವಿಕಲಾಂಗನಾದರೆ, 1 ಲಕ್ಷ ರೂ.ಗಳನ್ನು ಈ ಯೋಜನೆಯಡಿ, ನೀಡಲಾಗುತ್ತದೆ.  

4 /4

ಕೇಂದ್ರ ಸರ್ಕಾರದ PMJJBY  ಮತ್ತು PMSBYನಲ್ಲಿ ನೋಂದಣಿಗಾಗಿ, ನೀವು ಯಾವುದೇ ಹತ್ತಿರದ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬಹುದು. ಸ್ನೇಹಿತರು ಅಥವಾ ವಿಮಾ ಏಜೆಂಟರ ಸಹಾಯದಿಂದ ಬ್ಯಾಂಕುಗಳು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಸರ್ಕಾರಿ ವಿಮಾ ಕಂಪನಿಗಳು ಮತ್ತು ಬ್ಯಾಂಕುಗಳ ಜೊತೆಗೆ ಅನೇಕ ಖಾಸಗಿ ವಿಮಾ ಕಂಪನಿಗಳು ಈ ಯೋಜನೆಗಳನ್ನು ಒದಗಿಸುತ್ತಿವೆ.