ಮೆದುಳಿನಲ್ಲಿರುವ ಹುಳು ಹೆಚ್ಚಾಗಿ ಆಹಾರದ ಮೂಲಕ ತಲುಪುತ್ತದೆ, ಇದು ಸಿಸ್ಟಿಸರ್ಕೋಸಿಸ್ ಎಂಬ ರೋಗವನ್ನು ಉಂಟುಮಾಡುತ್ತದೆ ಮತ್ತು ತೀವ್ರ ತಲೆನೋವು, ವಾಕರಿಕೆ ಮತ್ತು ಇತರ ಅನೇಕ ಸಮಸ್ಯೆಗಳೊಂದಿಗೆ ಇರುತ್ತದೆ.
ಬೆಂಗಳೂರು : ನಾವು ತಿನ್ನುವ ಆಹಾರದ ಮೂಲಕ ಹುಳ ಅಥವಾ ಕೀಟ ಮೆದುಳಿಗೆ ತಲುಪಬಹುದು ಎಂದರೆ ಕೇಳಲು ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಇಂಥಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ನಾವು ಸೇವಿಸುವ ಕೆಲವೊಂದು ತರಕಾರಿಗಳ ಮೂಲಕ ಕೀಟಗಳು ಮೆದುಳು ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ತರಕಾರಿಗಳನ್ನು ಸೇವಿಸುವಾಗ ಎಚ್ಚರಿಕೆಯಿಂದ ಇರಬೇಕು. ವಾಸ್ತವವಾಗಿ, ಟೇನಿ ಸೋಲಿಯಮ್ ಎಂದು ಕರೆಯಲ್ಪಡುವ ಟೇಪ್ ವರ್ಮ್ನ ಮೆದುಳು ಸೇರಿದರೆ ಸಿಸ್ಟಿಸರ್ಕೋಸಿಸ್ ಸಮಸ್ಯೆ ಎದುರಾಗುತ್ತದೆ. ಇದರಿಂದ ಮೆದುಳು, ಸ್ನಾಯುಗಳು ಅಥವಾ ಇತರ ಅಂಗಾಂಶಗಳಿಗೆ ಸೋಂಕು ತಗುಲುತ್ತವೇ ಮಾತ್ರವಲ್ಲ ದೇಹದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನೀವು ತಿನ್ನುವ ತರಕಾರಿಗಳು ಅದರಲ್ಲಿಯೂ ವಿಶೇಷವಾಗಿ ಸಣ್ಣ ಬೀಜಗಳನ್ನು ಹೊಂದಿರುವ ತರಕಾರಿಗಳಲ್ಲಿ ಈ ಹುಳಗಳು ಕಂಡು ಬರುತ್ತವೆ. ಆ ತರಕಾರಿಗ ಬೀಜಗಳಲ್ಲಿ ಈ ಹುಳುಗಳು ವಾಸಿಸುತ್ತವೆ. ಅಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತವೇ, ಮತ್ತು ಮೊಟ್ಟೆಗಳನ್ನು ಇಡುತ್ತವೆ. ಅದು ಹೊಟ್ಟೆಯನ್ನು ತಲುಪಿದಾಗ, ಅದು ಕರುಳಿನ ಮೂಲಕ ಇತರ ಅಂಶಗಳೊಂದಿಗೆ ಮೆದುಳು ತಲುಪುತ್ತದೆ. ಅದಕ್ಕಾಗಿಯೇ ಕೆಲವು ತರಕಾರಿಗಳನ್ನು ತಿನ್ನುವಾಗ ನೀವು ಜಾಗರೂಕರಾಗಿರಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಯಾವುದೇ ಋತುವಿನಲ್ಲಿ ಕೂಡಾ ಕ್ಯಾಪ್ಸಿಕಂ ಸಿಗುತ್ತದೆ. ಆದರೆ ಅವುಗಳ ಬೀಜಗಳು ಟೇಪ್ ವರ್ಮ್ ಮೊಟ್ಟೆಗಳನ್ನು ಹೊಂದಿರಬಹುದು. ಈ ಕೀಟಗಳು ತುಂಬಾ ಚಿಕ್ಕದಾಗಿದ್ದು, ಅವು ಬರಿಗಣ್ಣಿಗೆ ಗೋಚರಿಸುವುದಿಲ್ಲ. ನಮ್ಮ ಅಜಾಗರೂಕತೆಯಿಂದ ಈ ಹುಳಗಳು ಮೆದುಳಿಗೆ ಸಾಗಿಬಹುದು. ಕ್ಯಾಪ್ಸಿಕಂ ಅನ್ನು ತಿನ್ನುವ ಮತ್ತು ತಯಾರಿಸುವ ಮೊದಲು, ಅದರ ಎಲ್ಲಾ ಬೀಜಗಳನ್ನು ತೆಗೆದುಹಾಕುವುದನ್ನು ಮರೆಯಬೇಡಿ. ನಂತರ ಅದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಬದನೆಕಾಯಿ ಮೇಲ್ನೋಟಕ್ಕೆ ನೋಡಿದರೆ ಅದರಲ್ಲಿ ಹುಳ ಇದೆಯೋ ಇಲ್ಲವೋ ಗೊತ್ತಾಗುವುದಿಲ್ಲ. ಬದನೆಕಾಯಿಯನ್ನು ಕತ್ತರಿಸಿದ ನಂತರ, ಒಳಗೆ ನೋಡಿದರೆ ಅದರಲ್ಲಿ ಕೀಟಗಳಿರುವುದು ಕಂಡು ಬರುತ್ತವೆ. ಆದರೆ ಬಿಳಿಬದನೆ ಬೀಜಗಳಲ್ಲಿ ಟೇಪ್ ವರ್ಮ್ಗಳು ಇರುವ ಸಾಧ್ಯತೆ ಹೆಚ್ಚು. ಬದನೆಕಾಯಿಯನ್ನು ಕತ್ತರಿಸದೆ ನೇರವಾಗಿ ಬೆಂಕಿಯಲ್ಲಿ ಬೇಯಿಸಿ ತಿನ್ನಬೇಡಿ. ಪ್ರತಿ ಬಾರಿ ಬದನೆಕಾಯಿಯನ್ನು ಸರಿಯಾಗಿ ಕತ್ತರಿಸಿ 2 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಇರಿಸಿ ನಂತರ ಸೇವಿಸಿ.
ತೊಂಡೆಕಾಯಿ ಅನೇಕ ಅನಾನುಕೂಲತೆಗಳನ್ನು ಉಂಟು ಮಾಡುತ್ತವೆ ತೊಂಡೆಕಾಯಿಯಲ್ಲಿ ಸಣ್ಣ ಸಣ್ಣ ಕೀಟಗಲಿರುವ ಸಾಧ್ಯತೆ ತುಂಬಾ ಹೆಚ್ಚು. ತೊಂಡೆಕಾಯಿಯನ್ನು ಕತ್ತರಿಸುವಾಗ ಎಚ್ಚರವಿರಲಿ. ಯಾವುದೇ ಕಾರಣಕ್ಕೂ ಅದನ್ನು ಹಾಗೆಯೇ ತಿನ್ನಲು ಹೋಗಬೇಡಿ. ,
ಕೆಸುವಿನ ಎಲೆಗಳಲ್ಲಿ ಟೇಪ್ ವರ್ಮ್‌ಗಳು ಮತ್ತು ಅವುಗಳ ಮೊಟ್ಟೆಗಳು ಇರಬಹುದು. ಮಳೆಯ ಮತ್ತು ಆರ್ದ್ರ ವಾತಾವರಣದಲ್ಲಿ, ಈ ಎಲೆಗಳು ಅವರಿಗೆ ಸಂತಾನೋತ್ಪತ್ತಿಯ ಕೇಂದ್ರವಾಗುತ್ತವೆ. ಈ ಎಲೆಗಳನ್ನು ಆಹಾರದಲ್ಲಿ ಸೇರಿಸುವ ಮೊದಲು, ಅವುಗಳನ್ನು ಬಿಸಿ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಪ್ರತಿ ಎಲೆಯನ್ನು ಪ್ರತ್ಯೇಕವಾಗಿ ಕತ್ತರಿಸಿ.