Pushpa 2 collection day 3 : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ 'ಪುಷ್ಪ 2: ದಿ ರೂಲ್' ಈ ವರ್ಷದ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದು. ಡಿಸೆಂಬರ್ 5 ರ ಗುರುವಾರದಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.
ಬ್ಲಾಕ್ ಬಸ್ಟರ್ ಹಿಟ್ ಪುಷ್ಪ 2 ಸಿನಿಮಾ ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ಎರಡೇ ದಿನಗಳಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳ ದಾಖಲೆಯನ್ನು ಈ ಚಿತ್ರ ಮುರಿದಿದೆ. ಈ ಪಟ್ಟಿಯಲ್ಲಿ ಒಂದಲ್ಲ ಎರಡಲ್ಲ ಹಲವು ಚಿತ್ರಗಳ ಹೆಸರುಗಳಿವೆ.
'ಪುಷ್ಪ 2: ದಿ ರೂಲ್' 5 ಡಿಸೆಂಬರ್ 2024 ರಂದು ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಚಿತ್ರವು ಮೊದಲ ದಿನವೇ 294 ಕೋಟಿ ರೂಪಾಯಿಗಳಷ್ಟು ವ್ಯವಹಾರ ಮಾಡಿತ್ತು. ಇದು ಭಾರತೀಯ ಚಿತ್ರರಂಗದ ಅತಿದೊಡ್ಡ ಓಪನಿಂಗ್. ಚಿತ್ರವು ಎರಡನೇ ದಿನದಲ್ಲಿ 90.10 ಕೋಟಿ ಗಳಿಸಿತು, ಹೀಗಾಗಿ ಎರಡು ದಿನಗಳಲ್ಲಿ ಒಟ್ಟು ಭಾರತೀಯ ಕಲೆಕ್ಷನ್ 265 ಕೋಟಿ ರೂ. ಅಲ್ಲದೆ, ಚಿತ್ರವು ಎರಡೇ ದಿನಗಳಲ್ಲಿ ವಿಶ್ವಾದ್ಯಂತ 400 ಕೋಟಿ ಗಡಿ ದಾಟಿದೆ. ಇದಲ್ಲದೆ, ಈ ಚಿತ್ರವು ಹೆಚ್ಚಿನ ಓಪನಿಂಗ್ ಚಿತ್ರಗಳ ದಾಖಲೆಗಳನ್ನು ಸಹ ಮುರಿದಿದೆ.
2017 ರಲ್ಲಿ ಬಿಡುಗಡೆಯಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಬ್ಲಾಕ್‌ಬಸ್ಟರ್ ಚಿತ್ರ 'ಬಾಹುಬಲಿ 2' ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೊದಲ ದಿನವೇ 121 ಕೋಟಿ ಗಳಿಸುವ ಮೂಲಕ ಭಾರತದ ಅತಿದೊಡ್ಡ ಓಪನರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಆದರೆ 'ಪುಷ್ಪ 2' ಮೊದಲ ದಿನದಲ್ಲಿ 294 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಹುಬಲಿ 2 ರ ದಾಖಲೆಯನ್ನು ಮುರಿದಿದೆ.
ಕನ್ನಡದ ಸೂಪರ್‌ಸ್ಟಾರ್ ಯಶ್ ಅವರ 'ಕೆಜಿಎಫ್ 2' ಚಿತ್ರವು 2022 ರಲ್ಲಿ ಬಿಡುಗಡೆಯಾಯಿತು, ಇದು ಮೊದಲ ದಿನ 134.5 ಕೋಟಿ ರೂಪಾಯಿಗಳನ್ನು ಗಳಿಸಿದೆ, ಅಂದರೆ ಚಿತ್ರವು ಎರಡು ದಿನಗಳಲ್ಲಿ 275 ಕೋಟಿ ರೂಪಾಯಿಗಳನ್ನು ಗಳಿಸಿದೆ ಆದರೆ 'ಪುಷ್ಪ 2' ಆ ಚಿತ್ರದ ದಾಖಲೆಯನ್ನು ಮುರಿದು ಎರಡೇ ದಿನಗಳಲ್ಲಿ 384 ಕೋಟಿ ಗಳಿಸುವ ಮೂಲಕ ವಿಶ್ವಾದ್ಯಂತ 400 ಪ್ರವೇಶಿಸಿತು.
ಈಗ ಅದೇ ವರ್ಷ 2022 ರಲ್ಲಿ ಬಿಡುಗಡೆಯಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಚಿತ್ರ 'RRR' ಬಗ್ಗೆ ಹೇಳುವುದಾದರೆ.. ಈ ಚಿತ್ರವು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ, ಓಪನಿಂಗ್ ರೂ. 223 ಕೋಟಿ ಗಳಿಸಿತ್ತು. ಆದರೆ 'ಪುಷ್ಪಾ 2' ಈ ರೆಕಾರ್ಡ್ ಬ್ರೇಕ್ ಮಾಡಿದೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ. ಈ ಸಿನಿಮಾ ಕಳೆದ ವರ್ಷ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಹಲವು ದಾಖಲೆಗಳನ್ನು ಮಾಡಿತ್ತು. 'ಪುಷ್ಪ 2' ಹಿಂದಿಯಲ್ಲಿ ಅತಿ ದೊಡ್ಡ ನಾನ್-ಹಾಲಿಡೇ ಓಪನಿಂಗ್ ದಾಖಲೆಯನ್ನೂ ಮುರಿದಿದೆ. ಇದು ಮೊದಲು ಪಠಾಣ್ ಹೆಸರಿನಲ್ಲಿತ್ತು.
ಶಾರುಖ್ ಖಾನ್ ಮತ್ತು ನಯನತಾರಾ ನಟನೆಯ ಆಕ್ಷನ್ ಚಿತ್ರ 'ಜವಾನ್' ಕ್ರೇಜ್ 'ಪುಷ್ಪ 2' ರಂತೆಯೇ ಇತ್ತು. ಮೊದಲ ದಿನದಲ್ಲಿ 64 ಕೋಟಿ ಗಳಿಸಿದ 'ಜವಾನ್' ಚಿತ್ರದ ದಾಖಲೆಯನ್ನು ಪುಷ್ಪ 2 ಹಿಂದಿಯಲ್ಲಿ ಅತಿದೊಡ್ಡ ಓಪನಿಂಗ್ ಪಡೆಯುವ ಮೂಲಕ ಮುರಿದಿದೆ. ಇನ್ನು ಮೂರನೇ ದಿನಕ್ಕೆ ಒಟ್ಟು 500 ಕೋಟಿ. ಕಲೇಕ್ಷನ್ ಮಾಡಿದ್ದಾಗಿ ಚಿತ್ರತಂಡ ತಿಳಿಸಿದೆ..