Saeeda Khan: ತಮ್ಮ ವ್ಯತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ ಅನೇಕ ನಾಯಕಿಯರು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ, 50ರ ದಶಕದ ನಟಿಯೊಬ್ಬರು ಇದ್ದರು, ಅವರ ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತಿತ್ತು ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಮಾನವಾದ ನೋವನ್ನು ಎದುರಿಸಬೇಕಾಯಿತು. ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಗಳಿಸಿ ಸ್ವಲ್ಪ ಸಮಯದ ನಂತರ ಅನಾಮಧೇಯಳಾದ ಆ ನಟಿ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ತಮ್ಮ ವ್ಯತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ ಅನೇಕ ನಾಯಕಿಯರು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ, 50ರ ದಶಕದ ನಟಿಯೊಬ್ಬರು ಇದ್ದರು, ಅವರ ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತಿತ್ತು ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಮಾನವಾದ ನೋವನ್ನು ಎದುರಿಸಬೇಕಾಯಿತು. ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಗಳಿಸಿ ಸ್ವಲ್ಪ ಸಮಯದ ನಂತರ ಅನಾಮಧೇಯಳಾದ ಆ ನಟಿ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ...
ಆ ನಟಿ ಬೇರೆ ಯಾರೂ ಅಲ್ಲ, 50 ರ ದಶಕದ ಪ್ರಸಿದ್ದ ಮತ್ತು ಸುಂದರ ನಟಿ ಸಯೀದಾ ಖಾನ್. ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಹೆಸರನ್ನು ಗಳಿಸಿದರು, ಆದರೆ ಅವರು ದೊಡ್ಡ ಪರದೆಯಿಂದ ಅನಾಮಧೇಯರಾದ ಸಮಯ ಅವರ ಜೀವನದಲ್ಲಿ ಬಂದುಬಿಟ್ಟಿತ್ತು. ಆಕೆ ಒಂದು ದಿನ ತನ್ನ ಪತಿಯಿಂದಲೇ ಕೊಲೆಯಾಗಿ ಹೊಗಿದ್ದಳು
ನಟಿ ಸಯೀದಾ ಖಾನ್ ಕೇವಲ 11 ನೇ ವರ್ಷದವರಾಗಿದ್ದಾಗ ಚಿತ್ರರಂಗಕ್ಕೆ ಕಾಲಿಟ್ಟರು ಮತ್ತು ಕಡಿಮೆ ಸಮಯದಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರ ಮನ ಗೆದ್ದರು. ನಟಿ ತನ್ನ ವೃತ್ತಿಜೀವನವನ್ನು ನರ್ತಕಿಯಾಗಿ ಪ್ರಾರಂಭಿಸಿದಳು .
ನಿರ್ಮಾಪಕ ಬ್ರಿಜ್ ಸದನಾ ಅವರನ್ನು ಪ್ರೀತಿಸಿ ಮದುವೆಯಾದ ನಟಿ ಸಯೀದಾ ಖಾನ್ ಜೀವನದಲ್ಲಿ ಮತ್ತೊಂದು ತಿರುವು ಸಿಕ್ಕಿತು. ನಟಿ ಸಯೀದಾ ಮುಸ್ಲಿಂ ಕುಟುಂಬಕ್ಕೆ ಸೇರಿದವರು, ಆದರೆ ಬ್ರಿಜ್ ಕಟ್ಟಾ ಹಿಂದೂ. ನಟಿ ಸಯೀದಾ ಖಾನ್ ಬ್ರಿಜ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಇದೇ ಕಾರಣದಿಂದಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಬ್ರಿಜ್ ಅವರನ್ನು ವಿವಾಹವಾದರು.
ಮಾಧ್ಯಮ ವರದಿಗಳ ಪ್ರಕಾರ, ಅವರು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದರಂತೆ ಮತ್ತು ಸಯೀದಾ ಖಾನ್ ಅವರ ಹೆಸರನ್ನು ಸುಧಾ ಸದನಾ ಎಂದು ಬದಲಾಯಿಸಿಕೊಂಡಿದ್ದರಂತೆ. ಮದುವೆಯ ನಂತರ ಈ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ತಾಯಿಯಾದ ನಂತರ, ನಟಿ ಚಿತ್ರರಂಗದಿಂದ ದೂರವಿದ್ದು, ತನ್ನ ಮನೆಯವರನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ.
ಅನುಮಾನದ ಕಾರಣದಿಂದ ಪತಿ ಅವಳನ್ನು ಕೊಲೆ ಮಾಡುವ ಸಮಯ ಬರುವವರೆಗೆ ನಟಿಯ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಸಯೀದಾ ಖಾನ್ ತನ್ನ ಜೀವನವನ್ನು ತುಂಬಾ ಸಂತೋಷದಿಂದ ಕಳೆಯುತ್ತಿದ್ದಾಗ ಒಂದು ಅನುಮಾನ ಅವಳ ಸಂತೋಷದ ಜೀವನವನ್ನು ಹಾಳುಮಾಡಿತ್ತದೆ. ವರದಿಗಳ ಪ್ರಕಾರ, ನಟಿಯ ಪತಿ ಪ್ರತಿದಿನ ಮದ್ಯ ಸೇವಿಸಿದ ನಂತರ ಅವಳಿಗೆ ಹೊಡೆಯುತ್ತಿದ್ದನಂತೆ. ದಿನದಿಂದ ದಿನಕ್ಕೆ ಅವರ ನಡುವೆ ಜಗಳಗಳು ಹೆಚ್ಚಾದವು ಮತ್ತು ಪತಿ ಬ್ರಿಜ್ ಸದನಾ ಪಾರ್ಟಿಗಳಲ್ಲಿಯೂ ಸಹ ಅವಳೊಂದಿಗೆ ಚೆನ್ನಾಗಿ ವರ್ತಿಸಲಿಲ್ಲ.
ಹೀಗೆ ನಟಿ ತನ್ನ ವೈಯಕ್ತಿಕ ಜೀವನದಲ್ಲಿ ತುಂಬಾ ಕಷ್ಟಗಳನ್ನು ಎದುರಿಸುತ್ತಲೇ ಬರುತ್ತಾರೆ. ನಂತರ ಒಂದು ದಿನ ಸಯೀದಾ ಖಾನ್ ಅವರ ಮಗ ಕಮಲ್ ಸದನ ಅವರ 20 ನೇ ಹುಟ್ಟುಹಬ್ಬದಂದು ಅವರ ಪತಿ ಜಗಳದ ನಂತರ ಸಯೀದಾಳನ್ನು ಗುಂಡಿಕ್ಕಿ ಕೊಂದು ಬಿಡುತ್ತಾನೆ.