ಆಗ ಬಿಗ್‌ಬಾಸ್‌ಗೆ ಹೋಗೋಕೆ ಡಿಮ್ಯಾಂಡ್‌ ಇಟ್ಟು.. ಈಗ ನನ್ನ ಕರ್ಕೊಳ್ಳಿ ಪ್ಲೀಸ್‌ ಅಂತೀದಾಳೆ ಸುಂದರಿ..!

Bigg Boss 8 : ಸೋಷಿಯಲ್‌ ಮೀಡಿಯಾದ ಮೂಲಕ ಜನಪ್ರಿಯತೆ ಗಳಿಸಿದ ಈ ಸುಂದರಿ ಡಿಮ್ಯಾಂಡ್‌ ಇದ್ದಾಗ, ಬಿಗ್‌ ಬಾಸ್‌ ಆಫರ್‌ ಬಂದ್ರೂ ಡಿಮ್ಯಾಂಡ್‌ ಇಟ್ಟು, ಈಗ ನನಗೆ ಒಂದು ಛಾನ್ಸ್‌ ಕೋಡಿ ಅಂತ ಬೇಡಿಕೊಳ್ಳುತ್ತಿದ್ದಾಳಂತೆ... ಈ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ... 
 

1 /6

ಆ್ಯಂಕರ್ ವಿಷ್ಣು ಪ್ರಿಯಾ ಸೋಷಿಯಲ್ ಮೀಡಿಯಾದ ಸೆನ್ಸೇಷನ್. Instagram ನಲ್ಲಿ ಈ ಚೆಲುವೆ ಹಾಕುವ ಫೋಟೋಸ್‌ ಹಲ್‌ಚಲ್‌ ಸೃಷ್ಟಿಸುತ್ತವೆ.. ವಿಷ್ಣು ತನ್ನ ಗ್ಲಾಮರ್ ಶೋ ಮೂಲಕ ಸಾಕಷ್ಟು ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ.. ಇದೀಗ ಸುಂದರಿಯ ಕುರಿತು ಹೊಸ ವಿಚಾರವೊಂದು ಮುನ್ನಲೆಗೆ ಬಂದಿದೆ..  

2 /6

ಬಿಗ್ ಬಾಸ್ ಶೋಗೆ ವಿಷ್ಣು ಪ್ರಿಯಾ ಬರುತ್ತಾರೆ ಎಂಬ ಪ್ರಚಾರ ನಡೆಯುತ್ತಿದೆ. ಕಳೆದ ಎರಡು ಸೀಸನ್‌ಗಳಿಂದ ಆಕೆಯ ಹೆಸರು ಕೇಳಿಬರುತ್ತಿದೆ. ಆದರೆ ಅವಳು ಪ್ರತಿ ಬಾರಿ ನಿರಾಶೆಗೊಳ್ಳುತ್ತಾಳೆ. ಈ ಬಾರಿಯೂ ಆಕೆಯ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಆದ್ರೆ ಅದು ಸಸ್ಪೆನ್ಸ್.   

3 /6

ಈ ಹಿನ್ನೆಲೆಯಲ್ಲಿ ವಿಷ್ಣು ಪ್ರಿಯಾಗೆ ಸಂಬಂಧಿಸಿದ ಒಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಕಳೆದ ಸೀಸನ್ ನಲ್ಲಿಯೇ ವಿಷ್ಣು ಪ್ರಿಯಾಗೆ ಆಫರ್ ಬಂದಿತ್ತು. ಆದರೆ ಇದಕ್ಕಿಂತ ಬಿಗ್‌ ಆಫರ್‌ ಬಂದ್ರೆ ಕೈಕೊಟ್ಟು ಹೋಗ್ತಾಳೆ ಅಂತ ಬಿಗ್‌ಬಾಸ್‌ ಮ್ಯಾನೆಜ್‌ಮೆಂಟ್‌ ಈಕೆಯನ್ನ ಕೈಬಿಟ್ಟರು ಎನ್ನಲಾಗಿದೆ..   

4 /6

ಅಲ್ಲದೆ, ಬಿಗ್ ಬಾಸ್ 7 ರಲ್ಲಿ ಭಾಗವಹಿಸಲು ಈಕೆ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದಳಂತೆ. ಬಿಗ್ ಬಾಸ್ ಆಯೋಜಕರು ದಿನಕ್ಕೆ 30 ಸಾವಿರ ನೀಡುತ್ತಾರೆ. ಆದ್ರೆ ಈ ಹಾಟ್ ಬ್ಯೂಟಿ ಕೇಳಿದ್ದು 70 ರಿಂದ 80 ಸಾವಿರ ರೂ.. ವಾಸ್ತವವಾಗಿ ಈ ಶೋನಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಗೆ ಅಷ್ಟು ಹಣ ನೀಡುತ್ತಿಲ್ಲ.  

5 /6

ಸಧ್ಯ ಬಿಗ್‌ ಬಾಸ್‌ ಸೀಸನ್‌ 8 ತೆಲುಗು ರಿಲೀಸ್‌ಗೆ ರೆಡಿಯಾಗುತ್ತಿದೆ.. ಅದಕ್ಕೆ ಈ ಬಾರಿ ಚೆಲುವೆ ಚೌಕಾಸಿಗೆ ಬಂದಿದ್ದಳಂತೆ. ಮ್ಯಾನೆಜ್‌ಮೆಂಟ್‌ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾಳೆ ಎನ್ನುವ ಮಾತು ಸಹ ಹರಿದಾಡುತ್ತಿದೆ.. ಆದರೆ ಇದು ಅಧಿಕೃತವಲ್ಲ..  

6 /6

ವಿಷ್ಣು ಪ್ರಿಯಾ `ಪೋವೆ ಪೋರಾ' ತೆಲುಗು ಕಾರ್ಯಕ್ರಮದ ಮೂಲಕ ನಿರೂಪಕರಾದರು. ಈ ಕಾರ್ಯಕ್ರಮ ಆಕೆಗೆ ಒಳ್ಳೆಯ ಮನ್ನಣೆ ತಂದುಕೊಟ್ಟಿತು. ಅದರ ನಂತರ ಅವರು ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ಕಿರುಚಿತ್ರಗಳ ಮೂಲಕ ಮುನ್ನೆಲೆಗೆ ಬಂದರು.. ವಾಂಟೆಡ್ ಪಾಂಡುಗಡ ಮತ್ತು ದಯಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ...