2023ರಲ್ಲಿ ಈ ರಾಶಿಯವರನ್ನು ಸಮಸ್ಯೆಯ ಸುಳಿಯಲ್ಲಿ ಹಾಕಲಿದ್ದಾನೆ ರಾಹು.!

ರಾಹುವಿನ ಈ ಸಂಕ್ರಮಣದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳು ಎದುರಾಗಲಿವೆ. ರಾಹು ಸಂಚಾರದಿಂದ ಈ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಬೆಂಗಳೂರು : 2023 ರಲ್ಲಿ, ಅನೇಕ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಿವೆ.  ಛಾಯಾ ಗ್ರಹ ರಾಹುವಿನ ಸ್ಥಾನದಲ್ಲಿ ಕೂಡಾ ಪಲ್ಲಟವಾಗಲಿದೆ.  ಮುಂದಿನ ವರ್ಷ ಅಕ್ಟೋಬರ್ 30 ರಂದು, ರಾಹು ಮೇಷ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರ ಶುಭ ಮತ್ತು ಅಶುಭ ಪರಿಣಾಮವು  ದ್ವಾದಶ ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ. ರಾಹುವಿನ ಈ ಸಂಕ್ರಮಣದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳು ಎದುರಾಗಲಿವೆ. ರಾಹು ಸಂಚಾರದಿಂದ ಈ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಮೀನ ರಾಶಿ : ರಾಹು ಅಕ್ಟೋಬರ್ ನಲ್ಲಿ ಮೀನರಾಶಿಯನ್ನು ಪ್ರವೇಶಿಸಲಿದ್ದಾನೆ.  ಹೀಗಾಗಿ ಈ ರಾಶಿಯವರು ಎಷ್ಟು ಜಾಗರೂಕರಾಗಿದ್ದರೂ ಒಳ್ಳೆಯದೇ. ಈ ಸಮಯದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಕೆಲಸ ಕೆಡುತ್ತದೆ. ಹಾಗಾಗಿ ಹೊಸ ಯೋಜನೆಗಳನ್ನು ಬದಿಗಿಟ್ಟು ಸುಮ್ಮನಿರುವುದು ಒಳ್ಳೆಯದು. ಕೆಲಸದಲ್ಲಿ ಅನೇಕ ಅಡೆತಡೆಗಳು ಉಂಟಾಗಬಹುದು. ಆಹಾರ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. 

2 /4

ತುಲಾ ರಾಶಿ : ಅಕ್ಟೋಬರ್ 30 ರಂದು ಸಂಭವಿಸಲಿರುವ ರಾಹು ಸಂಕ್ರಮಣವು ಈ ರಾಶಿಯವರ ವೈವಾಹಿಕ ಜೀವನದಲ್ಲಿ ತೊಡಕುಗಳನ್ನು ಉಂಟುಮಾಡಬಹುದು.  ಹೀಗಾಗಿ ಸ್ವಲ್ಪ ಶಾಂತವಾಗಿ ಕೆಲಸ ಮಾಡಬೇಕು.  ಈ ಅವಧಿಯಲ್ಲಿ ಕಚೇರಿಗಳಲ್ಲಿ  ಕೆಲಸ ಮಾಡುವವರು ಸಹ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಹೋದ್ಯೋಗಿಗಳೊಂದಿಗೆ ಚರ್ಚೆ ಹೆಚ್ಚಾಗಬಹುದು. ಮನಸ್ಸಿನ ನೆಮ್ಮದಿ ಕೆಡುತ್ತದೆ. 

3 /4

ವೃಷಭ ರಾಶಿ :ರಾಹುವಿನ ಸಂಚಾರದ ಸಮಯದಲ್ಲಿ, ಈ ರಾಶಿಯವರ ಮೇಲೆ ಬಹಳಷ್ಟು ಪರಿಣಾಮಗಳು ಗೋಚರಿಸುತ್ತವೆ. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಒಳ್ಳೆಯದು. ಈ ಸಮಯದಲ್ಲಿ ವೃಷಭ ರಾಶಿಯವರು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ರಾಹು ಸಂಕ್ರಮಣದ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. 

4 /4

ಮೇಷ ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ರಾಹು ಮೇಷ ರಾಶಿಯಲ್ಲಿದ್ದಾನೆ. ಅಕ್ಟೋಬರ್ 30, 2023 ರಂದು, ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು.  (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)