ಈ ಪ್ಲಾನ್ ಬಳಸುವ ಬಳಕೆದಾರರಿಗೆ ಇಂಟರ್ ನೆಟ್ ಡೇಟಾ ಕೊನೆಗೊಳ್ಳುವ ಆತಂಕ ಇಲ್ಲ. ಈ ರಿಚಾರ್ಜಿನಲ್ಲಿ ಅನ್ ಲಿಮಿಟೆಡ್ ಡೇಟಾ ಸಿಗಲಿದೆ.
ಬೆಂಗಳೂರು : ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಅಭೂತಪೂರ್ವ ಪ್ರಿಪೆಯ್ಡ್ ಆಫರ್ ಅನ್ನು ಪರಿಚಯಿಸುತ್ತಿದೆ. ಗ್ರಾಹಕರ ಅಗತ್ಯಗಳಿಗೆ ಅನುಸಾರವಾಗಿ ಬಿಎಸ್ಎನ್ಎಲ್ ಈ ಪ್ರಿಪೆಯ್ಡ್ ರಿಚಾರ್ಜ್ ಪ್ಲಾನ್ (Prepaid recharge plan) ಹೊರ ತರುತ್ತಿದೆ. ಆ ಪ್ಲಾನ್ ಯಾವುದು.? ಅದರ ಲಾಭ ಏನು.? ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇದು 398 ರೂಪಾಯಿಯ ರಿಚಾರ್ಜ್ ಪ್ಲಾನ್ : ಬಿಜಿಆರ್.ಇನ್ ವೆಬ್ ಸೈಟ್ ಪ್ರಕಾರ ಬಿಎಸ್ ಎನ್ ಎಲ್ ಹೊಸ ಪ್ರಿಪೆಯ್ಡ್ ಪ್ಲಾನ್ ಪರಿಚಯಿಸುತ್ತಿದೆ. ಇದರ ರಿಚಾರ್ಜ್ ಮೌಲ್ಯ 398 ರೂಪಾಯಿ. ಈ ಪ್ಲಾನ್ ಖರೀದಿಸಿದರೆ ಎಲ್ಲಾ ಸೌಲಭ್ಯಗಳೂ ಅನ್ ಲಿಮಿಟೆಡ್ ಇರಲಿವೆ. ಅತ್ಯಧಿಕ ಡೇಟಾ, ಮತ್ತು ಕಾಲ್ ಮಾಡುವವರಿಗೆ ಹೇಳಿ ಮಾಡಿಸಿದ ಪ್ಲಾನ್ ಇದಾಗಿದೆ.
ಡೇಟಾ ಖತಂ ಆಗೋದೇ ಇಲ್ಲ..! ಈ ಪ್ಲಾನ್ ಬಳಸುವ ಬಳಕೆದಾರರಿಗೆ ಇಂಟರ್ ನೆಟ್ ಡೇಟಾ ಕೊನೆಗೊಳ್ಳುವ ಆತಂಕ ಇಲ್ಲ. ಈ ರಿಚಾರ್ಜಿನಲ್ಲಿ ಅನ್ ಲಿಮಿಟೆಡ್ ಡೇಟಾ ಸಿಗಲಿದೆ. ಡೇಟಾ ಬಳಕೆಗೆ ಯಾವುದೇ ಮಿತಿ ಇರುವುದಿಲ್ಲ. ಬೇಕಾದಷ್ಟು ಡೇಟಾ ಬಳಸಬಹುದು.
ಸಿಗಲಿದೆ ಅನ್ ಲಿಮಿಟೆಡ್ ಕಾಲಿಂಗ್ : ಈ ರಿಚಾರ್ಜ್ ನಲ್ಲಿ ಅನ್ ಲಿಮಿಟೆಡ್ ಡೇಟಾ ಜೊತೆಗೆ ಅನ್ ಲಿಮಿಟೆಡ್ ಕಾಲಿಂಗ್ ಸೌಲಭ್ಯ ಕೂಡಾ ಇದೆ. ಯಾವುದೇ ಮೊಬೈಲ್ ನೆಟ್ ವರ್ಕ್ ಗೆ ಎಷ್ಟು ಬೇಕಾದರೂ ಕಾಲ್ ಮಾಡಬಹುದಾಗಿದೆ.
30 ದಿನದ ವಾಲಿಡಿಟಿ : ಆದರೆ ಇದರ ವ್ಯಾಲಿಡಿಟಿ 30 ದಿನಗಳಷ್ಟಾಗಿದೆ. 30 ದಿನಗಳಿಗೆ ಎಷ್ಟು ಬೇಕಾದರೂ ಡೇಟಾ ಮತ್ತು ಕಾಲ್ ಸೌಲಭ್ಯ ಬಳಸಬಹುದಾಗಿದೆ.
ಸದ್ಯಕ್ಕೆ ಈ ರಾಜ್ಯದಲ್ಲಿ ಮಾತ್ರ : ವರದಿ ಪ್ರಕಾರ ಈ ಪ್ಲಾನ್ ಸೌಲಭ್ಯ ಸದ್ಯ ತಮಿಳುನಾಡಿನ ಚೆನ್ನೈ ಟೆಲಿಕಾಂ ಸರ್ಕಲ್ ಅಲ್ಲದೆ ಕೆಲವು ಆಯ್ದ ಟೆಲಿಕಾಂ ಸರ್ಕಲ್ ನಲ್ಲಿ ಮಾತ್ರ ಲಭ್ಯವಿದೆ.