Guru Pushya Yoga 2021: ಇಂದು ಗುರುಪುಶ್ಯಾಮೃತ ಯೋಗ, ಶುಭ ಕಾರ್ಯಕ್ಕೆ ಯಾವ ಸಮಯ ಸರಿ

Today's Panchanga, 25 February 25, 2021: ಹಿಂದೂ ಪಂಚಾಂಗದ ಪ್ರಕಾರ ಇಂದು ಫೆಬ್ರವರಿ 25, 2021 ಗುರುವಾರ. ಈ ದಿನ ಶ್ರೀವಿಷ್ಣುವಿನ ಸಮರ್ಪಿತ. ಇಂದು ನೀವು ಯಾವುದಾದರೊಂದು ಶುಭ ಕಾರ್ಯ ಮಾಡಲು ಬಯಸುತ್ತಿದ್ದರೆ, ಪಂಚಾಂಗದ ಸಹಾಯದಿಂದ ಯಾವ ಸಮಯ ಸೂಕ್ತ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

ನವದೆಹಲಿ: Importance Of Guru Pushya Yog 2021 - ಮಾಧ್ಯಮದಿಂದ ಹಿಡಿದು ಸಮಯ ಹಾಗೂ ಕಾಲದ ಸ್ಪಸ್ಥ ಚಿತ್ರಣವೇ ಪಂಚಾಗ. ಪಂಚಾಂಗದ (Panchang) ಮೂಲಕ ನಾವು ಶುಭ ಮುಹೂರ್ತ, ನಕ್ಷತ್ರ, ತಿಥಿ, ಕಾರಣ, ಸೂರ್ಯೋದಯ, ಸೂರ್ಯಾಸ್ತ ಇತ್ಯಾದಿ ಮಾಹಿತಿಗಳನ್ನು ಪಡೆಯುತ್ತೇವೆ. ಒಂದು ವೇಳೆ ನೀವೂ ಕೂಡ ನಿಮ್ಮ ದಿನದ ಆರಂಭವನ್ನು ಪಂಚಾಂಗದ ಮಾಧ್ಯಮದ ಮೂಲಕ ರಾಹುಕಾಲ, ಯಮಘಂಟ ಕಾಲ ಇತ್ಯಾದಿಗಳನ್ನು ಆಧರಿಸಿ ಆರಂಭಿಸಿದ ಜೀವನದ ಬಹುತೇಕ ಅಡೆತಡೆಗಳು ದೂರವಾಗುತ್ತವೆ. ಇಂದು 25 ಫೆಬ್ರುವರಿ 2021, ಗುರುವಾರ. ಗುರುವಾರ ಶ್ರೀ ವಿಷ್ಣುವಿಗೆ (Shri Vishnu) ಸಮರ್ಪಿತ ದಿನ. ಪಂಚಾಂಗದ ಅನುಸಾರ ಇಂದು ಗುರುವಾರದ ಜೊತೆಗೆ ಪುಷ್ಯ ನಕ್ಷತ್ರ ಸೇರಿರುವುದರಿಂದ ಇಂದು ಗುರುಪುಷ್ಯ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ದಿನವನ್ನು ತುಂಬಾ ಶುಭದಿನ ಎಂದು ಶಾಸ್ತ್ರಗಳಲ್ಲಿ ಪರಿಗಣಿಸಲಾಗಿದೆ . ಇಂದಿನ ದಿನ ನೀವು ಜಮೀನು, ನಿವೇಶನ, ವಾಹನ, ಮನೆ ಇತ್ಯಾದಿಗಳ ಖರೀದಿಗೆ ಉತ್ತಮವಾಗಿರುತ್ತದೆ ಹಾಗೂ ಯಾವುದೇ ಒಂದು ಶುಭ ಕಾರ್ಯ ಸಿದ್ಧಿಗೂ ಕೂಡ ಇದೊಂದು ಶುಭ ದಿನ. 

 

ಇದನ್ನೂ ಓದಿ- New Dress Wearing: ವಾರದ ಈ ದಿನಗಳಂದು ಹೊಸ ಬಟ್ಟೆ ಧರಿಸಬೇಡಿ, ಸಂಕಷ್ಟ ಎದುರಾದೀತು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಇಂದಿನ ಪಂಚಾಂಗ (Today's Panchang 25 February 2021):  ಇಂದಿನ ತಿಥಿ -  ತ್ರಯೋದಶಿ: ಸಂಜೆ 5.20ರವರೆಗೆ. ನಂತರ ಚತುರ್ದಶಿ ತಿಥಿ ಆರಂಭ.

2 /6

2. ಸೂರ್ಯೋದಯ-ಸೂರ್ಯಾಸ್ತ ಹಾಗೂ ಚಂದ್ರೋದಯ - ಚಂದ್ರಾಸ್ತ ಸಮಯ: ಸೂರ್ಯೋದಯ - ಬೆಳಗ್ಗೆ 06:41ಕ್ಕೆ,  ಸೂರ್ಯಾಸ್ತದ ಸಮಯ - ಸಂಜೆ 06:11ಕ್ಕೆ,  ಚಂದ್ರೋದಯ - ಮಧ್ಯಾಹ್ನ 04.11ಕ್ಕೆ, ಚಂದ್ರಾಸ್ತದ ಸಮಯ - ಬೆಳಗಿನ ಜಾವ 06:06ಕ್ಕೆ.

3 /6

3. ಹಿಂದೂ ಲೂನಾರ್ ದಿನಾಂಕ - ಶಕ ಸವಂತಃ , 1942 ಶರ್ವರಿ. ವಿಕ್ರಮ ಸವಂತಃ, 2077, ಪ್ರಮಾಥಿ. ಗುಜರಾತಿ ಸವಂತಃ, 2077 ಪರಿಧಾವಿ. ಚಂದ್ರಮಾಸ - ಮಾಘ ಪೂರ್ಣಿಮಾಂತ, ಮಾಘ ಅಮಾಂತ. ನಕ್ಷತ್ರ - ಪುಷ್ಯ ನಕ್ಷತ್ರ ಮಧ್ಯಾಹ್ನ 1.17ರವರೆಗೆ. 

4 /6

4. ಇಂದಿನ ದಿಶಾಶೂಲ - ದಕ್ಷಿಣ. ಇಂದಿನ ಕಾರಣ - ತೌತಿಲ್(ಸಂಜೆ 5.20ರವರೆಗೆ), ಗರ್ (ಬೆಳಗ್ಗೆ 4.41ರವರೆಗೆ ), ಇಂದಿನ ಯೋಗ- ಶೋಭನ್ (ರಾತ್ರಿ 1.07ರವರೆಗೆ), ಇಂದಿನ ವಾರ-ಗುರುವಾರ, ಇಂದಿನ ಪಕ್ಷ - ಶುಕ್ಲ ಪಕ್ಷ.

5 /6

5. ಇಂದಿನ ಶುಭ ಮೂಹುರ್ತ(Shubh-Ashubh Muhurat) - ಮಧ್ಯಾಹ್ನ 12.03 ರಿಂದ ಮಧ್ಯಾಹ್ನ 12.49ರವರೆಗೆ. ಇಂದಿನ ಅಶುಭ ಮುಹೂರ್ತಗಳು - ಮಧ್ಯಾಹ್ನ 1.52 ರಿಂದ 3.18ರವರೆಗೆ (ರಾಹು ಕಾಲ ), 10.31 ರಿಂದ 11.17ರವರೆಗೆ(ದುರ್ಮುಹೂರ್ತ), 9.33 ರಿಂದ 11ರವರೆಗೆ (ಗುಳಿ ಕಾಲ), 7.27 ರಿಂದ 8.13 ರವರೆಗೆ (ಯಮಘಂಟ ಕಾಲ)

6 /6

6. ಚಂದ್ರಬಲ ಹಾಗೂ ತಾರಾಬಲ: ತಾರಾಬಲ- ಅಶ್ವಿನಿ, ಕೃತಿಕಾ, ಮೃಗಶಿರಾ, ಪುನರ್ವಸು, ಪುಷ, ಅಶ್ಲೇಷಾ, ಮಘಾ, ಉತ್ತರ ಫಾಲ್ಗುಣಿ, ಚಿತ್ರಾ, ವಿಶಾಖಾ, ಅನುರಾಧಾ, ಜೇಷ್ಠ, ಮೂಲ, ಉತ್ತರಾಷಾಢ, ಧನಿಷ್ಟ, ಪೂರ್ವಭಾದ್ರಪದ, ಉತ್ತರ ಭಾದ್ರಪದ, ರೇವತಿ. ಚಂದ್ರಬಲ  -  ವೃಷಭ, ಕರ್ಕ, ಕನ್ಯಾ, ತುಲಾ, ಕುಂಭ.