ಚಹಾ ತಯಾರಿಸಿದ ಬಳಿಕ ಅದರ ಎಲೆಗಳನ್ನು ಎಸೆಯುತ್ತೀರಾ? ಇದನ್ನೊಮ್ಮೆ ಓದಿ

Benefits Of Tea Leaves: ನೀವು ಚಹಾ ತಯಾರಿಸಿದ ಬಳಿಕ ಡಸ್ಟ್‌ಬಿನ್‌ಗೆ ಎಸೆಯುವ ಟೀ ಸೊಪ್ಪು ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಈ ಫೋಟೋ ಗ್ಯಾಲರಿಯಲ್ಲಿ, ಚಹಾ ಎಲೆಗಳ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /9

ಮೈಂಡ್ ಫ್ರೆಶ್ ಆಗಲು ಉತ್ತಮ ಟಾನಿಕ್ ಆಗಿ ಕಾರ್ಯ ನಿರ್ವಹಿಸುವ ಚಹಾವನ್ನು ಹಿತ-ಮಿತವಾಗಿ ಬಳಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದೇ ಇದೆ. 

2 /9

ಸಾಮಾನ್ಯವಾಗಿ, ಚಹಾ ತಯಾರಿಸಿದ ಬಳಿಕ ಅದನ್ನು ಸೋಸಿ ಚಹಾ ಎಲೆಗಳನ್ನು ಕಸದ ಬುಟ್ಟಿಗೆ ಬಿಸಾಡುತ್ತೇವೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ, ಇನ್ನು ಮುಂದೆ ಈ ತಪ್ಪನ್ನು ಖಂಡಿತ ಮಾಡಬೇಡಿ. ಟೀ ಸೊಪ್ಪಿನ ಮರುಬಳಕೆ ಹಾಗೂ ಅದರ ಉಪಯೋಗಗಳ ಬಗ್ಗೆ ತಿಳಿದರೆ ನೀವು ಯಾವುದೇ ಕಾರಣಕ್ಕೂ ಅದನ್ನು ಬಿಸಾಡುವುದಿಲ್ಲ. 

3 /9

ನಾವು ಕಸ ಎಂದು ಎಸೆಯುವ ಬಳಕೆಯಾದ ಟೀ ಸೊಪ್ಪು ಉತ್ತಮ ಆರೋಗ್ಯವರ್ಧಕ. ಅಷ್ಟೇ ಅಲ್ಲ, ಇದು ನಿಮ್ಮ ಮನೆ ಕೆಲಸಕ್ಕೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

4 /9

ಚಹಾ ತಯಾರಿಸಿರುವ ಟೀ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್ಗಳು ಕಂಡು ಬರುತ್ತದೆ. ಇದನ್ನು ಗಾಯವಾಗಿರುವ ಜಾಗದಲ್ಲಿ ಲೇಪಿಸುವುದರಿಂದ ಗಯ ಬೇಗ ಗುಣವಾಗುತ್ತದೆ. 

5 /9

ಬಳಕೆಯಾದ ಚಹಾ ಎಲೆಗಳು ಟ್ಯಾನಿಂಗ್ ಅನ್ನು ತೆಗೆದುಹಾಕಲು ಕೂಡ ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. 

6 /9

ಪಾತ್ರೆಗಳನ್ನು ಶುಚಿಗೊಳಿಸಲು ಚಹಾ ಎಲೆಯ ನೀರು ತುಂಬಾ ಪ್ರಯೋಜನಕಾರಿ ಆಗಿದೆ. ನೀವು ಮನೆಯಲ್ಲಿ ಬಳಸುವ ಡಿಶ್ ವಾಶ್ ಜೊತೆಗೆ ಈ ಟೀ ಸೊಪ್ಪಿನ ನೀರನ್ನು ಮಿಕ್ಸ್ ಮಾಡಿ ಬಳಸುವುದರಿಂದ ಪಾತ್ರೆಗಳು ಸ್ವಚ್ಛವಾಗುತ್ತವೆ. 

7 /9

ಪಾತ್ರೆಯಲ್ಲಿ ಅಡಗಿರುವ ತುಪ್ಪ, ಎಣ್ಣೆಯ ಜಿಡ್ಡು ಕಲೆಗಳನ್ನು ಹೋಗಲಾಡಿಸಲು, ಹಾಗೂ ದುರ್ವಾಸನೆಯನ್ನು ಹೋಗಲಾಡಿಸಲು ಟೀ ಸೊಪ್ಪಿನ ನೀರನ್ನು ಚೆನ್ನಾಗಿ ಕುದಿಸಿ ಬಳಿಕ ಈ ನೀರಿನಿಂದ ಪಾತ್ರೆಯನ್ನು ವಾಶ್ ಮಾಡಿ.

8 /9

ಮನೆಯಲ್ಲಿ ಕೆಲವೊಮ್ಮೆ ನೊಣ, ಸೊಳ್ಳೆ, ಇರುವೆಯಂತಹ ಕೀಟಗಳ ಉಪದ್ರವ ಹೆಚ್ಚಾಗಿರುತ್ತದೆ. ಇದನ್ನು ತಪ್ಪಿಸಲು ಇವು ಹೆಚ್ಚು ಬರುವ ಜಾಗದಲ್ಲಿ ಈಗಾಗಲೇ ಬಳಸಿರುವ ಟೀ ಸೊಪ್ಪನ್ನು ಸಣ್ಣ ಸಣ್ಣ ಗಂಟುಗಳಾಗಿ ಮಾಡಿ ಇರಿಸಿ. 

9 /9

ನೀವು ಮರದ ವಸ್ತುಗಳನ್ನು ಸ್ವಚ್ಛಗೊಳಿಸಲು ಹಾಗೂ ಅದರ ಬಣ್ಣವನ್ನು ಮಾಸದಂತೆ ನೋಡಿಕೊಳ್ಳಲು ಬಯಸಿದರೆ ಚಹಾದ ನೀರಿನಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು.  ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.