Shani Effect: ಶನಿಯ ಪಥ ಬದಲಾವಣೆ: ಈ ರಾಶಿಯವರು ಊಹಿಸಿರದಂತೆ ಸಮಸ್ಯೆ ಎದುರಿಸುತ್ತಾರೆ!!

ಜೋತಿಷ್ಯ ಶಾಸ್ತ್ರದಲ್ಲಿ ಶನಿಗ್ರಹಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಶನಿಯು ಕರ್ಮದಾತ ಎನ್ನಲಾಗಿದೆ. ಇನ್ನು ಅಕ್ಟೋಬರ್ 23 ರ ಬಳಿಕ ಧಂತೇಸರದಲ್ಲಿ ಶನಿಯ ಸಂಚಾರ ಬದಲಾವಣೆಯಾಗಲಿದೆ. ಹಿಮ್ಮುಖ ಚಲನೆಯಲ್ಲಿರುವ ಶನಿಯು ಮುನ್ನೆಡೆಯಲಿದ್ದು, ಈ ಸಂದರ್ಭದಲ್ಲಿ ಕೆಲ ರಾಶಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ.

Written by - Bhavishya Shetty | Last Updated : Oct 21, 2022, 04:03 PM IST
    • ಜೋತಿಷ್ಯ ಶಾಸ್ತ್ರದಲ್ಲಿ ಶನಿಗ್ರಹಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ.
    • ಅಕ್ಟೋಬರ್ 23 ರ ಬಳಿಕ ಧಂತೇಸರದಲ್ಲಿ ಶನಿಯ ಸಂಚಾರ ಬದಲಾವಣೆ
    • ಹಿಮ್ಮುಖ ಚಲನೆಯಲ್ಲಿರುವ ಶನಿಯು ಮುನ್ನೆಡೆ ಸಾಧಿಸಲಿದ್ದಾನೆ
Shani Effect: ಶನಿಯ ಪಥ ಬದಲಾವಣೆ: ಈ ರಾಶಿಯವರು ಊಹಿಸಿರದಂತೆ ಸಮಸ್ಯೆ ಎದುರಿಸುತ್ತಾರೆ!! title=
Shani Margi

Shani Effect: ಹಿಂದೂ ಧರ್ಮದ ಪ್ರಕಾರ ಶನಿ ದೇವರನ್ನು ನ್ಯಾಯದ ಅಧಿಪತಿ ಎಂದು ಪರಿಗಣಿಸಲಾಗಿದೆ. ಶನಿ ಗ್ರಹವು ಅಕ್ಟೋಬರ್ 23 ರಿಂದ ಮಕರ ರಾಶಿಯಲ್ಲಿ ನೇರ ಚಲನೆ ಆರಂಭಿಸಲಿದ್ದಾರೆ. ಇಲ್ಲಿಂದ ಜನವರಿ 17 2023 ರವರೆಗೆ ನೇರ ಚಲನೆಯಲ್ಲಿಯೇ ಸಾಗಲಿದ್ದಾರೆ. ಈ ಸಂದರ್ಭದಲ್ಲಿ ಕೆಲ ರಾಶಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದರೂ ಸಹ, ಇನ್ನೂ ಅನೇಕ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶನಿಗ್ರಹದ ಪಥ ಬದಲಾವಣೆ  ಬಳಿಕ ಯಾವೆಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ಇಂಥ ಗುಣಗಳಿರುವ ಹುಡುಗರನ್ನೇ ಮೆಚ್ಚುವುದು ಹುಡುಗಿಯರು.! ಸಂಗಾತಿಯಾಗಿ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ

ಜೋತಿಷ್ಯ ಶಾಸ್ತ್ರದಲ್ಲಿ ಶನಿಗ್ರಹಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಶನಿಯು ಕರ್ಮದಾತ ಎನ್ನಲಾಗಿದೆ. ಇನ್ನು ಅಕ್ಟೋಬರ್ 23 ರ ಬಳಿಕ ಧಂತೇಸರದಲ್ಲಿ ಶನಿಯ ಸಂಚಾರ ಬದಲಾವಣೆಯಾಗಲಿದೆ. ಹಿಮ್ಮುಖ ಚಲನೆಯಲ್ಲಿರುವ ಶನಿಯು ಮುನ್ನೆಡೆಯಲಿದ್ದು, ಈ ಸಂದರ್ಭದಲ್ಲಿ ಕೆಲ ರಾಶಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ.  

ವೃಷಭ ರಾಶಿ: ಅಕ್ಟೋಬರ್ 23 ರ ಬಳಿಕ ಧಂತೇಸರದಲ್ಲಿ ಶನಿಯ ಸಂಚಾರ ಬದಲಾವಣೆಯಾಗಲಿದೆ. ಯಾವಾಗ ಶನಿಯ ಸಂಚಾರ ಬದಲಾವಣೆಯಾಗುತ್ತದೆಯೋ ಅಂದಿನಿಂದ ವೃಷಭ ರಾಶಿಯವರಿಗೆ ಅನೇಕ ಅನಿರೀಕ್ಷಿತ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಅಷ್ಟೇ ಅಲ್ಲದೆ, ಈ ರಾಶಿಯವರು  ಮಾಡುವ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಆರ್ಥಿಕ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆಯಿದೆ.

ಕರ್ಕಾಟಕ: ಶನಿಯು ಪಥ ಬದಲಾವಣೆ ಮಾಡಿದ ಬಳಿಕ ಈ ರಾಶಿಯವರು ಹಲವು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ವ್ಯಾಪಾರದಲ್ಲೂ ಸಮಸ್ಯೆ ಎದುರಿಸಲಿದ್ದು, ಆರ್ಥಿಕ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದರ ಜೊತೆಗೆ ದಾಂಪತ್ಯದಲ್ಲೂ ವಿರಸ, ಮನಸ್ತಾಪಗಳು ಕಂಡುಬರುವ ಸಾಧ್ಯತೆಯಿದೆ.

ಕನ್ಯಾ: ಇನ್ನು ಕನ್ಯಾ ರಾಶಿಯವರು ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನೀವು ಈಗಾಗಲೆ ರೂಪಿಸಿರುವ ಯೋಜನೆಗಳು ಮುನ್ನಡೆ ಸಾಧಿಸುವಲ್ಲಿ ವಿಫಲವಾಗಲಿದೆ. ಆಪ್ತರ ಜೊತೆಯೂ ಮನಸ್ತಾಪಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕಯಿಂದ ಇರುವುದು ಸೂಕ್ತ.

ಮಕರ: ಈ ರಾಶಿಯವರಿಗೆ ಅನಾವಶ್ಯಕ ಖರ್ಚು ವೆಚ್ಚಗಳು ಉಂಟಾಗುತ್ತದೆ. ಹೀಗಾಗಿ, ಚಿಂತೆಗಳು ಅಧಿಕವಾಗಲಿದೆ. ಒಡಹುಟ್ಟಿದವರ ಆರೋಗ್ಯದಲ್ಲೂ ಏರುಪೇರಾಗಲಿದೆ. ಹೀಗಾಗಿ ಎಚ್ಚರಿಕೆ ವಹಿಸಿ. ಕೌಟುಂಬಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕುಂಭ: ಈ ರಾಶಿಯವರೂ ಸಹ ಊಹಿಸಿರದಂತಹ ಸಂಕಷ್ಟ ಎದುರಿಸುತ್ತೀರಿ. ಅಧಿಕ ಖರ್ಚು-ವೆಚ್ಚ, ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳಿವೆ.

 ಇದನ್ನೂ ಓದಿ: Dhanatrayodashi 2022: ರಾಶಿಗಳಿಗೆ ಅನುಗುಣವಾಗಿ ಏನನ್ನು ಖರೀದಿಸಬೇಕು/ಖರೀದಿಸಬಾರದು?

(ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ)

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News