ಭಾರತದ ಈ ನಗರದಿಂದ ಪ್ರಾರಂಭವಾಗುತ್ತದೆ ಸೂರ್ಯಗ್ರಹಣ.! ವೀಕ್ಷಿಸುವಾಗ ನೆನಪಿನಲ್ಲಿರಲಿ ಈ ಅಂಶಗಳು

Surya Grahan 2022 Timing: ಭಾರತದಲ್ಲಿ, ಈ ಗ್ರಹಣವು ಸಂಜೆ 4:22 ರಿಂದ 5:42 ರವರೆಗೆ ಗೋಚರಿಸುತ್ತದೆ. ಆದರೆ ಸೂರ್ಯಗ್ರಹಣದ ಸೂತಕ ಅವಧಿಯು 12 ಗಂಟೆಗಳ ಮೊದಲು ಪ್ರಾರಂಭವಾಗಿದೆ. 

Written by - Ranjitha R K | Last Updated : Oct 25, 2022, 08:39 AM IST
  • ಇಂದು ವರ್ಷದ ಕೊನೆಯ ಸೂರ್ಯ ಗ್ರಹಣ
  • ಸಂಜೆ 4:22 ರಿಂದ 5:42 ರವರೆಗೆ ಗೋಚರಿಸುತ್ತದೆ ಸೂರ್ಯ ಗ್ರಹಣ
  • ಶ್ರೀನಗರದಿಂದ ಸೂರ್ಯಗ್ರಹಣ ಆರಂಭ
ಭಾರತದ ಈ ನಗರದಿಂದ ಪ್ರಾರಂಭವಾಗುತ್ತದೆ ಸೂರ್ಯಗ್ರಹಣ.! ವೀಕ್ಷಿಸುವಾಗ ನೆನಪಿನಲ್ಲಿರಲಿ ಈ ಅಂಶಗಳು  title=
Surya Grahan 2022 Timing (file poto)

Surya Grahan 2022 Timing : ಜ್ಯೋತಿಷ್ಯದ ಪ್ರಕಾರ, 2022 ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು  ಇಂದು ಅಂದರೆ ಅಕ್ಟೋಬರ್ 25 ರಂದು ಗೋಚರಿಸಲಿದೆ. ಹೌದು ಇಂದು ಸಂಜೆಯಿಂದಲೇ ಗ್ರಹಣ ಆರಂಭವಾಗಲಿದೆ. ಅದರ ಗೋಚರಿಸುವಿಕೆಯ ಸಮಯವು ಬೇರೆ ಬೇರೆ ನಗರಗಳಿಗೆ ಹೋಲಿಸಿದರೆ ಭಿನ್ನವಾಗಿರುತ್ತದೆ. ಆದರೆ ಸೂರ್ಯಗ್ರಹಣದ ಸೂತಕ ಅವಧಿಯು 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಇಂದು ಮುಂಜಾನೆ 4.22ರಿಂದ ಸೂತಕ ಕಾಲ ಆರಂಭವಾಗಿದ್ದು,  ದೇವಾಲಯಗಳ ಬಾಗಿಲು ಮುಚ್ಚಲಾಗಿದೆ. 

ಭಾರತದಲ್ಲಿ, ಈ ಗ್ರಹಣವು ಸಂಜೆ 4:22 ರಿಂದ 5:42 ರವರೆಗೆ ಗೋಚರಿಸುತ್ತದೆ. ಅಂದಹಾಗೆ, ಈ ಗ್ರಹಣವು ಮೊದಲು ಶ್ರೀನಗರದಲ್ಲಿ ಗೋಚರಿಸುತ್ತದೆ. ನಂತರ ಅದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗೋಚರಿಸುತ್ತದೆ. ಈ ಸೂರ್ಯಗ್ರಹಣವು ಭಾರತದ ಅನೇಕ ಭಾಗಗಳಲ್ಲಿ ಭಾಗಶಃ ಗೋಚರಿಸುತ್ತದೆ. ಕೆಲವು ಭಾಗಗಳಲ್ಲಿ ಸಂಪೂರ್ಣವಾಗಿ  ಕಾಣಿಸಿಕೊಳ್ಳುತ್ತವೆ. ಇನ್ನು ದೇಶದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಿಸುವುದೇ ಇಲ್ಲ.  ಗ್ರಹಣವನ್ನು ವೀಕ್ಷಿಸುವಾಗ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. 

ಇದನ್ನೂ ಓದಿ : Surya Grahan 2022: ಒಂದೇ ಮಾಸದಲ್ಲಿ 2 ಗ್ರಹಣ, ಮಹಾಭಾರತ ಯುದ್ಧದಂತಹ ಸ್ಥಿತಿ ನಿರ್ಮಾಣ...ಎಚ್ಚರ!

ಶ್ರೀನಗರದಿಂದ ಸೂರ್ಯಗ್ರಹಣ ಆರಂಭ : 
ಮಂಗಳವಾರ ಅಂದರೆ ಇಂದು  ಸಂಭವಿಸುವ ಸೂರ್ಯಗ್ರಹಣ ಶ್ರೀನಗರದಿಂದ ಆರಂಭವಾಗಲಿದೆ. ಸೂರ್ಯ ಗ್ರಹಣ ಸಂಜೆ 4:22 ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಂಜೆ 4:41 ಕ್ಕೆ  ಗೋಚರಿಸಿ ಸಂಜೆ 5:38 ಕ್ಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಇಂದೋರ್‌ನಲ್ಲಿ, ಈ ಗ್ರಹಣವು ಸಂಜೆ 4:42 ಕ್ಕೆ ಗೋಚರಿಸಿ ಸಂಜೆ 5:53 ಕ್ಕೆ ಕೊನೆಗೊಳ್ಳುತ್ತದೆ. ಕೆಲವು ವೈಜ್ಞಾನಿಕ ಸಂಸ್ಥೆಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ಭಾಗಶಃ ಸೂರ್ಯಗ್ರಹಣವು ಸಂಜೆ 4:26 ಕ್ಕೆ ಸಂಭವಿಸಿ ಸೂರ್ಯಾಸ್ತದ ನಂತರ ಕೊನೆಗೊಳ್ಳುತ್ತದೆ. 

ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ :  
ಗ್ರಹಣವನ್ನು ವೀಕ್ಷಿಸುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವುದು ಬಹಳ ಮುಖ್ಯ. ಸೂರ್ಯಗ್ರಹಣವನ್ನು ಬರಿ ಕಣ್ಣುಗಳಿಂದ ನೋಡಬಾರದು. ಬರಿ ಕಣ್ಣಿನಿಂದ  ಸೂರ್ಯ ಗ್ರಹಣ ವೀಕ್ಷಿಸಿದರೆ ಕಣ್ಣುಗಳಿಗೆ ಹಾನಿಯಾಗುತ್ತದೆ. ಸೂರ್ಯಗ್ರಹಣವನ್ನು ವೀಕ್ಷಿಸಲು ಅನೇಕ ಜನರು ದೂರದರ್ಶಕಗಳು ಮತ್ತು  ಸನ್ ಗ್ಲಾಸ್ ಗಳನ್ನೂ ಬಳಸುತ್ತಾರೆ. ಆದರೆ ಅವುಗಳನ್ನು ಕೂಡಾ ಬಳಸುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಗ್ರಹಣವನ್ನು ವೀಕ್ಷಿಸಲು ವಿಶೇಷ ಸೋಲಾರ್ ಫಿಲ್ಟರ್ ಹೊಂದಿರುವ ಕನ್ನಡಕವನ್ನು ಮಾತ್ರ ಬಳಸಬೇಕು. 

ಇದನ್ನೂ ಓದಿ : Surya Grahan 2022: ದೀಪಾವಳಿ ಮರುದಿನ ಸಂಭವಿಸಲಿದೆ ಸೂರ್ಯಗ್ರಹಣ: ಅಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News