ನಾಳೆ ಮಂಗಳನ ಮನೆಯಲ್ಲಿ ಮಾಯಾವಿ ರಾಹು-ಬುಧನ ಮೈತ್ರಿ, 3 ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

Rahu-Budh Yuti In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ಅಂದರೆ ಮಾರ್ಚ್ 31, 2023 ರಂದು ಮಂಗಳನ ಅಧಿಪತ್ಯದ ರಾಶಿಯಾಗಿರುವ ಮೇಷ ರಾಶಿಗೆ ಬುಧನ ಪ್ರವೇಶ ನೆರವೇರಲಿದೆ. ಆದರೆ, ಈಗಾಗಲೇ ಮೇಷ ರಾಶಿಯಲ್ಲಿ ರಾಹು ವಿರಾಜಮಾನನಾಗಿದ್ದಾನೆ. ಇದರಿಂದ ಮೇಷ ರಾಶಿಯಲ್ಲಿ ಮಾಯಾವಿ ರಾಹುವಿನ ಜೊತೆಗೆ ಬುಧನ ಮೈತ್ರಿ ನೆರವೇರಲಿದೆ, ಇದು ಕೆಲ ರಾಶಿಗಳ ಜನರ ಪಾಲಿಗೆ ಸಾಕಷ್ಟು ಸಕಾರಾತ್ಮಕ ಸಾಬೀತಾಗಲಿದೆ. 
 

Rahu-Budha Yuti In Aries: ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಬೇರೆ ಬೇರೆ ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತವೆ. ಇದರ ಪ್ರಭಾವ ಭೂಮಿಯ ಮೇಲೇರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಇದೆ ಸರಣಿಯಲ್ಲಿ ಇದೀಗ ಮಾರ್ಚ್ 31, 2023 ರಂದು ಬುಧನ ಮೇಷ ರಾಶಿ ಗೋಚರ ನೆರವೇರಲಿದೆ. ಬುಧನ ಈ ಗೋಚರ ಮಧ್ಯಾಹ್ನ 2 ಗಂಟೆ 44 ನಿಮಿಷಕ್ಕೆ ನಡೆಯುತ್ತಿದೆ. ಆದರೆ, ಮೇಷರಾಶಿಯಲ್ಲಿ ಈಗಾಗಲೇ ರಾಹು ವಿರಾಜಮಾನನಾಗಿರುವ ಕಾರಣ ಅಲ್ಲಿ ಮಾಯಾವಿ ರಾಹುವಿನ ಜೊತೆಗೆ ಬುಧನ ಮೈತ್ರಿ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯದ ಯೋಗ ರೂಪುಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-Ram Navami 2023 Horoscope: ನಾಳೆ ಶ್ರೀರಾಮನವಮಿ, ಈ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ, ಸಿಗಲಿದೆ ಅಪಾರ ಧನ-ಸಂಪತ್ತು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮಿಥುನ ರಾಶಿ: ಮಂಗಳನ ಮನೆಯಲ್ಲಿ ಬುಧ ಹಾಗೂ ಮಾಯಾವಿ ರಾಹುವಿನ ಮೈತ್ರಿ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಜಾತಕದ ಆದಾಯ ಹಾಗೂ ಲಾಭದ ಭಾವದಲ್ಲಿ ನಡೆಯುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಉಂಟಾಗಲಿದೆ. ಜೊತೆಗೆ ವೃತ್ತಿ ಜೀವನದ ದೃಷ್ಟಿಯಿಂದ ಈ ಸ್ಥಿತಿ ನಿಮಗೆ ಅತ್ಯಂತ ಲಾಭಕಾರಿಯಾಗಿದೆ. ಏತನ್ಮಧ್ಯೆ ನಿಮಗೆ ಹೊಸ ಅವಕಾಶಗಳು ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಮನೆಯ ಇತರ ಸದಶ್ಯರ ಜೊತೆ ಸೇರಿ ನೀವು ಹೊಸ ಬಿಸ್ನೆಸ್ ಆರಂಭಿಸಬಹುದು. ದೊಡ್ಡ ದೊಡ್ಡ ಕಂಪನಿಗಳು ಅಥವಾ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕಾರ್ಯ ಮಾಡುವವರಿಗೆ ಈ ಸಮಯ ಅದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ.  

2 /3

ಕರ್ಕ ರಾಶಿ: ಮಂಗಳನ ಅಂಗಳದಲ್ಲಿ ಮಾಯಾವಿ ರಾಹು ಹಾಗೂ ಬುಧನ ಮೈತ್ರಿ ನಿಮ್ಮ ವೃತ್ತಿಜೀವನ ಹಾಗೂ ವ್ಯಾಪಾರದ ದೃಷ್ಟಿಕೋನದಿಂದ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಜಾತಕದ ದಶಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ ಹಾಗೂ ಈ ಮೊದಲಿಗೆ ಹೊಲಿಸಿದರೆ ನೀವು ಹೆಚ್ಚಿನ ಹಣವನ್ನು ಉಳಿತಾಮ ಮಾಡುವಲ್ಲಿ ಯಶಸ್ವಿಯಾಗುವಿರಿ. ಇನ್ನೊಂದೆಡೆ ನಿರುದ್ಯೋಗಿಗಳಿಗೆ ಈ ಅವಧಿಯಲ್ಲಿ ನೌಕರಿಯ ಅವಕಾಶಗಳು ಒದಗಿಬರಲಿವೆ. ವ್ಯಾಪಾರವರ್ಗದ ಜನರಿಗೆ ವ್ಯಾಪಾರ ವಿಸ್ತರಣೆಗೆ ಕಾಲ ಉತ್ತಮವಾಗಿದೆ. ವ್ಯಾಪಾರದಲ್ಲಿ ಯಾವುದಾದರೊಂದು ಮಹತ್ವದ ಒಪ್ಪಂದವನ್ನು ನೀವು ಫೈನಲ್ ಮಾಡುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ನೌಕರ ವರ್ಗದ ಜನರಿಗೆ ನೌಕರಿಯಲ್ಲಿ ಇಂಕ್ರಿಮೆಂಟ್ ಹಾಗೂ ಪ್ರಮೋಷನ್ ಭಾಗ್ಯ ಒದಗಿಬರಲಿದೆ.  

3 /3

ಧನು ರಾಶಿ: ರಾಹು ಹಾಗೂ ಬುಧನ ಈ ಮೈತ್ರಿ ಧನು ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಲಕ್ಕಿ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಜಾತಕದ ಪಂಚಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಪ್ರೇಮ ಸಂಬಂಧಗಳಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಆಸ್ತಿ-ಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉತ್ತಮ ಅವಕಾಶಗಳು ನಿಮಗೆ ಪ್ರಾಪ್ತಿಯಾಗಲಿವೆ. ಸಂತಾನ ಭಾಗ್ಯ ಪಡೆಯಲು ಬಯಸುತ್ತಿರುವವರ ದಂಪತಿಗಳ ಬಯಕೆ ಈಡೇರುವ ಸಾಧ್ಯತೆ ಇದೆ. ಪ್ರಸ್ತುತ ಜನವರಿಯಿಂದ ನಿಮಗೆ ಶನಿಯ ಸಾಡೇಸಾತಿಯಿಂದ ಮುಕ್ತಿ ಸಿಕ್ಕ ಕಾರಣ, ನಿಮ್ಮ ಎಲ್ಲಾ ಆಸೆ-ಆಕಾಂಕ್ಷೆಗಳು ಈಡೇರಲಿವೆ. ಜೊತೆಗೆ ನಿಮ್ಮ ಯೋಜನೆಗಳು ಪೂರ್ಣಗೊಳ್ಳಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)