Lucky Birds: ಈ ಸುಂದರ ಪಕ್ಷಿಗಳು ನಿಮ್ಮ ಮನೆಗೆ ಭೇಟಿ ನೀಡಿದರೆ, ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ!

Lucky Birds Good Luck: ಹಿಂದೂ ಧರ್ಮದಲ್ಲಿ, ದೇವರುಗಳ ಜೊತೆಗೆ, ಭೂಮಿ-ಆಕಾಶ, ಮರಗಳು-ಗಿಡಗಳು ಮತ್ತು ಜಾನುವಾರುಗಳು ಅಂದರೆ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸಹ ಪೂಜಿಸಲಾಗುತ್ತದೆ.

Lucky Birds Good Luck: ಹಿಂದೂ ಧರ್ಮದಲ್ಲಿ, ದೇವರುಗಳ ಜೊತೆಗೆ, ಭೂಮಿ-ಆಕಾಶ, ಮರಗಳು-ಗಿಡಗಳು ಮತ್ತು ಜಾನುವಾರುಗಳು ಅಂದರೆ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸಹ ಪೂಜಿಸಲಾಗುತ್ತದೆ. ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯಲ್ಲಿ ಸದಾ ಸುಖ, ಸಂಪತ್ತು ಮತ್ತು ಮಾನಸಿಕ ನೆಮ್ಮದಿ ಇರಬೇಕೆಂದು ಬಯಸುತ್ತಾನೆ. ಇದಕ್ಕಾಗಿ, ಜನರು ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದ ಪರಿಹಾರಗಳನ್ನು ಅನುಸರಿಸುತ್ತಾರೆ, ಜೊತೆಗೆ ಪೂಜಾ ಪಾಠಗಳು, ಜ್ಯೋತಿಷ್ಯ ಪರಿಹಾರಗಳು, ಲಾಲ್ ಕಿತಾಬ್, ಟ್ಯಾರೋ ಕಾರ್ಡ್‌ಗಳ ತಂತ್ರಗಳನ್ನು ಅನುಸುಸರಿಸುತ್ತಾರೆ. ವಾಸ್ತು ಶಾಸ್ತ್ರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರಲು ಮತ್ತು ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಸಹಾಯ ಮಾಡುತ್ತದೆ, ಇಂದು ನಾವು ನಿಮಗೆ ಕೆಲ ಪಕ್ಷಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಮನೆಗೆ ಅವುಗಳ ಆಗಮನ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಅದೃಷ್ಟವನ್ನು ಬೆಳಗಿಸುವ ಸಂಕೇತಗಳನ್ನು ನೀಡುವ ಆ ಪಕ್ಷಿಗಳು ಯಾವುವು ಒಮ್ಮೆ ತಿಳಿದುಕೊಳ್ಳೋಣ ಬನ್ನಿ, 

ಇದನ್ನೂ ಓದಿ-Palmistry: ಮದುವೆಯ ನಂತರ ಈ ಜನರ ಭವಿಷ್ಯ ಇದ್ದಕ್ಕಿದ್ದಂತೆ ಹೊಳೆಯುತ್ತದೆ..!

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ವಾಸ್ತು ಶಾಸ್ತ್ರದ ಪ್ರಕಾರ, ಈ ಪಕ್ಷಿಗಳು ನಮ್ಮ ಮನೆಗೆ ಬರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನೀಲಕಂಠ ಪಕ್ಷಿಯ ಬಗ್ಗೆ ಹೇಳುವುದಾದರೆ, ವಿಶೇಷವಾಗಿ ದಸರಾ ದಿನದಂದು ಅದನ್ನು ನೋಡುವುದರಿಂದ, ಅದೃಷ್ಟ ಹೆಚ್ಚಾಗುತ್ತದೆ.  

2 /6

2. ಸಾಮಾನ್ಯವಾಗಿ ಗೂಬೆಯನ್ನು ತಾಯಿ ಲಕ್ಷ್ಮಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ಅಂದರೆ ನಿಮ್ಮ ಮನೆ, ಅಂಗಡಿ ಅಥವಾ ಇನ್ನಾವುದೇ ಆಸ್ತಿಯ ಬಳಿ ನೀವು ಗೂಬೆಯನ್ನು ಕಂಡರೆ, ನಿಮಗೆ ಏನಾದರೂ ಒಳ್ಳೆಯದು ಕಾದಿದೆ ಎಂಬುದರ ಸಂಕೇತವಾಗಿದೆ.  

3 /6

3. ವಾಸ್ತು ಶಾಸ್ತ್ರದ ಪಂಡಿತರ ಪ್ರಕಾರ ನಿಮ್ಮ ಮನೆಗೆ ಗಿಳಿ ಆಕಸ್ಮಿಕವಾಗಿ ಬಂದು ಕೆಲಕಾಲ ಕುಳಿತುಕೊಂಡರೆ ಅದು ನಿಮಗೆ ಎಲ್ಲಿಂದಲೋ ಆಕಸ್ಮಿಕ ಧನಲಾಭವಾಗಲಿದೆ ಎಂಬುದರ ಸಂಕೇತವಾಗಿದೆ.   

4 /6

4. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಒಂದು ಹಕ್ಕಿ ಗೂಡು ಕಟ್ಟಿದ್ದರೆ, ಮನೆಯಲ್ಲಿ ಶೀಘ್ರದಲ್ಲಿಯೇ ಸಂತಸದ ವಾತಾವರಣ ನಿರ್ಮಾಣಗೊಳ್ಳಲಿದೆ ಎಂಬುದರ ಸಂಕೇತವಾಗಿದೆ. ಇದೆ ವೇಳೆ ಗೂಡಿನಲ್ಲಿ ಹಕ್ಕಿಯ ಆಗಮನವು ಯಾವುದೇ ರೀತಿಯ ಅಡಚಣೆಯನ್ನು ನಿವಾರಿಸುವ ಸಂಕೇತವಾಗಿದೆ.  

5 /6

5. ಕಾಗೆ ಮನೆಗೆ ಅತಿಥಿಗಳ ಆಗಮನವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಇದೇ ವೇಳೆ, ಕೆಲವು ಜ್ಯೋತಿಷಿಗಳ ಪ್ರಕಾರ, ಮನೆಗೆ ಕಾಗೆಗಳ ಆಗಮನವನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  

6 /6

6. ಗ್ರಾಮದಲ್ಲಿ ವಾಸಿಸುವ ಹಿರಿಯರು ಹೇಳುವ ಪ್ರಕಾರ ಮತ್ತು  ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆ ಬಳಿ ಅಥವಾ ನಿಮ್ಮ ಮನೆಯ ಮಾಳಿಗೆಯ ಮೇಲೆ ಹುಂಜ ಬಂದರೆ ಅಥವಾ ಅದರ ಕೂಗು ಕೇಳಿಸಿದರೆ ನೀವು ಶೀಘ್ರದಲ್ಲಿಯೇ ನಿಮ್ಮ ಹಳೆ ಸ್ನೇಹಿತರು ಮತ್ತು ಹಳೆ ಸಹೋದ್ಯೋಗಿಗಳನ್ನು ಭೇಟಿಯಾಗುವಿರಿ ಎಂಬುದರ ಸಂಕೇತವಾಗಿದೆ.