Mint Benefits: ಫೇಸ್ ವಾಶ್, ಲೋಷನ್ ಸೇರಿದಂತೆ ಹಲವಾರು ತ್ವಚೆಯ ಉತ್ಪನ್ನಗಳನ್ನು ತಯಾರಿಸುವಾಗ ಪುದೀನಾ ಸೊಪ್ಪನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಸೊಪ್ಪಿನ ಎಲೆಗಳಲ್ಲಿ ಪೋಷಕಾಂಶಗಳು ಅಧಿಕವಾಗಿವೆ. ಇವರು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿವೆ.
ಮೊಡವೆಗಳಿಂದ ಮುಕ್ತಿ ನೀಡುತ್ತದೆ: ಪುದೀನಾ ಎಲೆಗಳಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಇದು ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ತುತ್ತಾಗುವ ಮೊಡವೆ ಸಮಸ್ಯೆಗಲನ್ನು ನಿವಾರಿಸುತ್ತದೆ. ಇದಕ್ಕಾಗಿ ನೀವು ಪುದೀನಾ ಎಲೆಗಳ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.
ಪುದೀನಾ ಎಲೆಗಳು ಗಾಯವನ್ನು ಗುಣಪಡಿಸುತ್ತವೆ: ಪುದೀನಾ ಎಲೆಗಳ್ಲಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಚರ್ಮದ ಉರಿಯನ್ನು ಶಮನ ಮಾಡುತ್ತವೆ. ಇದಕ್ಕಾಗಿ ಪುದೀನಾ ಎಲೆಯ ರಸವನ್ನು ಗಾಯ ಪೀಡಿತ ಪ್ರದೇಶಕ್ಕೆ ಹಚ್ಚಬೇಕು ಇದರಿಂದ ಸುಡುವ ಸಂವೇದನೆ ಕಡಿಮೆಯಾಗುತ್ತದೆ.
ಚರ್ಮವನ್ನು ಹೈಡ್ರೇಟ್ ಮಾಡುತ್ತದೆ: ಪುದೀನಾ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯವಂತೆ ಮಾಡಲು ಸಹಕಾರಿಯಾಗುತ್ತದೆ. ಇದು ನಿಮ್ಮ ಚರ್ಮದಲ್ಲಿನ ಸುಕ್ಕುಗಳು, ನೆರಿಗೆಗಳನ್ನು ತೆಗೆದುಹಾಕಲು ಪುದೀನಾ ಎಲೆಗಳು ಸಹಕಾರಿಯಾಗಿವೆ.
ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ: ಪುದೀನಾ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಕಣ್ಣುಗಳ ಕೆಳಗಡೆ ಆಗಿರುವ ಡಾರ್ಕ್ ಸರ್ಕಲ್ ಗಳನ್ನು ಕಡಿಮೆಮಾಡಿ, ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ. ಇದಕ್ಕಾಗಿ ಪುದೀನಾ ಪೇಸ್ಟ್‌ನ್ನು ರಾತ್ರಿಯಿಡೀ ಕಣ್ಣಿನ ಕೆಳಗಡೆ ಹಚ್ಚಿಕೊಳ್ಳಿ.
ಪುದೀನಾ ಚರ್ಮದ ಟೋನ್‌ನ್ನು ಹೆಚ್ಚಿಸುತ್ತದೆ: ಪುದೀನಾ ಚರ್ಮದ ಮೇಲೆ ಉಂಟಾಗಿರುವ ಕಲೆಗಳನ್ನು ತಡೆಯುತ್ತದೆ. ಇದು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ.