ಅಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೇಕೆ ಸೇರುತ್ತಿಲ್ಲ?- ಸುಪ್ರೀಂಕೋರ್ಟ್ ಪ್ರಶ್ನೆ

  

Last Updated : Oct 9, 2018, 04:48 PM IST
ಅಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೇಕೆ ಸೇರುತ್ತಿಲ್ಲ?- ಸುಪ್ರೀಂಕೋರ್ಟ್ ಪ್ರಶ್ನೆ title=

ನವದೆಹಲಿ: 2015 ರಲ್ಲಿ  ಅಲಹಾಬಾದ್ ಹೈಕೋರ್ಟ್ ಸರ್ಕಾರಿ ಅಧಿಕಾರಿಗಳು,ನ್ಯಾಯಾಧೀಶರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಳಿಸುವಂತೆ ತೀರ್ಪನ್ನು ನೀಡಿತ್ತು. ಅಲ್ಲದೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಈ ಕುರಿತಾಗಿ ನಿರ್ದೇಶನವನ್ನು ಕೋರ್ಟ್ ನೀಡಿತ್ತು.ಆದರೆ ಅದು ಸಮರ್ಪಕವಾಗಿ ಜಾರಿಗೆ ಬರದ ಹಿನ್ನಲೆಯಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ಈಗ ಇದನ್ನು ಪ್ರಶ್ನಿಸಲಾಗಿದೆ. ಈ ಕುರಿತಾಗಿ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಏಕೆ ಸೇರಿಸುತ್ತಿಲ್ಲ ಎಂದು ಪ್ರಶ್ನಿಸಿದೆ.

ನ್ಯಾಯಮೂರ್ತಿ ಸುದೀರ್ ಅಗರ್ವಾಲ ಅವರು "ಸರ್ಕಾರಿ ಅಧಿಕಾರಿಗಳ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವುದರ ಮೂಲಕ ಅವರು ಆ ಎಲ್ಲ ಶಾಲೆಗಳನ್ನು ಉತ್ತಮವಾಗಿ ನಿರ್ವಹಹಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಕೀಲ ಶಿವಕುಮಾರ್ ತ್ರಿಪಾಟಿ ಎನ್ನುವವರು ಈಗ ರಾಜ್ಯದಲ್ಲಿ ಈಗ ಈ ಹೈಕೋರ್ಟ್ ನಿರ್ದೇಶನವನ್ನು ಪಾಲಿಸದ ಹಿನ್ನಲೆಯಲ್ಲಿ ಸುಪ್ರಿಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿಯಲ್ಲಿ ಹೈಕೋರ್ಟ್ ಮೂರು ವರ್ಷವಾದರೂ ಕೂಡ ಈ ತೀರ್ಪನ್ನು ಜಾರಿಗೆ ತರದೇ ಇರುವುದು ಮತ್ತು  ಈ ಅವಧಿಯಲ್ಲಿ ಈ ಶಾಲೆ ನಿರ್ವಹಣೆ ಹಣದ ಕುರಿತಾಗಿಯೂ ಅವರು ಪ್ರಸ್ತಾಪಿಸಿದ್ದಾರೆ.

Trending News