Mercury Direct 2023: ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ಬುಧನ ನೇರ ನಡೆ ಆರಂಭ, ಈ ಜನರಿಗೆ ಅಷ್ಟೈಶ್ವರ್ಯ ಪ್ರಾಪ್ತಿ ಯೋಗ!

Budha Margi In Mash 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಮೇಷ ರಾಶಿಯಲ್ಲಿ ತನ್ನ ಹಿಮ್ಮುಖ ನಡೆಯನ್ನು ನಿಲ್ಲಿಸಲಿದ್ದಾನೆ.  ಮೇಷ ಮಂಗಳನ ಅದ್ಧಿಪತ್ಯದ ಅಗ್ನಿ ತತ್ವದ ರಾಶಿಯಾಗಿದೆ. ಮೇ 15, 2023 ರಂದು ಬೆಳಗ್ಗೆ  8:30 ಕ್ಕೆ ಬುಧ ಮೇಷ ರಾಶಿಯಲ್ಲಿ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ. ಬುಧನ ಈ ನೇರ ನಡೆ ಹಲವು ರಾಶಿಗಳ ಜಾತಕದವರಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋನ ಬನ್ನಿ. 
 

Mercury Direct In Aries: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಬುಧದೇವನಿಗೆ ವಿಶೇಷ ಮಹತ್ವ ನೀಡಲಾಗಿದೆ. ಏಕೆಂದರೆ, ಬುಧ ತನ್ನ ಅಸ್ತ ಭಾವ, ಉದಯ ಭಾವ, ವಕ್ರನಡೆ ಭಾವ ಹಾಗೂ ನೇರ ನಡೆ ಭಾವದಲ್ಲಿ ವಿಶೇಷ ಫಲಿತಾಂಶಗಳನ್ನು ದಯಪಾಲಿಸುತ್ತಾನೆ. ಸಾಮಾನ್ಯವಾಗಿ ಬುಧ ಸೂರ್ಯನಿಗೆ ತೀರಾ ಹತ್ತಿರದ ಗ್ರಹವಾಗಿರುವ ಕಾರಣ ಅಸ್ತಭಾವದಲ್ಲಿಯೇ ಇರುತ್ತಾನೆ ಮತ್ತು ತುಂಬಾ ವಿರಳವಾಗಿ ಬುಧ ಉದಯಿಸುತ್ತಾನೆ. ಬುಧ ಸೂರ್ಯನ ಹತ್ತಿರಕ್ಕೆ ಬರುವುದು ಬುದ್ಧಾದಿತ್ಯ ಯೋಗಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಮೇ 15, 2023 ರಂದು ಬೆಳಗ್ಗೆ 8.30ಕ್ಕೆ ಬುಧ ತನ್ನ ವಕ್ರನಡೆಯನ್ನು ನಿಲ್ಲಿಸಿ ನೆರನಡೆಯನ್ನು ಅನುಸರಿಸಲಿದೆ. ಬುಧನ ಈ ನೆರನಡೆ ಮೇಷ ರಾಶಿಯಲ್ಲಿ ಆರಂಭಗೊಳ್ಳಲಿದೆ. ಬನ್ನಿ ಯಾವ ರಾಶಿಗಳ ಜಾತಕದವರ ಪಾಲಿಗೆ ಇದು ಶುಭ ಹಾಗೂ ಮಂಗಳಕರ ಸಾಬೀತಾಗಲಿದೆ ತಿಳಿದುಕೊಳ್ಳೋಣ,

 

ಇದನ್ನೂ ಓದಿ-Hans Rajyog: April 29 ರಿಂದ ನಿರ್ಮಾಣಗೊಂಡಿದೆ 'ಹಂಸ ರಾಜಯೋಗ', ಈ ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮಿಥುನ ರಾಶಿ: ಬುಧನ ಈ ನೇರ ನಡೆ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಆರಂಭಗೊಳ್ಳಲಿದೆ. ಇದರಿಂದ ನಿಮ್ಮ ಆದಾಯದ ದಾರಿ ಸುಗಮವಾಗಲಿದೆ. ದೀರ್ಘಕಾಲದಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈಸೇರಲಿದೆ. ಹೀಗಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ಪ್ರೇಮ ಸಂಬಂಧಗಳಲ್ಲಿನ ಉದ್ವಿಗ್ನತೆ ನಿವಾರಣೆಯಾಗಲಿದೆ ಮತ್ತು ನಿಮ್ಮ ಪ್ರೇಮ ಸಂಬಂಧಕ್ಕೆ ಬಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಅನುಕೂಲಕರ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಜೀವನ ಶಕ್ತಿಯು ಹೆಚ್ಚಾಗಲಿದೆ ಮತ್ತು ನೀವು ಕುಟುಂಬ ಸದಸ್ಯರ ಬೆಂಬಲವನ್ನು ಸಹ ಪಡೆಯುವಿರಿ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಸುಧಾರಿಸಲಿದೆ, ಇದಲ್ಲದೆ ನಿಮಗೆ ನಿಮ್ಮ ಕುಟುಂಬಸ್ಥರ ಭಾರಿ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.  

2 /6

ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ದಶಮಭಾವದಲ್ಲಿ ಬುಧನ ಈ ನಡೆ ಆರಂಭಗೊಳ್ಳಲಿದೆ. ಈ ಸಮಯವು ನಿಮ್ಮ ಜೀವನದಲ್ಲಿ ಸಾಮರಸ್ಯವನ್ನು ತರಲಿದೆ. ವೃತ್ತಿ ಜೀವನವೇ ಆಗಿರಲಿ ಅಥವಾ ವೈಯಕ್ತಿಕ ಜೀವನವೇ ಆಗಿರಲಿ, ನೀವು ಎರಡೂ ಕ್ಷೇತ್ರಗಳಲ್ಲಿ ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ . ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಸಿಗಲಿದೆ. ಪೋಷಕರೊಂದಿಗೆ ನಿಮ್ಮ ಸಂಬಂಧ ಬಲವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಉತ್ತಮವಾಗಿರುತ್ತದೆ ಮತ್ತು ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ದಕ್ಷತೆ ಹೆಚ್ಚಾಗಲಿದೆ. ನಿಮ್ಮ ಸಂಭಾಷಣಾ ಕೌಶಲ್ಯಗಳು ಮತ್ತು ಹಾಸ್ಯ ಪ್ರಜ್ಞೆಯ ಕಾರಣ ನಿಮ್ಮತ್ತ ಜನರು ಆಕರ್ಷಿತರಾಗಲಿದ್ದಾರೆ. ಗುರು-ಹಿರಿಯರ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದೆ ಮತ್ತು ಅವರ ಸಹಕಾರದಿಂದ ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲು ನಿಮಗೆ ಸಾಧ್ಯವಾಗಲಿದೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಸಂಬಂಧ ಉತ್ತಮವಾಗಿರಲಿದೆ ಮತ್ತು ನೀವು ಕುಟುಂಬ ವಿಸ್ತರಣೆಯಲ್ಲಿ ಯಶಸ್ಸನ್ನು ಪಡೆಯಬಹುದು. ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ನೀವು ಹಳೆಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.  

3 /6

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಅಷ್ಟಮ ಭಾವದಲ್ಲಿ ಬುಧ ನೆರನಡೆಯ ಮೂಲಕ ಸಂಚರಿಸಲಿದ್ದಾನೆ  ಆಷ್ಟಮ ಭಾವದಲ್ಲಿ ಬುಧದ ಉಪಸ್ಥಿತಿ ನಿಮ್ಮ ಜೀವನದಲ್ಲಿ ಹೊಂದಾಣಿಕೆ ತರುತ್ತದೆ. ಹಠಾತ್ ನೆರವೇರುವ ಕಾರ್ಯಗಳಿಂದ ನೀವು ಪ್ರಯೋಜನ ಪಡೆಯುವಿರಿ. ನಿಮಗೆ ಪೂರ್ವಜರ ಆಸ್ತಿ, ಪಿತ್ರಾರ್ಜಿತ ಧನ ಅಥವಾ ಯಾವುದೇ ಗುಪ್ತ ನಿಧಿ ಸಿಗುವ ಸಾಧ್ಯತೆ ಇದೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಅವಧಿಯಲ್ಲಿ ನೀವು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ಆಧ್ಯಾತ್ಮಿಕ ಚಟುವಟಿಕೆಗಳತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಇದರಿಂದ ನಿಮ್ಮ ತಾರ್ಕಿಕ ಸಾಮರ್ಥ್ಯವು ಹೆಚ್ಚಾಗಲಿದೆ. ನಿಮ್ಮ ದಕ್ಷತೆಯ ಆಧಾರದ ಮೇಲೆ ನೀವು ನಿಮ್ಮ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಹಠಾತ್ ಬಡ್ತಿ ಆದೇಶ ಪ್ರಾಪ್ತಿಯಾಗಬಹುದು. ವ್ಯಾಪಾರಸ್ಥರಿಗೆ ವ್ಯಾಪಾರ ವಿಷ್ಟರಣೆಗೆ ಅವಕಾಶ ಸಿಗಲಿದೆ ಮತ್ತು ಇದರಿಂದ ನಿಮಗೆ ಉತ್ತಮ ಹಣಕಾಸಿನ ಲಾಭ ಸಿಗಲಿದೆ. ಆದಾಗ್ಯೂ, ಹೊಸ ವ್ಯಾಪಾರ ಹೂಡಿಕೆಗಳನ್ನು ಮಾಡಲು ಇದು ಉತ್ತಮ ಸಮಯವಲ್ಲ. ಆರೋಗ್ಯದ ಕಾಳಜಿವಹಿಸಿ ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದೇಶಕ್ಕೆ ಹೋಗುವ ನಿಮ್ಮ ಕನಸು ಈಡೇರುವ ಸಾಧ್ಯತೆ ಇದೆ.   

4 /6

ಧನು ರಾಶಿ: ಮೇಷ ರಾಶಿಯಲ್ಲಿ ಬುಧ ನೇರ ನಡೆ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿರಲಿದೆ. ಇದರಿಂದ ನಿಮ್ಮ ಬುದ್ಧಿವಂತಿಕೆ ಹೆಚ್ಚಾಗಲಿದೆ. ನಿಮ್ಮ ಆಲೋಚನಾ ಸಾಮರ್ಥ್ಯ ಮತ್ತು ತಾರ್ಕಿಕ ಸಾಮರ್ಥ್ಯ ಹೆಚ್ಚಾಗಲಿದೆ. ನೀವು ವಿಷಯಗಳನ್ನು ಸರಿಯಾಗಿ ಊಹಿಸಲು ಸಾಧ್ಯವಾಗಲಿದೆ. ಆದರೆ, ಈ ಅವಧಿಯಲ್ಲಿ  ನೀವು ಬೆಟ್ಟಿಂಗ್, ಲಾಟರಿ ಮತ್ತು ಷೇರು ಮಾರುಕಟ್ಟೆಗಳತ್ತ ಹೆಚ್ಚು ಆಕರ್ಷಿತರಾಗುವಿರಿ, ಆದರೆ ಪರಿಸ್ಥಿತಿಗಳನ್ನು ನೋಡಿ ಮತ್ತು ಅನುಭವಿಗಳ ಸಲಹೆಯನ್ನು ಪಡೆದ ನಂತರವೇ ಈ ದಿಕ್ಕಿನಲ್ಲಿ ಮುಂದುವರಿಯಿರಿ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಬಯಸಿದರೆ ಈ ಸಮಯದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ವ್ಯಾಪಾರದಲ್ಲಿ ವಿಸ್ತರಣೆಯಾಗಬಹುದು ಮತ್ತು ವ್ಯಾಪಾರ ಲಾಭದ ಸಾಧ್ಯತೆಗಳಿವೆ. ನಿಮ್ಮ ಸೃಜನಶೀಲತೆ ಹೆಚ್ಚಾಗಲಿದೆ ಮತ್ತು ಬರವಣಿಗೆಯ ಕ್ಷೇತ್ರದಲ್ಲೂ ನೀವು ಕೆಲವು ಕೆಲಸಗಳನ್ನು ಮಾಡಲು ಬಯಸುತ್ತೀರಿ.   

5 /6

ಮಕರ ರಾಶಿ: ಬುಧನ ಈ ನೇರ ನಡೆ ಮಕರ ರಾಶಿಯ ಜಾತಕದವರ ಪಾಲಿಗೆ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ, ಬುಧನ ಈ ನೇರ ನಡೆ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿರಲಿದೆ.  ಈ ಅವಧಿಯಲ್ಲಿ, ನೀವು ಚರ ಮತ್ತು ಸ್ಥಿರ ಆಸ್ತಿಯ ಲಾಭವನ್ನು ಪಡೆಯಬಹುದು, ಆದರೆ ನಿಮ್ಮ ವೈಯಕ್ತಿಕ ಜೀವನವನ್ನು ಸುಧಾರಿಸಲು ನೀವು ಸ್ವಲ್ಪ ಹೆಚ್ಚು ಪ್ರಯತ್ನಗಳನ್ನು ಮಾಡಬೇಕಾಗಲಿದೆ. ನಿಮ್ಮ ತಾಯಿಯೊಂದಿಗೆ ಯಾವುದೇ ಕಾರಣವಿಲ್ಲದೆ ಜಗಳವಾಗದಂತೆ ನೀವು ಕಾಳಜಿ ವಹಿಸಬೇಕು, ದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನವು ಅನುಕೂಲಕರವಾಗಿರುತ್ತದೆ. ನಿಮ್ಮ ಕಾರ್ಯಕ್ಷಮತೆ ನಿಮ್ಮನ್ನು ಇತರರಿಗಿಂತ ಮುಂದಿಡುತ್ತದೆ. ವ್ಯಾಪಾರದಲ್ಲಿಯೂ ಲಾಭದ ಸಾಧ್ಯತೆ ಇರಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ  ಆರ್ಥಿಕವಾಗಿ ಈ ಸಮಯ ಉತ್ತಮವಾಗಿರುತ್ತದೆ. ನಿಮಗೆ ಬರಬೇಕಾದ ಮತ್ತು ದೀರ್ಘ ಕಾಲದಿಂದ ಸಿಲುಕಿಕೊಂಡ ಹಣ ನಿಮ್ಮತ್ತ ಮರಳಲಿದೆ.   

6 /6

ಮೀನ ರಾಶಿ: ಮೀನ ರಾಶಿಯ ಜಾತಕದವರಿಗೆ ಬುಧನ ಈ ನೇರ ನಡೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ಬುಧನ ಈ ನೇರ ನಡೆ ಇರಲಿದೆ. ಇದರಿಂದ ಹಳೆ ವಿವಾದಗಳಿಂದ ನಿಮಗೆ ಮುಕ್ತಿ ಸಿಗಲಿದೆ. ಕೌಟುಂಬಿಕ ವಾತಾವರಣ ಸುಧಾರಿಸಲಿದೆ. ಸಾಮಾಜಿಕವಾಗಿ ನೀವು ಹೆಚ್ಚು ಕ್ರಿಯಾಶೀಲರಾಗುವಿರಿ. ಸ್ನೇಹಿತರ ವಲಯ ಹೆಚ್ಚಾಗಲಿದೆ. ಆರ್ಥಿಕವಾಗಿ ಈ ಅವಧಿ ಮಿಮ್ಮ ಪಾಲಿಗೆ ಧನಾತ್ಮಕವಾಗಿರಲಿದೆ. ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದೆ. ಧನಲಾಭದ ಬಲವಾದ ಅವಕಾಶಗಳಿವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದನ್ನು ನೀವು ನೋಡಬಹುದು. ನಿಮ್ಮ ಮಾತಿನಲ್ಲಿ ಮಧುರತೆ ಹೆಚ್ಚಾಗಲಿದೆ. ಜನರ ಮೇಲೆ ನಿಮ್ಮ ಮಾತಿನ ಪ್ರಭಾವ ಬೀರುವಲ್ಲಿ ನೀವು ಯಶಸ್ವಿಯಾಗುವಿರಿ. ಬಾಳಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಬಲವಾಗಲಿದೆ. ಆಸ್ತಿ ಖರೀದಿಯ ಬಲವಾದ ಯೋಗಗಳಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)