ಮಾರ್ಚ್ʼನಲ್ಲಿ ಅನುಶ್ರೀ ಮದುವೆ.. ಹಸೆಮಣೆ ಏರುವ ಶುಭ ಸಂಗತಿ ತಿಳಿಸಿದ ಆಂಕರ್‌ ಅನು.. ಹುಡುಗ ಕೂಡ ಫಿಕ್ಸ್ !?

Anushree Marriage Date Fix: ಅನುಶ್ರೀ ಮದುವೆ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಕರಾವಳಿ ಚೆಲುವೆ ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಅನುಶ್ರೀ ಅಭಿಮಾನಿಗಳು ಬಹುದಿನದಿಂದ ಅವರ ಮದುವೆ ನೋಡಲು ಕಾದು ಕುಳಿತಿದ್ದರು. ಎಲ್ಲೇ ಹೋದರು ಮದುವೆ ಯಾವಾಗ? ಎಂದೇ ಕೇಳುತ್ತಿದ್ದರು. ಇದಕ್ಕೆ ಈಗ ಉತ್ತರ ಸಿಕ್ಕೇ ಬಿಟ್ಟಿದೆ.

2 /9

ಅನುಶ್ರೀ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮದುವೆ ಫಿಕ್ಸ್‌ ಆದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ನಿರೂಪಕಿ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡಿದ್ದಾರೆ. 

3 /9

ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಅನುಶ್ರೀ ಚಾಟ್ ಶೋ ನಡೆಸುತ್ತಿದ್ದರು. ಈ ವೇಳೆ ಅನುಶ್ರೀ ಮದುವೆ ಆದವರು ಒಂದೆಡೆ, ಮದುವೆ ಆಗದವರು ಒಂದು ಕಡೆ ಚೆನ್ನಾಗಿ ಕುಳಿತಿದ್ದಾರೆ ಎನ್ನುತ್ತಾರೆ. 

4 /9

ಆಗ ಗಿಲ್ಲಿ ,  ಅನು ಅಕ್ಕ ಮಧ್ಯದಲ್ಲಿ ಕುಳಿತ ನೀವೂ ಆಲ್‌​ ರೆಡಿ ಫಿಕ್ಸ್ ಆಗಿದ್ದೀರಾ ಎಂದು ಹೇಳುತ್ತಾರೆ. ಇದಕ್ಕೆ ಅನುಶ್ರೀ ಫಿಕ್ಸ್ ಆಗ್ತಿದ್ದೇನೆ ಎಂದು ಹೇಳುತ್ತಾರೆ. ಈ ಮೂಲಕ ಶೀಘ್ರವೇ ಹಸೆಮಣೆ ಏರಲಿರುವ ಸುಳಿವು ನೀಡಿದ್ದಾರೆ. ಮದುವೆ ಫಿಕ್ಸ್‌ ಆಗ್ತಿದೆ ಎಂಬ ಸಂಗತಿ ಬಿಚ್ಚಿಟ್ಟಿದ್ದಾರೆ.

5 /9

ಮುಂದಿನ ಫೆಬ್ರವರಿಯಲ್ಲಿ ಮದುವೆ ನಡೆಯಬಹುದಾ ಎಂದು ಸೂರಜ್ ಕೇಳುತ್ತಾರೆ. ಅಗ ಅನುಶ್ರೀ ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್. ಹೀಗಾಗಿ ಮಾರ್ಚ್​ ನಲ್ಲಿ ಮದುವೆ ಆಗಬಹುದು ಎಂದು ಹೇಳಿದ್ದಾರೆ. 

6 /9

ಮಾರ್ಚ್ 17ರಂದು ಪುನೀತ್​ ರಾಜ್‌ಕುಮಾರ್‌ ಜನ್ಮದಿನ. ಇದೇ ದಿನ ಅಥವಾ ಮಾರ್ಚ್ ತಿಂಗಳಲ್ಲಿ ಅನುಶ್ರೀ ಮದುವೆ ಆಗುವ ಸುಳಿವು ನೀಡಿದ್ದಾರೆ.

7 /9

ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ನಲ್ಲಿ ಅಂತಾಕ್ಷರಿ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದ ಅನುಶ್ರೀ ETV ಯ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಕಾರ್ಯಕ್ರಮದ ಮೂಲಕ ಪ್ರಸಿದ್ಧರಾದರು. 

8 /9

ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಜನಪ್ರಿಯರಾದರು. ಬಹು ವರ್ಷಗಳಿಂದ ಜೀ ತಂಡದಲ್ಲಿರುವ ಆಂಕರ್‌ ಅನು ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿ ಹೀಗೆ ಅನೇಕ ಸಾಕಷ್ಟು ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ.

9 /9

ಅನುಶ್ರೀ ಮದುವೆ ಫಿಕ್ಸ್‌ ಆಗುತ್ತಿದೆ ಎಂದಿದ್ದೆ ತಡ ಅವರ ಅಭಿಮಾನಿಗಳೆಲ್ಲ ಹುಡುಗ ಯಾರಿರಬಹುದು ಎಂದು ತಲೆಗೆ ಹುಳಬಿಟ್ಟುಕೊಂಡಿದ್ದಾರೆ. ಶೀಘ್ರವೇ ಅನುಶ್ರೀ ಎಲ್ಲವನ್ನು ಬಹಿರಂಗಪಡಿಸುತ್ತಾರಾ ಕಾದು ನೋಡಬೇಕು.