Dhan Rajyog: 20 ವರ್ಷಗಳ ಬಳಿಕ ನಿರ್ಮಾಣಗೊಂಡಿವೆ ಈ 4 ಧನ ರಾಜಯೋಗಗಳು, 3 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!

Dhan Rajyog: ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 20 ವರ್ಷಗಳ ಬಳಿಕ ಗ್ರಹಗಳ ರಾಜ ಸೂರ್ಯ ಹಾಗೂ ದೇವಗುರು ಬೃಹಸ್ಪತಿಯ ಕೃಪೆಯಿಂದ 4 ಧನರಾಜಯೋಗಗಳು ನಿರ್ಮಾಣಗೊಂಡಿದ್ದು, ಇವು ಮೂರು ರಾಶಿಗಳ ಜನರ ಪಾಲಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದ್ದು, ಇವರಿಗೆ ಅಪಾರ ಧನಲಾಭದ ಜೊತೆಗೆ, ವೃತ್ತಿ ಜೀವನದಲ್ಲಿ ಬಡ್ತಿ ಭಾಗ್ಯವನ್ನು ಕರುಣಿಸಲಿವೆ. 
 

Dhan Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಈ ಯೋಗಗಳು ಭೂಮಿಯ ಮೇಲಿರುವ ಸಕಲ ಚರಾಚರ, ದೇಶಗಳು ಹಾಗೂ ಇಡೀ ಪ್ರಪಂಚದ ಮೇಲೆ ತನ್ನ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ಗ್ರಹಗಳ ರಾಜ ಸೂರ್ಯ ಹಾಗೂ ದೇವಗುರು ಬೃಹಸ್ಪತಿಯ ಕಾರಣ ಒಟ್ಟು 4 ಧನ ರಾಜಯೋಗಗಳು ನಿರ್ಮಾಣಗೊಂಡಿದ್ದು, ಇವು 3 ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಳಿವೆ. ಶಶ, ನೀಚ್ ಭಂಗ್, ಬುದ್ಧಾದಿತ್ಯ ಹಾಗೂ ಹಂಸ ರಾಜಯೋಗ ಆ 4 ಧನ ರಾಜಯೋಗಗಳಾಗಿವೆ. ಈ ನಾಲ್ಕೂ ರಾಜಯೋಗಗಳು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತವೆ. ಆದರೆ ಮೂರು ರಾಶಿಗಳ ಜನರ ಪಾಲಿಗೆ ಭಾರಿ ಧನಲಾಭದ ಜೊತೆಗೆ ಜೀವನದಲ್ಲಿ ಬಡ್ತಿ ಭಾಗ್ಯವನ್ನು ಕರುಣಿಸಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Rajyog: 50 ವರ್ಷಗಳ ಬಳಿಕ 4 ರಾಶಿಗಳ ಗೋಚರ ಜಾತಕದಲ್ಲಿ 'ವಿಪರೀತ ರಾಜಯೋಗ', ಸ್ಥಾನಮಾನದ ಜೊತೆಗೆ ಅಪಾರ ಧನಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮೇಷ ರಾಶಿ: ಮೇಷ ರಾಶಿಯ ಜಾತಕದವರ ಪಾಲಿಗೆ 4 ಧನ ರಾಜಯೋಗಗಳು ಅತ್ಯಂತ ಶುಭ ಫಲಪ್ರದಾಯಿ ಹಾಗೂ ಲಾಭದಾಯಕ ಸಾಬೀತಾಗಲಿವೆ, ಏಕೆಂದರೆ ಈ ಯೋಗಗಳು ನಿಮ್ಮ ರಾಶಿಯ ದ್ವಿತೀಯ ಭಾವದಲ್ಲಿ ನಿರ್ಮಾಣಗೊಳ್ಳುತ್ತಿವೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭದ ಯೋಗ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಭಾರಿ ಸುಧಾರಣೆಯಾಗಿ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ಈ ಧನರಾಜ ಯೋಗಗಳ ಪ್ರಭಾವದಿಂದ ನಿಮಗೆ ಆದಾಯದ ಇತರ ಮೂಲಗಳು ಕೂಡ ನಿರ್ಮಾಣಗೊಳ್ಳಲಿವೆ. ಜೊತೆಗೆ ನಿರುದ್ಯೋಗಿಗಳಿಗೆ ಹೊಸ ನೌಕರಿಯ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ.  

2 /3

ಮಕರ ರಾಶಿ: ನಾಲ್ಕು ಧನ ರಾಜಯೋಗಗಳ ನಿರ್ಮಾಣ ಮಕರ ಜಾತಕದವರಿಗೆ ಅತ್ಯಂತ ಅನುಕೂಲಕರ ಸಿದ್ಧವಾಗಲಿವೆ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಗಜಕೇಸರಿ, ಬುದ್ಧಾದಿತ್ಯ ಹಾಗೂ ನೀಚ್ ಭಂಗ್ ರಾಜ್ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಪರಾಕ್ರಮದಲ್ಲಿ ಭಾರಿ ಹೆಚ್ಚಳವಾಗಲಿದೆ. ಯಾವ ಜನರ ವ್ಯಾಪಾರ ವಿದೇಶಗಳಿಗೆ ಸಂಬಂಧಿಸಿದೆಯೋ ಅವರಿಗೆ ಅಪಾರ ಧನಲಾಭವಾಗುವ ಸಾಧ್ಯತೆ ಇದೆ.  ಈ ಅವಧಿಯಲ್ಲಿ ಒಂದು ಅದ್ಭುತ ಆಸ್ತಿಯನ್ನು ನೀವು ಖರೀದಿಸಬಹುದು. ಅವಿವಾಹಿತ ಜನರಿಗೆ ಕಂಕಣ ಬಾಲ ಕೂಡಿಬರುವ ಸಾಧ್ಯತೆ ಇದೆ. ನಿಮಗೆ ನಿಮ್ಮ ಸಹೋದರ-ಸಹೋದರಿಯರ ಬೆಂಬಲ ಪ್ರಾಪ್ತಿಯಾಗಲಿದೆ. ಮಾರ್ಚ್ ಬಳಿಕ ನೌಕರ ವರ್ಗದ ಜನರ ಪ್ರಮೋಷನ್ ಹಾಗೂ ವರ್ಗಾವಣೆಯ ಸಾಧ್ಯತೆಗಳು ಗೋಚರಿಸುತ್ತಿವೆ.   

3 /3

ಕುಂಭ ರಾಶಿ: ನಿರ್ಮಾಣಗೊಳ್ಳುತ್ತಿರುವ ಈ ನಾಲ್ಕು ರಾಜಯೋಗಗಳು ನಿಮ್ಮ ಪಾಲಿಗೆ ಶುಭ ಫಲಪ್ರದಾಯಿ ಸಾಬೀತಾಗಲಿವೆ. ಏಕೆಂದರೆ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಶಶ ರಾಜಯೋಗ ನಿರ್ಮಾಣಗೊಂಡರೆ, ಧನ ಭಾವದಲ್ಲಿ ನೀಚ್ ಭಂಗ್ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ನಿಮಗೆ ಹೊಸ ಹೊಳಪು ಕಾಣಲು ಸಿಗಲಿದೆ. ಈ ಸಮಯದಲ್ಲಿ ನಿಮಗೆ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ.  ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)