ಈ ನೇರಳೆ ಹಣ್ಣು ತರಕಾರಿಗಳನ್ನು ಸೇವಿಸಿದರೆ ಕಾಯಿಲೆಗಳು ಓಡುವುದು ಮಾರು ದೂರ

ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ನಾವು ಅನೇಕ ರೀತಿಯ ಸೋಂಕುಗಳು ಮತ್ತು ರೋಗಗಳಿಗೆ ಬಲಿಯಾಗುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕಾಗಿ ಜೀವನಶೈಲಿಯನ್ನು ಸುಧಾರಿಸುವುದು ಮತ್ತು ದೈನಂದಿನ ಆಹಾರದಲ್ಲಿ ಆರೋಗ್ಯಕರ ವಿಷಯಗಳನ್ನು ಸೇರಿಸುವುದು ಮುಖ್ಯವಾಗಿದೆ. 

ನೇರಳೆ ಆಹಾರಗಳು : ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ನಾವು ಅನೇಕ ರೀತಿಯ ಸೋಂಕುಗಳು ಮತ್ತು ರೋಗಗಳಿಗೆ ಬಲಿಯಾಗುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕಾಗಿ ಜೀವನಶೈಲಿಯನ್ನು ಸುಧಾರಿಸುವುದು ಮತ್ತು ದೈನಂದಿನ ಆಹಾರದಲ್ಲಿ ಆರೋಗ್ಯಕರ ವಿಷಯಗಳನ್ನು ಸೇರಿಸುವುದು ಮುಖ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಇತ್ತೀಚಿನ ದಿನಗಳಲ್ಲಿ ನೇರಳೆ ಬಣ್ಣದ ತರಕಾರಿಗಳ ಕ್ರೇಜ್ ಬಹಳಷ್ಟು ಹೆಚ್ಚಾಗುತ್ತದೆ. ಏಕೆಂದರೆ ಅವುಗಳು ಟೇಸ್ಟಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ.   

2 /5

ಕೆಂಪು ಮತ್ತು ಕಿತ್ತಳೆ ಬಣ್ಣದ ಕ್ಯಾರೆಟ್‌ಗಳನ್ನು ಹಲವು ಬಾರಿ ಸೇವಿಸಿರಬಹುದು.  ಆದರೆ ನೇರಳೆ ಬಣ್ಣದ ಕ್ಯಾರೆಟ್‌ಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಇದನ್ನು ತಿನ್ನುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ. ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ. ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

3 /5

ನೇರಳೆ ಎಲೆಕೋಸು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ ಎಂದು  ಹೇಳಲಾಗುತ್ತದೆ. ಇದನ್ನು ಹಸಿ ಅಥವಾ ಬೇಯಿಸಿದ ರೂಪದಲ್ಲಿ ತಿನ್ನಬಹುದಾಗಿದೆ.  ಇದರ ರುಚಿ ಸಾಮಾನ್ಯ ಎಲೆ ಕೋಸಿನಂತೆಯೇ ಇರುತ್ತದೆ.  

4 /5

ಪ್ಯಾಶನ್ ಹಣ್ಣು ಇದರ ವೈಜ್ಞಾನಿಕ ಹೆಸರು Passiflora Edulis. ಇದರ ಮೇಲಿನ ಭಾಗ ನೇರಳೆ ಮತ್ತು ಒಳಭಾಗ ಹಳದಿಯಾಗಿರುತ್ತದೆ. ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದಾಗಿ ನೀವು ಅನೇಕ ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಿಕೊಳ್ಳಬಹುದು. 

5 /5

ಆರೋಗ್ಯಕರ ಆಹಾರದಲ್ಲಿ ಬೀಟ್ ರೂಟ್ ಸೇರಿದೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಅನೇಕ ಆರೋಗ್ಯ ತಜ್ಞರು ಇದನ್ನು ತೂಕ ಇಳಿಸುವ ಆಹಾರವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)