Chanakya Niti Quotes: ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕಾರಣಿಯಾಗಿದ್ದರು. ಚಾಣಕ್ಯ ತನ್ನ ನೀತಿಗಳ ಬಲದಿಂದ ಚಂದ್ರಗುಪ್ತ ಮೌರ್ಯನಂತಹ ಓರ್ವ ಸಾಮಾನ್ಯ ಮಗುವನ್ನು ಚಕ್ರವರ್ತಿಯಾಗಿ ಮಾಡಿದ.
Chanakya Niti Quotes: ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕಾರಣಿಯಾಗಿದ್ದರು. ಚಾಣಕ್ಯ ತನ್ನ ನೀತಿಗಳ ಬಲದಿಂದ ಚಂದ್ರಗುಪ್ತ ಮೌರ್ಯನಂತಹ ಓರ್ವ ಸಾಮಾನ್ಯ ಮಗುವನ್ನು ಚಕ್ರವರ್ತಿಯಾಗಿ ಮಾಡಿದ. ಚಾಣಕ್ಯ ನೀತಿಯಲ್ಲಿ ಜೀವನದ ಹಲವು ಸಂಗತಿಗಳನ್ನು ಉಲ್ಲೇಖಿಸಲಾಗಿದ್ದು, ಜೀವನದಲ್ಲಿ ಹೇಗೆ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಲಾಗಿದೆ. ಕಷ್ಟದ ಸಮಯವನ್ನು ಹೇಗೆ ಜಯಿಸಬೇಕು. ಅಲ್ಲದೆ ಪತಿ-ಪತ್ನಿಯರ ಸಂಬಂಧದ ಬಗ್ಗೆಯೂ ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಕೆಲ ವಿಷಯಗಳನ್ನು ಯಾರಿಗೂ ಕೂಡ ಹೇಳಬಾರದು ಎನ್ನಲಾಗಿದೆ. ಅದು ನಿಮಗೆ ಎಷ್ಟೇ ವಿಶೇಷವಾಗಿದ್ದರೂ ಪರವಾಗಿಲ್ಲ. ಚಾಣಕ್ಯ ನೀತಿಯಲ್ಲಿ ಈ ರಹಸ್ಯ ವಿಷಯಗಳನ್ನು ಪತ್ನಿಗೆ ಹೇಳುವುದು ಕೂಡ ನಿಷಿದ್ಧ ಎನ್ನಲಾಗಿದೆ. ಅವು ಯಾವುವು ತಿಳಿದುಕೊಳ್ಳೋಣ ಬನ್ನಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಯಾವುದೇ ಒಂದು ಕಾರಣಕ್ಕೆ ನಿಮಗೆ ಅವಮಾನವನ್ನು ಎದುರಿಸುವ ಸ್ಥಿತಿ ಎದುರಾಗಿದ್ದರೆ, ನೀವು ಅದನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ತನ್ನ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ. ಕೆಲವರು ಎಲ್ಲಾ ಸಂಗತಿಗಳನ್ನು ತಮ್ಮ ಪತ್ನಿಯೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಅವಮಾನದ ಸಂಗತಿಯನ್ನು ಇತರರಿಗೆ ಬಿಟ್ಹಾಕಿ ಪತ್ನಿಯಿಂದಲೂ ಬಚ್ಚಿಡಿ. ಏಕೆಂದರೆ, ಸಮಯ ಎದುರಾದರೆ ಪತ್ನಿ ಅದನ್ನು ನಿಮ್ಮ ವಿದುದ್ಧವೆ ಪ್ರಯೋಗಿಸುವ ಸಾಧ್ಯತೆ ಇರುತ್ತದೆ.
2. ಚಾಣಕ್ಯ ನೀತಿಯ ಪ್ರಕಾರ, ಒಬ್ಬನು ವ್ಯಕ್ತಿ ತನ್ನ ದೌರ್ಬಲ್ಯವನ್ನು ಯಾರಿಗೂ ಬಹಿರಂಗಪಡಿಸಬಾರದು. ಏಕೆಂದರೆ ಅನೇಕ ಬಾರಿ ಅದು ವ್ಯಕ್ತಿಗೆಯೇ ಮುಳುವಾಗುವ ಸಾಧ್ಯತೆ ಇರುತ್ತದೆ ಮತ್ತು ಆ ಸಮಯದಲ್ಲಿ ವ್ಯಕ್ತಿಗೆ ಎದುರಿಗೆ ಇರುವವರು ಆತನ ದೌರ್ಬಲ್ಯದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಜನರು ವ್ಯಕ್ತಿಯ ದೌರ್ಬಲ್ಯದ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ನಂತರ ನೀವು ಇತರರ ಮುಂದೆ ಒತ್ತಾಯಕ್ಕೆ ಒಳಗಾಗುವಿರಿ.
3. ಯಾವುದೇ ಓರ್ವ ವ್ಯಕ್ತಿ ದಾನ ಮಾಡಿದರೆ, ಅದನ್ನು ಆತ ರಹಸ್ಯವಾಗಿಡಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ನೀವು ಮಾಡಿದ ಯಾವುದೇ ದಾನವನ್ನು ಎಂದಿಗೂ ಪ್ರಚಾರ ಮಾಡಬಾರದು. ಅಷ್ಟೇ ಯಾಕೆ ದಾನದ ಬಗ್ಗೆ ಪತ್ನಿಗೂ ಕೂಡ ಹೇಳಬಾರದು. ಚಾಣಕ್ಯ ನೀತಿಯ ಪ್ರಕಾರ, ನೀವು ದಾನವನ್ನು ಎಷ್ಟು ರಹಸ್ಯವಾಗಿರಿಸುತ್ತೀರೋ ಅಷ್ಟು ಒಳ್ಳೆಯದು. ನೀವು ದಾನವನ್ನು ಉಲ್ಲೇಖಿಸಿದರೆ, ಅದು ದಾನದ ಮಹತ್ವವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
4. ನಿಮ್ಮ ಗಳಿಕೆಯ ಎಲ್ಲಾ ಮಾಹಿತಿಯನ್ನು ನಿಮ್ಮ ಹೆಂಡತಿಗೆ ಎಂದಿಗೂ ನೀಡಬಾರದು ಎಂದು ಚಾಣಕ್ಯರು ಹೇಳುತ್ತಾರೆ. ನಿಮ್ಮ ಆದಾಯದ ಎಲ್ಲಾ ಮೂಲಗಳ ಬಗ್ಗೆ ಹೆಂಡತಿಗೆ ತಿಳಿದಿದ್ದರೆ, ಅವಳು ನಿಮಗೆ ಎಲ್ಲಾ ಹಣವನ್ನು ನೀಡುವಂತೆ ಒತ್ತಾಯಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಖರ್ಚಿಗೆ ನಿಮ್ಮ ಬಳಿ ಹಣವಿಲ್ಲದೇ ಇರಬಹುದು. ನೀವು ಈ ಪರಿಸ್ಥಿತಿಯನ್ನು ತಪ್ಪಿಸಲು ಬಯಸಿದರೆ, ಹೆಂಡತಿಗೆ ನಿಮ್ಮ ಎಲ್ಲಾ ಗಳಿಕೆಯ ಬಗ್ಗೆ ಹೇಳಬಾರದು.