Actress Sirija: ಅಷ್ಟು ವಯಸ್ಸಾದರೂ ಬಿಗ್‌ಬಾಸ್‌ ಮನೆ ಅಕ್ಕ ಸಿರಿ ಮದುವೆಯಾಗದಿರಲು ಕಾರಣವೇನು ಗೊತ್ತಾ? ಯಾರಿಗಾಗಿ ಕಾಯುತ್ತಿದ್ದಾರೆ ಈ ಚೆಲುವೆ?!

 Bigg Boss Kannada 10 Sirija: ಬಿಗ್‌ಬಾಸ್‌ ಸ್ಪರ್ಧಿ, ಖ್ಯಾತ ಸಿರೀಯಲ್‌ ನಟಿ ಸಿರಿ ರಾಜು ದೊಡ್ಮನೆಯಲ್ಲಿ ಎಲ್ಲರಿಗೂ ಅಕ್ಕನಂತೆ ಇದ್ದರು.. ಆ ಮುಗ್ಧ ನಗು, ತಾಳ್ಮೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದರು.. ಆದರೆ ಇವರಿಗೆ ಅಷ್ಟು ವಯಸ್ಸಾದರೂ ಮದುವೆ ಯಾಕೆ ಆಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ.. 

1 /5

2001ರಲ್ಲಿ ಶುರುವಾದ ರಂಗೋಲಿ ಸಿರೀಯಲ್‌ನ್ನು ಕಿರುತೆರೆ ಪ್ರೇಮಿಗಳು ಎಂದೂ ಮರೆಯಲು ಸಾಧ್ಯವಿಲ್ಲ.. ಅದೇ ರೀತಿ ಈ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚಿದ ನಟಿ ಸಿರಿ ಅವರನ್ನು ಸಹ ಯಾರು ಮರೆತಿಲ್ಲ.. ತಮ್ಮ ಅದ್ಭುತ ನಟನೆಯಿಂದಲೇ ಪ್ರೇಕ್ಷಕರ ಮನಗೆದ್ದ ಈ ಚೆಲುವೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದು ಪ್ರೇಕ್ಷಕರ ಪ್ರಶ್ನೆ..  

2 /5

ನಟಿ ಸಿರಿ ಇತ್ತೀಚೆಗೆ ಬಿಗ್‌ಬಾಸ್‌ ಶೋಗೆ ಎಂಟ್ರಿಕೊಟ್ಟಿದ್ದರು.. ಉತ್ತಮವಾಗಿ ಆಡಿ ತಮ್ಮ ಮುಗ್ಧತೆಯಿಂದಲೇ ಎಲ್ಲರನ್ನು ಮೋಡಿ ಮಾಡಿದ್ದರು.. ಮನೆಮಂದಿಯಲ್ಲರ ಅಕ್ಕ ಎನಿಸಿಕೊಂಡ ಇವರು ಕಾರ್ತಿಕ್‌ ಸಂಗೀತಾ ಹೀಗೆ ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದರು..   

3 /5

ನಟಿ ಸಿರಿ ಅವರು ನಟಿಸಿದ ರಂಗೋಲಿ ಹಾಗೂ ಬದುಕು ಎರಡು ಧಾರವಾಹಿಗಳು ಜನರ ಮನದಾಳ ತಲುಪಿದ್ದಂತು ಸುಳ್ಳಲ್ಲ.. ಈ ಧಾರವಾಹಿಗಳಿಂದ ಕನ್ನಡಿಗರ ಮನೆಮಗಳಾಗಿ ಗುರುತಿಸಿಕೊಂಡಿದ್ದರು.. ಇಷ್ಟೇ ಅಲ್ಲ ಇವರು ತಮಿಳು ಸಿರೀಯಲ್‌ಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ,. ನಟಿ ಈವರೆಗೂ ಬರೋಬ್ಬರಿ 30 ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ..   

4 /5

ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುವ ಈ ಕಲಾವಿದೆ ಹಲವಾರು ದಶಕಗಳಿಂದಲೂ ಸಿನಿರಂಗದಲ್ಲಿ ಮುಂದುವರೆಯುತ್ತಿದ್ದಾರೆ.. ಆದರೆ ಇವರಿಗೆ ಅಷ್ಟು ವಯಸ್ಸಾದರೂ ಮದುವೆ ಯಾಕೆ ಆಗಿಲ್ಲ ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ.. ಆದರೆ ನಟಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು..   

5 /5

ತನ್ನ ವೃತ್ತಿ ಬದುಕನ್ನು ಅರ್ಥಮಾಡಿಕೊಳ್ಳುವ ಹಾಗೂ ಅವರ ಪ್ರತಿಹೆಜ್ಜೆಯಲ್ಲೂ ಜೊತೆಗೆ ನಿಲ್ಲುವಂತಹ ವ್ಯಕ್ತಿ ಸಿಕ್ಕರೇ ಮಾತ್ರ ಮದುವೆಯಾಗುತ್ತೇನೆ ಎಂದು ಮನೆ ಮಂದಿಗೆ ಕಂಡೀಷನ್‌ ಹಾಕಿ ಮದುವೆಗೆ ಒಪ್ಪಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ..