Vastu Tips: ಮನೆಯಲ್ಲಿ ಶುಕ್ರದೆಸೆ ವೃದ್ಧಿಸಿ ಹಣದ ಮಳೆಯನ್ನೇ ಹರಿಸುತ್ತದೆ ಕರ್ಪೂರ: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು

Vastu Tips of Camphor: ಸಾಮಾನ್ಯವಾಗಿ ಕರ್ಪೂರವನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ದೇವರಿಗೆ ಆರತಿಯನ್ನು ಮಾಡಲೆಂದು ಬಳಸುತ್ತೇವೆ. ಹಾಗೆಯೇ ಹವನ ಕುಂಡದಲ್ಲಿ ನೈವೇದ್ಯದ ರೂಪದಲ್ಲಿ ಸಮರ್ಪಿಸಲಾಗುತ್ತದೆ. ಆದರೆ ಕರ್ಪೂರವನ್ನು ಅನೇಕ ರೀತಿಯ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ದೋಷಗಳನ್ನು ಕಡಿಮೆ ಮಾಡಲು ಬಳಸಲಾಗುತ್ತದೆ ಎಂದು ತಿಳಿದಿದೆಯೇ?

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಪೂರದ ಹಲವು ವಿಧದ ಉಪಾಯಗಳನ್ನು ಮತ್ತು ಪರಿಹಾರಗಳನ್ನು ಹೇಳಲಾಗಿದೆ. ಈ ಕ್ರಮಗಳು ಮಾನವ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ಜೊತೆಗೆ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯುತ್ತವೆ.

2 /4

ಕರ್ಪೂರದ ತುಂಡನ್ನು ತೆಗೆದುಕೊಂಡು ದೃಷ್ಟಿಗೆ ಒಳಗಾದ ವ್ಯಕ್ತಿಯ ತಲೆಯಿಂದ ಕಾಲಿನವರೆಗೆ ಕರ್ಪೂರ ಮೂಲಕ ಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಂತರ ಆ ಕರ್ಪೂರವನ್ನು ನೆಲದ ಮೇಲೆ ಇಟ್ಟು ಸುಡಬೇಕು. ಇದು ವ್ಯಕ್ತಿಯ ಮೇಲಾಗಿರುವ ಕೆಟ್ಟ ದೃಷ್ಟಿಗಳನ್ನು ತೆಗೆದುಹಾಕುತ್ತದೆ.

3 /4

ರಾತ್ರಿ ಅಡುಗೆ ಮನೆಯ ಕೆಲಸವೆಲ್ಲ ಮುಗಿದ ನಂತರ ಬೆಳ್ಳಿಯ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿ. ಇದನ್ನು ನಿಯಮಿತವಾಗಿ ಮಾಡುವುದರಿಂದ, ವ್ಯಕ್ತಿಯ ಸಂಪತ್ತು ವೃದ್ಧಿಸುತ್ತದೆ ಜೊತೆಗೆ ಧನಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ.

4 /4

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಪೂರದ ಈ ಉಪಾಯವು ಪಿತ್ರ ದೋಷ ಮತ್ತು ಕಾಳಸರ್ಪ ದೋಷವನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಮೂರು ಬಾರಿ ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ಈ ದೋಷಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.