ಮಕ್ಕಳಿಗೆ 20 ವರ್ಷವಾಗುತ್ತಿದ್ದಂತೆ ಈ ನಾಲ್ಕು ವಿಷಯಗಳ ಬಗ್ಗೆ ತಪ್ಪದೇ ತಿಳಿ ಹೇಳಿ. !

 ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆಯೇ ಪೋಷಕರು ಸಹ ಅವರೊಂದಿಗೆ ತಮ್ಮ ನಡವಳಿಕೆಯನ್ನು ಬದಲಾಯಿಸಬೇಕಾಗುತ್ತದೆ. 18 ಅಥವಾ 20 ವರ್ಷ ವಯಸ್ಸಿನವರು ತಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು.

Parenting tips for kids in 20s: ಮಕ್ಕಳು ಎಷ್ಟೇ ದೊಡ್ಡವರಾಗಿದ್ದರೂ ಪೋಷಕರ ಪಾಲಿಗೆ ಮಾತ್ರ ಅವರಿನ್ನೂ ಪುಟ್ಟ ಕಂದಮ್ಮಗಳೇ.   ತಮ್ಮ ಮಗುವಿನ ಪೋಷಣೆಯಲ್ಲಿ ಯಾವುದೇ ರೀತಿಯಲ್ಲಿಯೂ ಕೊರತೆಯಾಗಬಾರದು  ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಅಲ್ಲದೆ ಈ ಹಾದಿಯಲ್ಲಿ ಪೋಷಕರ ಪ್ರಯತ್ನ ನಿರಂತರವಾಗಿ ಸಾಗುತ್ತದೆ. ಮಕ್ಕಳು ಜೀವನದಲ್ಲಿ ಯಶಸ್ವಿಯಾಗುವುದನ್ನು,  ಮತ್ತು ಉತ್ತಮ ಮನುಷ್ಯರಾಗುವುದನ್ನು ನೋಡುವುದೇ ಪೋಷಕರ ಮಹಾದಾಸೆಯಾಗಿರುತ್ತದೆ. ಅದಕ್ಕಾಗಿಯೇ,  ತಮ್ಮ ವಯಸ್ಸಿನ ಪ್ರತಿ ಹಂತದಲ್ಲೂ ಮಕ್ಕಳಿಗೆ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುತ್ತಲೇ ಇರುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆಯೇ ಪೋಷಕರು ಸಹ ಅವರೊಂದಿಗೆ ತಮ್ಮ ನಡವಳಿಕೆಯನ್ನು ಬದಲಾಯಿಸಬೇಕಾಗುತ್ತದೆ. 18 ಅಥವಾ 20 ವರ್ಷ ವಯಸ್ಸಿನವರು ತಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುವುದು ಮುಖ್ಯ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /4

ವೈಯಕ್ತಿಕ ನೈರ್ಮಲ್ಯದ ಬಗ್ಗೆ ವಯಸ್ಕ ಮಕ್ಕಳಿಗೆ ಕಲಿಸಿ. ಶೇವಿಂಗ್‌ನಿಂದ ಸ್ನಾನದವರೆಗೆ ಮತ್ತು ಮುಟ್ಟಿನ ಸಮಯದಲ್ಲಿ ಸ್ವಯಂ-ಆರೈಕೆ ಮತ್ತು ಶುಚಿತ್ವದ ಮಹತ್ವವನ್ನು ಹುಡುಗಿಯರಿಗೆ ವಿವರಿಸಿ ಹೇಳಿ. ಇದು ಮಕ್ಕಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ, ಸೋಂಕುಗಳನ್ನು ತಪ್ಪಿಸುವಲ್ಲಿ ಇದರ ಪಾತ್ರ ದೊಡ್ಡದಾಗಿರುತ್ತದೆ.   

2 /4

ಸಾಮಾನ್ಯವಾಗಿ ಕಾಲೇಜಿಗೆ ಹೋಗುವ ಮಕ್ಕಳಲ್ಲಿ ವೃತ್ತಿಜೀವನದ ಬಗ್ಗೆ ಪೋಷಕರು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಕಾಲೇಜು ಮುಗಿದ ನಂತರ ಮಕ್ಕಳು ಏನು ಮಾಡಬೇಕೆಂದಿದ್ದಾರೆ, ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ. ಯಾವ ಕ್ಷೇತ್ರವನ್ನು ಆರಿಸುತ್ತಾರೆ  ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳು ಸಾಮಾನ್ಯವಾಗಿ ಇಂತಹ ಪ್ರಶ್ನೆಗಳಿಂದ ಸಿಟ್ಟಾಗಿ, ಪೋಷಕರೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ, ಮಕ್ಕಳ ಮನಸ್ಸಿನಲ್ಲಿ ನಕಾರಾತ್ಮಕತೆ ಭಾವ ಮೂಡಬಹುದು.  ಈ ಕಾರಣದಿಂದ ನಿಮ್ಮಿಂದ ದೂರ ಓಡಲು ಪ್ರಾರಂಭಿಸುತ್ತಾರೆ. ಹೆತ್ತವರು ಹಳೆಯ ಕಾಲದ ಚಿಂತನೆಯನ್ನು ತಮ್ಮ ಮೇಲೆ ಹೇರಲು ಬಯಸುತ್ತಾರೆ ಮತ್ತು ದಿನವಿಡೀ ಲೆಕ್ಚರ್ ನೀಡುತ್ತಾರೆ ಎಂಬ ಭಾವನೆ ಮೂಡುತ್ತದೆ.  ಹೀಗಾಗಿ, ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳ ಆಸಕ್ತಿಗಳು ಮತ್ತು ಅವರ ಕನಸುಗಳ ಬಗ್ಗೆ ಅವರೇ ನಿಮ್ಮಲ್ಲಿ ತಮ್ಮ ಮನಸ್ಸಿನ ಭಾವನೆ ಹೇಳಿಕೊಳ್ಳುತ್ತಾರೆ. ಅದನ್ನು ಗೌರವಿಸಿ. ಆಗ, ಮಕ್ಕಳಿಗೆ ನಿಮ್ಮ ಮೇಲೆ ವಿಶ್ವಾಸ ಮೂಡುತ್ತದೆ. ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ.  

3 /4

ಹದಿಹರೆಯದರಲ್ಲಿ ತಂದೆ-ತಾಯಿ  ಏನೇ ಕೇಳಿದರೂ ಮಕ್ಕಳಿಗೆ ಕೋಪ ಬರುತ್ತದೆ. ಪೋಷಕರು ಪದೇ ಪದೇ ಹೇಳಿದ ವಿಚಾರವನ್ನೇ ಹೇಳುವುದರಿಂದ ಬೇಸರಗೊಳ್ಳುತ್ತಾರೆ.  ಈ ಸಂದರ್ಭದಲ್ಲಿ ನಿಮ್ಮ ಮಕ್ಕಲೈಗೆಸಹಾಯ ಮಾಡುವ ಉದ್ದೇಶದಿಂದ ನೀವು ಈ ರೀತಿ ಮಾತನಾಡುತ್ತಿರುವುದು ಎನ್ನುವುದನ್ನು ಮಕ್ಕಳಿಗೆ ಅರ್ಥ ಮಾಡಿಸಿ ಹೇಳಿ. ನಿಮ್ಮ ಮಾತಿಗೆ  ಮಕ್ಕಳು ಕೋಪಗೊಂಡಾಗ ಅಥವಾ ನಿಮ್ಮ ಮಾತನ್ನು ಕೇಳಲು ನಿರಾಕರಿಸಿದಾಗ,  ನೀವು ಶಾಂತ ಸ್ವರದಲ್ಲಿ  ಅವರ ಜೊತೆ  ಮಾತನಾಡಿ.    

4 /4

ಮಕ್ಕಳು ಸಣ್ಣವರಿರುವಾಗ ಪೋಷಕರಲ್ಲಿ ಒಬ್ಬರೊಂದಿಗೆ ಮಾತ್ರ ಮುಕ್ತವಾಗಿ ಮಾತನಾಡುತ್ತದೆ. ತಮ್ಮ ಬೇಡಿಕೆಗಳನ್ನು ಪೂರೈಸಲು ಒಬ್ಬರ ಮನವೊಲಿಸಿದರೆ ಸಾಕು ಎನ್ನುವ ಭಾವ ಮಗುವಿನಲ್ಲಿರುತ್ತದೆ. ಆದರೆ, 20 ವರ್ಷ ದಾಟಿದ ನಂತರ ಮಕ್ಕಳಿಗೆ ಏನು ಮಾಡಬೇಕೆಂದರೂ ತಾಯಿ-ತಂದೆ ಇಬ್ಬರ ಅಭಿಪ್ರಾಯ ಕೂಡಾ ಅಗತ್ಯ ಎನ್ನುವುದನ್ನು ಮನದಟ್ಟು ಮಾಡಿಸಿ.