ನವದೆಹಲಿ: ಕೇಂದ್ರ ಸಚಿವ ಮತ್ತು ಎಂ.ಜೆ ಅಕ್ಬರ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ #MeToo ಮೀಟೂ ಚಳುವಳಿಯ ಭಾಗವಾಗಿ ಪತ್ರಕರ್ತೆಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.ಆದರೆ ಈ ವಿಚಾರವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೇಳಿದಾಗ ಅವರು ಇದಕ್ಕೆ ಉತ್ತರಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಎಂ.ಜೆ.ಅಕ್ಬರ್ ಅವರು ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿದ್ದು ಈಗ ಪ್ರಿಯಾ ರಮಣಿ ಎನ್ನುವ ಪತ್ರಕರ್ತೆ ಈಗ ಸಚಿವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಪತ್ರಕರ್ತರು ತಮ್ಮ ರಾಜ್ಯ ಖಾತೆ ಸಚಿವರ ಮೇಲೆ ಬಂದಿರುವ ಆರೋಪದ ಕುರಿತಾಗಿ ಸುಷ್ಮಾ ಸ್ವರಾಜ್ ರನ್ನು ಟ್ರಿಬುನರ್ ಕೇಳಿದಾಗ ಇದಕ್ಕೆ ಅವರು ಉತ್ತರಿಸಿಲ್ಲ ಎನ್ನಲಾಗಿದೆ.
I began this piece with my MJ Akbar story. Never named him because he didn’t “do” anything. Lots of women have worse stories about this predator—maybe they’ll share. #ulti https://t.co/5jVU5WHHo7
— Priya Ramani (@priyaramani) October 8, 2018
— prerna singh bindra (@prernabindra) October 7, 2018
ಟ್ರಿಬುನರ್ ವರದಿಗಾರ್ತಿ ಸ್ಮಿತಾ ಶರ್ಮಾ ಅವರು ಸುಷ್ಮಾ ಸ್ವರಾಜ್ ಅವರಿಗೆ" ಕೆಲವು ಆರೋಪಗಳಿವೆ ಅದರಲ್ಲಿ ಲೈಂಗಿಕ ಕಿರುಕುಳದ ಆರೋಪಗಳಿವೆ.ಆದ್ದರಿಂದ ವಿದೇಶಾಂಗ ಖಾತೆಯ ಉಸ್ತುವಾರಿ ಹೊಂದಿರುವ ನೀವು ಈ ಆರೋಪದ ಕುರಿತಾಗಿ ತನಿಖೆಗಳನ್ನೆನಾದರು ನಡೆಸುತ್ತಿರಾ ? ಎಂದು ಕೇಳಿದಾಗ ಅವರು ಇದಕ್ಕೆ ಯಾವುದೇ ಮಾತನ್ನಾಡದೇ ಹೊರಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.