ನೀರಿನಲ್ಲಿ ಈ ಪದಾರ್ಥ ಹಾಕಿ ಸಿಂಪಡಿಸಿದ್ರೆ ಜಿರಳೆ.. ನೊಣಗಳೆಲ್ಲ ಕ್ಷಣಾರ್ಧಲ್ಲೇ ಮಾಯವಾಗುತ್ತವೆ! ಬೇಕಿದ್ರೆ ಟ್ರೈ ಮಾಡಿ ನೋಡಿ!!

Remedies To Get Rid of Fly and Cockroach: ಸ್ವಚ್ಛಗೊಳಿಸಿದ ನಂತರವೂ ನೆಲದ ಮೇಲೆ ಜಿರಳೆಗಳು ಕಾಣಿಸಿಕೊಂಡರೆ, ಒರೆಸುವ ಶ್ರಮವೆಲ್ಲವೂ ವ್ಯರ್ಥವಾದಂತಾಗುತ್ತದೆ... ನಿಮ್ಮ ಮನೆಯಲ್ಲೂ ಇದೇ ರೀತಿಯೇ ಆಗುತ್ತಿದ್ದರೆ, ಇಂದು ನಾವು ಹೇಳುವ ಟಿಪ್ಸ್‌ ಫಾಲೋ ಮಾಡಿ.. 

1 /6

ಮನೆಯಲ್ಲಿ ಜಿರಳೆಗಳು ಓಡಾಡುವುದನ್ನು ಯಾರೂ ಇಷ್ಟಪಡುವುದಿಲ್ಲ, ಆದರೂ ಕೆಲವರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಜಿರಳೆಗಳು ಬ್ಯಾಕ್ಟೀರಿಯಾವನ್ನು ಹರಡುವ ಕೆಲಸ ಮಾಡುತ್ತವೆ. ಅವು ತಮ್ಮ ಬ್ಯಾಕ್ಟೀರಿಯಾವನ್ನು ಅಡುಗೆ ಪಾತ್ರೆಗಳು, ತರಕಾರಿಗಳು ಮತ್ತು ಹಣ್ಣುಗಳ ಮೇಲೆ ಬಿಡುತ್ತವೆ.. ಈ ಕಾರಣದಿಂದಾಗಿ, ರೋಗ ಹರಡುವ ಅಪಾಯ ಹೆಚ್ಚಾಗುತ್ತದೆ. ಜಿರಳೆಗಳನ್ನು ತಪ್ಪಿಸಲು, ಜನರು ಸ್ವಚ್ಛಗೊಳಿಸಲು ಹೆಚ್ಚು ಗಮನ ನೀಡುಬೇಕು..   

2 /6

ಅನೇಕ ಬಾರಿ, ಒರೆಸಿದ ನಂತರವೂ ಜಿರಳೆಗಳು ನೆಲದ ಮೇಲೆ ಓಡಾಡುವುದನ್ನು ನೀವು ಗಮನಿಸಿರಬಹುದು.. ಆದರೆ ಆಗ ಅವುಗಳನ್ನು ಹೇಗೆ ಓಡಿಸಬೇಕು ಎಂದು ಅರ್ಥವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮಾಪ್ ಬಕೆಟ್‌ನಲ್ಲಿ ಲವಂಗದ ಜೊತೆಗೆ ಕೆಲವು ವಸ್ತುಗಳನ್ನು ಬೆರೆಸುವ ಉಪಾಯವನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಈ ತಂತ್ರಗಳನ್ನು ಅಳವಡಿಸಿಕೊಂಡರೆ ನೀವು ನೆಲದ ಮೇಲೆ ಜಿರಳೆ.. ನೋಣಗಳನ್ನು ನೋಡುವುದೇ ಇಲ್ಲ..   

3 /6

 ಜಿರಳೆಗಳನ್ನು ನೊಣಗಳನ್ನು ಓಡಿಸಲು ನೀವು ಲವಂಗವನ್ನು ಬಳಸಬಹುದು.. ಇದಕ್ಕಾಗಿ ಲವಂಗವನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು ಆ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ. ನಂತರ ಅದನ್ನು ಮಾಪಿಂಗ್ ಬಕೆಟ್‌ನಲ್ಲಿ ಮಿಶ್ರಣ ಮಾಡಿ.. ನೆಲ ಒರೆಸಿ..   

4 /6

ಜಿರಳೆಗಳು ಬಿರಿಯಾನಿ ಎಲೆಗಳ ವಾಸನೆಯನ್ನು ಇಷ್ಟಪಡುವುದಿಲ್ಲ, ಆದ್ದರಿಂದ ನೀವು ಅದನ್ನು ನೆಲ ಒರೆಸಲು ಬಳಸಬಹುದು. ಮೊದಲು ಬಿರಿಯಾನಿ ಎಲೆಗಳ ಪೇಸ್ಟ್ ಅನ್ನು ತಯಾರಿಸಿ ಬಕೆಟ್‌ನಲ್ಲಿ ಒಂದು ಚಮಚ ಹಾಕಿ ಮಿಶ್ರಣ ಮಾಡಿ ಬಳಿಕ ಆ ನೀರಿನಿಂದ ಮನೆ ಸ್ವಚ್ಚಗೊಳಿಸಿ.   

5 /6

ಹಾಗಲಕಾಯಿ ಜಿರಳೆಗಳನ್ನು ತೊಡೆದುಹಾಕಲು ಉಪಯುಕ್ತವಾಗಿದೆ. ಇದರ ಪೇಸ್ಟ್‌ನ್ನು ಅಥವಾ ಕುದಿಸಿದ ನೀರನ್ನು ಸೇರಿಸಿ ನೆಲ ಒರೆಸಿದರೇ ಒಂದು ಜಿರಳೆ.. ಸೊಳ್ಳೆ ನೊಣ ಯಾವ ಕೀಟಗಳೂ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ..   

6 /6

(ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ)