Isht Dev-Devi As Per Zodiac Signs: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಹನ್ನೆರಡು ರಾಶಿಗಳು ಹಾಗೂ 27 ನಕ್ಷತ್ರಗಳ ಕುರಿತು ವರ್ಣನೆಯನ್ನು ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜನ್ಮ ಯಾವುದಾದರೊಂದು ರಾಶಿ ಮತ್ತು ನಕ್ಷತ್ರದಲ್ಲಿ ಆಗಿರುತ್ತದೆ. ಪ್ರತಿಯೊಂದು ರಾಶಿಗೆ ಓರ್ವ ಇಷ್ಟದೇವನಾಗಿರುತ್ತಾನೆ ಹಾಗೂ ಜಾತಕದಲ್ಲಿ ಶುಭಫಲ ಪ್ರಾಪ್ತಿಗಾಗಿ ಇಷ್ಟದೇವನನ್ನು ಪೂಜಿಸುವುದು ಸಾಕಷ್ಟು ಲಾಭಗಳನ್ನು ನೀಡುತ್ತದೆ. ಹಾಗಾದರೆ ಬನ್ನಿ ರಾಶಿಗಳಿಗೆ ಅನುಗುಣವಾಗಿ ಯಾವ ರಾಶಿಗೆ ಯಾರು ಇಷ್ಟದೇವ ತಿಳಿದುಕೊಳ್ಳೋಣ,
ಇದನ್ನೂ ಓದಿ-ಮೀನ ರಾಶಿಯಲ್ಲಿ 'ನೀಚ ಭಂಗ' ರಾಜಯೋಗ, ಈ 4 ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಕರ-ಕುಂಭ-ಮೀನ: ಮಕರ ರಾಶಿಗೆ ಶನಿ ಅಧಿಪತಿ ಹಾಗೂ ಈ ರಾಶಿಯ ಇಷ್ಟದೇವ ಶ್ರೀ ಆಂಜನೇಯನಾಗಿದ್ದಾನೆ. ಹೀಗಾಗಿ ನೀವು ಆಂಜನೆಯನನ್ನು ಪೂಜಿಸಿದರೆ ಇಷ್ಟಫಲ ಪ್ರಾಪ್ತಿಯಾಗುತ್ತದೆ. ಇನ್ನೊಂದೆಡೆ ನಾವು ಇಷ್ಟ ದೇವತೆಗಳ ಕುರಿತು ಹೇಳುವುದಾದರೆ, ಕಾಳಿ ಮಾತೆ ಮತ್ತು ಸಿದ್ಧಿದಾತ್ರಿದೇವಿ ನಿಮ್ಮ ಇಷ್ಟ ದೇವತೆಗಳು. ಶನಿ ದೇವನು ಕುಂಭ ರಾಶಿಗೂ ಕೂಡ ಅಧಿಪತಿ. ಈ ರಾಶಿಗೆ ಹನುಮಂತ ಹಾಗೂ ಮಹಾದೇವ ಇಷ್ಟದೇವರಾಗಿದ್ದಾರೆ ಮತ್ತು ನಿಮಗೂ ಕೂಡ ಕಾಳಿಮಾತೆ ಹಾಗೂ ಸಿದ್ಧಿದಾತ್ರಿಗಳು ಇಷ್ಟದೇವತೆಗಲಾಗಿದ್ದಾರೆ. ಮೀನ ರಾಶಿಗೆ ದೇವಗುರು ಬೃಹಸ್ಪತಿ ಅಧಿಪತಿ. ಶ್ರೀ ಹರಿ ವಿಷ್ಣು ಇಷ್ಟದೇವ ಹಾಗೂ ತಾಯಿ ಲಕ್ಷ್ಮಿ, ಕಮಲಾ ಮತ್ತು ಸಿದ್ಧದಾತ್ರಿ ಇಷ್ಟದೇವತೆಗಳು.
ತುಲಾ-ವೃಶ್ಚಿಕ-ಧನು: ತುಲಾ ಗ್ರಹದ ಅಧಿಪತಿ ಶುಕ್ರ. ಶ್ರೀ ಹರಿ ವಿಷ್ಣು ಇಷ್ಟದೇವ ಹಾಗೂ ತಾಯಿ ಲಕ್ಷ್ಮಿ, ಬ್ರಹ್ಮಚಾರಿಣಿ ಮತ್ತು ಷೋಡಶಿ-ಶ್ರೀ ವಿದ್ಯಾ ಇಷ್ಟದೇವತೆಗಳಾಗಿದ್ದಾರೆ. ವೃಶ್ಚಿಕ ರಾಶಿಯ ಅಧಿಪತಿ ಮಂಗಳ, ಶ್ರೀರಾಮ ಮತ್ತು ಆಂಜನೇಯ ಇಷ್ಟದೇವರಾಗಿದ್ದಾರೆ. ಆದರೆ, ಭಗವತಿ ತಾರಾ ಮತ್ತು ಶೈಲಪುತ್ರಿ ಈ ರಾಶಿಗೆ ಇಷ್ಟದೇವತೆಗಳಾಗಿದ್ದಾರೆ. ಧನು ರಾಶಿಯ ಜನರಿಗೂ ಕೂಡ ದೇವಗುರು ಬೃಹಸ್ಪತಿಯೇ ಅಧಿಪತಿ, ಶ್ರೀ ಹರಿ ವಿಷ್ಣು ಇಷ್ಟದೇವನಾದರೆ. ತಾಯಿ ಲಕ್ಷ್ಮಿ, ಕಮಲಾ ಮತ್ತು ತಾಯಿ ಸಿದ್ಧಿದಾತ್ರಿ ಈ ರಾಶಿಯ ಇಷ್ಟದೇವತೆಗಳು.
ಕರ್ಕ-ಸಿಂಹ-ಕನ್ಯಾ: ಕರ್ಕ ರಾಶಿಗೆ ಚಂದ್ರ ಅಧಿಪತಿ, ಶಿವ-ಶ್ರೀವಿಷ್ಣು ಇಷ್ಟದೇವರಾದರೆ, ಕಮಲ ಮತ್ತು ತಾಯಿ ಸಿದ್ಧಿದಾತ್ರಿ ಈ ರಾಶಿಯ ಜನರ ಇಷ್ಟದೇವತೆಗಳು. ಸಿಂಹ ರಾಶಿಯ ಅಧಿಪತಿ ಗ್ರಹಗಳ ರಾಜ ಸೂರ್ಯ ಮತ್ತು ಶ್ರೀ ಹರಿ ಮತ್ತು ಹನುಮ ಈ ರಾಶಿಗೆ ಷ್ಟ ದೇವರುಗಳು. ತಾಯಿ ಗಾಯತ್ರಿ, ಪೀತಾಂಬರಿ ಮತ್ತು ತಾಯಿ ಕಾಳರಾತ್ರಿ ಈ ರಾಶಿಗೆ ಇಷ್ಟದೇವತೆಗಳು. ಇದೇ ರೀತಿ ಕನ್ಯಾ ರಾಶಿಗೆ ಬುಧ ಅಧಿಪತಿಯಾದರೆ ಮತ್ತು ಗಣೇಶ ಈ ರಾಶಿಗೆ ಇಷ್ಟದೇವ ಮತ್ತು ದೇವಿ ದುರ್ಗೆ, ಭುವನೇಶ್ವರಿ ಮತ್ತು ಚಂದ್ರಘಂಟಾ ಈ ರಾಶಿಯ ಇಷ್ಟದೇವತೆಗಳು.
ಮೇಷ-ವೃಷಭ-ಮಿಥುನ: ಮೇಷ ರಾಶಿಗೆ ಮಂಗಳ ಅಧಿಪತಿ. ಶ್ರೀರಾಮ-ಹನುಮ ಈ ರಾಶಿಗೆ ಇಷ್ಟದೇವರಾದರೆ, ಭಗವತಿ ತಾರಾ, ನೀಲ್ ಸರಸ್ವತಿ ಮತ್ತು ಶೈಲಪುತ್ರಿದೇವಿ ಈ ರಾಶಿಗೆ ಇಷ್ಟದೇವತೆಗಳು. ಇನ್ನೊಂದೆಡೆ ವೃಷಭ ರಾಶಿಗೆ ಶುಕ್ರ ಅಧಿಪತಿ ಮತ್ತು ಶ್ರೀವಿಷ್ಣು ಇಷ್ಟ ದೇವ. ತಾಯಿ ಲಕ್ಷ್ಮಿ ಮತ್ತು ಷೋಡಶಿ-ಶ್ರೀ ವಿದ್ಯಾ ಈ ರಾಶಿಯ ಇಷ್ಟದೇವತೆಗಳು. ಮಿಥುನ ರಾಶಿಗೆ ಬುಧ ರಾಷ್ಯಾಧಿಪನಾಗಿದಾನೆ, ಆದರೆ ಗಣೇಶ ಮತ್ತು ವಿಷ್ಣು ಈ ರಾಶಿಗೆ ಇಷ್ಟದೇವರು. ಮತ್ತೊಂದೆಡೆ, ದೇವಿ ದುರ್ಗೆ, ಭುವನೇಶ್ವರಿ ಮತ್ತು ಚಂದ್ರಘಂಟಾ ಈ ರಾಶಿಯ ಇಷ್ಟ ದೇವತೆಗಳಾಗಿದ್ದಾರೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)