Actress Rambha : ಹಲವಾರು ನಟ ನಟಿಯರು ಇತ್ತೀಚಿಗೆ ಬಹಿರಂಗವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ವೇಳೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿಯೊಬ್ಬರು ತಮ್ಮ ಸಿನಿ ಕರಿಯರ್ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
ವಿಜಯಲಕ್ಷ್ಮಿ ಅಂದ್ರೆ ಯಾರಿಗೂ ಅಷ್ಟು ಸರಳವಾಗಿ ಗೊತ್ತಾಗುತವುದಿಲ್ಲ.. ರಂಭಾ ಅಂದ್ರೆ ನಿಮಗೆ ಥಟ್ ಅಂತ ಗೊತ್ತಾಗುತ್ತದೆ.. ಹೌದು.. ನಟಿ ರಂಭಾ 90ರ ದಶಕದ ಸ್ಟಾರ್ ನಟಿಯರಲ್ಲಿ ಒಬ್ಬರು..
ದಕ್ಷಿಣ ಸಿನಿರಂಗದ ಜೊತೆ ಉತ್ತರದಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿ, ಸಿನಿ ರಸಿಕರ ನೆಚ್ಚಿನ ನಟಿಯಾಗಿ ಮಿಂಚಿದ್ದರು.. 1992ರಲ್ಲಿ ತೆರೆಕಂಡ ನಿರ್ದೇಶಕ ಇವಿವಿ ಸತ್ಯನಾರಾಯಣ ನಿರ್ದೇಶನದ ಆ ಒಕ್ಕಡಿ ಅಡುಕು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
1993 ರಲ್ಲಿ ನಟ ನವರಸ ನಾಯಕ ಜಗ್ಗೇಶ್ ಅಭಿನಯದ ಸರ್ವರ್ ಸೋಮಣ್ಣ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ರಂಭಾ ಕಾಲಿಟ್ಟರು.
ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಪಾಂಚಾಲಿ, ಭಾವ ಬಾಮೈದ, ಸಾಹುಕಾರ, ಪಾಂಡು ರಂಗ ವಿಠಲ, ಗಂಡುಗಲಿ ಕುಮಾರರಾಮ, ಅನಾಥರು ಸೇರಿದಂತೆ ಹಲವಾರು ಸಿನಿಮಾಗಲ್ಲಿ ನಟಿಸಿದ್ದಾರೆ.
ಸೌಥ್‌ನಲ್ಲಿ ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ, ನಾಗಾರ್ಜುನ, ರಜನಿಕಾಂತ್ ಮುಂತಾದ ಟಾಪ್ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಮತ್ತು ಅನಿಲ್ ಕಪೂರ್ ಅವರಂತಹ ಸ್ಟಾರ್‌ಗಳ ಎದುರು ಅಭಿನಯಿಸಿದ್ದಾರೆ..
ತೆಲುಗಿನ ಹುಡುಗಿಯಾಗಿದ್ದರೂ ಎಕ್ಸ್ ಪೋಸಿಂಗ್ ನಲ್ಲಿ ಮುಂಬೈ ಸ್ಟಾರ್ ಗಳನ್ನು ರಂಭಾ ಡಾಮಿನೇಟ್ ಮಾಡಿದ್ದರು. ಒಂದೋ ಎರಡೋ ಚಿತ್ರಗಳಲ್ಲಿ ಬಿಕಿನಿ ತೊಟ್ಟಿದ್ದರು. ಹಾಗಾಗಿಯೇ ಆ ದಿನಗಳಲ್ಲಿ ರಂಭಾಗೆ ಅಪಾರ ಅಭಿಮಾನಿಗಳಿದ್ದರು.
ಸಂದರ್ಶನವೊಂದರಲ್ಲಿ ರಂಭಾ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಎಕ್ಸ್ ಪೋಸ್ ಮಾಡಬೇಕಾದಾಗ ಮುಜುಗರವಾಗುತ್ತದಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.. ಇಂಡಸ್ಟ್ರಿಯಲ್ಲಿ ಎಕ್ಸ್ ಪೋಸ್ ಮಾಡುವುದಿಲ್ಲ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ನಾನು ಇಲ್ಲ ಎಂದು ಹೇಳುತ್ತೇನೆ. ಅಂತಹ ಪ್ರಾಜೆಕ್ಟ್‌ಗಳೂ ಹಿಟ್ ಆಗಿವೆ.. ಒಂದೋ ಎರಡೋ ಚಿತ್ರಗಳಲ್ಲಿ ತಪ್ಪು ಮಾಡಿದ್ದೇನೆ ಎಂದಿದ್ದಾರೆ..
ನಾನು ಮಾಡಿದ ಒಳ್ಳೆಯ ಚಿತ್ರಗಳು ಆ ನೋವನ್ನು ದೂರ ಮಾಡಿವೆ. ಆದರೆ ಹೆಚ್ಚಿನ ಚಿತ್ರಗಳಿಗೆ ನಾನು ಷರತ್ತುಗಳನ್ನು ಹಾಕುತ್ತಿದ್ದೆ. ನನ್ನ ಷರತ್ತಿಗೆ ಒಪ್ಪಿ ಮಾಡಿದ ಚಿತ್ರಗಳೇ ಬೆಸ್ಟ್ ಎಂದು ವಿವರಿಸಿದರು ರಂಭಾ.
2010 ರಲ್ಲಿ ಶ್ರೀಲಂಕಾ ಮೂಲದ ಉದ್ಯಮಿಯನ್ನು ರಂಭಾ ವಿವಾಹವಾದರು. ಮದುವೆಯ ನಂತರ ಕೆನಡಾದಲ್ಲಿ ನೆಲೆಸಿದ್ದಾರೆ. ನಟಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ.