Vitamin Deficiency: ತೀವ್ರ ಹಲ್ಲು ನೋವು, ಬಾಯಿಯ ದುರ್ವಾಸನೆಗೆ ಈ ಮೂರು ಜೀವಸತ್ವಗಳ ಕೊರತೆಯೇ ಕಾರಣ!

Vitamin Deficiency: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಆಗಾಗ್ಗೆ ತೀವ್ರವಾದ ಹಲ್ಲು ನೋವನ್ನು ಅನುಭವಿಸುತ್ತಾರೆ. ಮಾತ್ರವಲ್ಲ, ಒರಲ್ ಹೆಲ್ತ್ ಬಗ್ಗೆ ಎಷ್ಟೇ ಗಮನಹರಿಸಿದರೂ ಸಹ ಬಾಯಿಯ ದುರ್ವಾಸನೆ ಮುಜಗರಕ್ಕೆ ಈಡುಮಾಡುತ್ತದೆ. ಇದಕ್ಕೆ ಜೀವಸತ್ವಗಳ ಕೊರತೆಯೂ ಸಹ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Oct 14, 2022, 10:29 AM IST
  • ವಿಟಮಿನ್ ಡಿ ನಮ್ಮ ಮೂಳೆಗಳ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದೆ
  • ನಮ್ಮ ಹಲ್ಲುಗಳು ಸಹ ಈ ಮೂಳೆಗಳ ಭಾಗವಾಗಿದೆ
  • ಆದ್ದರಿಂದ ಹಲ್ಲುಗಳ ಉತ್ತಮ ಆರೋಗ್ಯಕ್ಕೆ ವಿಟಮಿನ್ ಡಿ ಬಹಳ ಮುಖ್ಯವಾಗುತ್ತದೆ.
Vitamin Deficiency: ತೀವ್ರ ಹಲ್ಲು ನೋವು, ಬಾಯಿಯ ದುರ್ವಾಸನೆಗೆ ಈ ಮೂರು ಜೀವಸತ್ವಗಳ ಕೊರತೆಯೇ ಕಾರಣ! title=
Vitamin Deficiency

Vitamin Deficiency: ಹಲ್ಲುಗಳು ನಮ್ಮ ದೇಹದ ಬಹಳ ಮುಖ್ಯವಾದ ಭಾಗವಾಗಿದೆ. ನಾವು ರುಚಿಕರವಾದ ಆಹಾರವನ್ನು ಆನಂದಿಸಲು ಬಯಸಿದರೆ, ಹಲ್ಲುಗಳ ರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬಾಯಿ ಶುಚಿಗೊಳಿಸುವಿಕೆಯು ಆರೋಗ್ಯದ ಮೇಲೆ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ, ನಾವು ಅದರ ಬಗ್ಗೆ ಗಮನ ಹರಿಸದಿದ್ದರೆ, ಬಾಯಿಯಿಂದ ದುರ್ವಾಸನೆ ಹೊರಹೊಮ್ಮುತ್ತದೆ. ಇದು ಹಲವು ಬಾರಿ ಮುಜುಗರವನ್ನೂ ಉಂಟು ಮಾಡಬಹುದು. ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಆಗಾಗ್ಗೆ ತೀವ್ರವಾದ ಹಲ್ಲು ನೋವನ್ನು ಅನುಭವಿಸುತ್ತಾರೆ. ಮಾತ್ರವಲ್ಲ, ಒರಲ್ ಹೆಲ್ತ್ ಬಗ್ಗೆ ಎಷ್ಟೇ ಗಮನಹರಿಸಿದರೂ ಸಹ ಬಾಯಿಯ ದುರ್ವಾಸನೆ ಮುಜಗರಕ್ಕೆ ಈಡುಮಾಡುತ್ತದೆ. ಇದಕ್ಕೆ ಜೀವಸತ್ವಗಳ ಕೊರತೆಯೂ ಸಹ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

ಹೌದು, ಹಲ್ಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಹಲ್ಲುಗಳಿಗೆ ಸರಿಯಾದ ಪೋಷಣೆ ಅಗತ್ಯ . ಇದರಲ್ಲಿ ಮುಖ್ಯವಾದದ್ದು, ನಾವು ದೈನಂದಿನ ಆಹಾರದಲ್ಲಿ ಏನು ತಿನ್ನುತ್ತೇವೆ ಎಂಬುದರ ಬಗ್ಗೆ ವಿಶೇಷ ಗಮನಹರಿಸಬೇಕು.  ಸಾಮಾನ್ಯವಾಗಿ, ಅನೇಕ ಜೀವಸತ್ವಗಳ ಕೊರತೆಯಿಂದಾಗಿ, ನಾವು ಹಲ್ಲಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಇದು ಪೈರಿಯಾದಂತಹ ಕಾಯಿಲೆಗೆ ಕಾರಣವಾಗಬಹುದು. 

ಯಾವ ವಿಟಮಿನ್ ಕೊರತೆಯು ಪೈರಿಯಾವನ್ನು ಉಂಟುಮಾಡುತ್ತದೆ?
* ವಿಟಮಿನ್ ಬಿ:

ಉತ್ತಮ ಹಲ್ಲಿನ ಆರೋಗ್ಯಕ್ಕೆ ವಿಟಮಿನ್ ಬಿ 12 ಬಹಳ ಮುಖ್ಯವಾಗಿದೆ.  ಇದರ ಕೊರತೆಯು ಹಲ್ಲುಗಳ ಪ್ರತಿರಕ್ಷೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮತ್ತು ಅದು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.  ಇದು ನಂತರ ಪೈಯೋರಿಯಾ ರೂಪವನ್ನು ತೆಗೆದುಕೊಳ್ಳಬಹುದು. ಆದರೆ, ನಿಮ್ಮ ದೈನಂದಿನ ಆಹಾರದಲ್ಲಿ ಹಾಲು, ಹಾಲಿನ ಉತ್ಪನ್ನಗಳು ಮತ್ತು ಕೊಬ್ಬಿನ ಮೀನುಗಳನ್ನು ಸೇರಿಸುವುದರಿಂದ ಇಂತಹ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ- Curd Benefits: ಉತ್ತಮ ಆರೋಗ್ಯಕ್ಕಾಗಿ ನಿತ್ಯ ಸೇವಿಸಿ ಒಂದು ಕಪ್ ಮೊಸರು

* ವಿಟಮಿನ್ ಸಿ:
ವಿಟಮಿನ್ ಬಿ 12 ಮಾತ್ರವಲ್ಲದೆ ವಿಟಮಿನ್ ಸಿ ಕೊರತೆಯೂ ಕೂಡ ಪೈರಿಯಾ ಸಮಸ್ಯೆಗೆ ಕಾರಣವಾಗಬಹುದು. ವಾಸ್ತವವಾಗಿ, ವಿಟಮಿನ್ ಸಿ ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಇದರೊಂದಿಗೆ ಇದರಲ್ಲಿರುವ ಗುಣಗಳು ಬ್ಯಾಕ್ಟೀರಿಯಾದ ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ. ಈ ಪೋಷಕಾಂಶವನ್ನು ಪಡೆಯಲು, ನೀವು ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿ ಸೇರಿದಂತೆ ಹುಳಿ ವಸ್ತುಗಳನ್ನು ತಿನ್ನಬಹುದು.

* ವಿಟಮಿನ್ ಡಿ:
ವಿಟಮಿನ್ ಡಿ ನಮ್ಮ ಮೂಳೆಗಳ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದೆ, ನಮ್ಮ ಹಲ್ಲುಗಳು ಸಹ ಈ ಮೂಳೆಗಳ ಭಾಗವಾಗಿದೆ. ಆದ್ದರಿಂದ ಹಲ್ಲುಗಳ ಉತ್ತಮ ಆರೋಗ್ಯಕ್ಕೆ ವಿಟಮಿನ್ ಡಿ ಬಹಳ ಮುಖ್ಯವಾಗುತ್ತದೆ. ಈ ಪೋಷಕಾಂಶಗಳನ್ನು ಪಡೆಯಲು ಉತ್ತಮ ಮಾರ್ಗವೆಂದರೆ ದಿನಕ್ಕೆ 15 ರಿಂದ 20 ನಿಮಿಷಗಳ ಕಾಲ ಬಿಸಿಲಿನಲ್ಲಿ ಹೋಗುವುದು. ಆದಾಗ್ಯೂ, ಈ ವಿಟಮಿನ್ ಅನ್ನು ಕೆಲವು ಆಹಾರವನ್ನು ಸೇವಿಸುವ ಮೂಲಕವೂ ಪಡೆಯಬಹುದು.

ಇದನ್ನೂ ಓದಿ- Dengue Treatment: ಈ ಆಹಾರಗಳು ಡೆಂಗ್ಯೂ ಚಿಕಿತ್ಸೆಯಲ್ಲಿ ರಾಮಬಾಣವಿದ್ದಂತೆ

ಹಲ್ಲುಗಳ ಆರೋಗ್ಯಕ್ಕಾಗಿ ಈ ರೀತಿ ನಿಗಾವಹಿಸಿ:
ಪೋಷಕಾಂಶಗಳ ಮೂಲಕ ಆಂತರಿಕವಾಗಿ ಉತ್ತಮವಾಗಿರುತ್ತದೆ, ಆದರೆ ಅದರ ಬಾಹ್ಯ ಶುಚಿಗೊಳಿಸುವಿಕೆಗೂ ನಾವು ಒತ್ತುನೀಡಬೇಕು. ಬೆಳಿಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಗಳನ್ನು ಬ್ರಷ್ ಮಾಡಬೇಕು. ಆಹಾರವನ್ನು ಸೇವಿಸಿದ ನಂತರ ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು.  ಹಲ್ಲು ಮತ್ತು ಒಸಡುಗಳಲ್ಲಿ ಪ್ಲೇಕ್ ಅನ್ನು ಸಂಗ್ರಹಿಸಲು ಅನುಮತಿಸಬೇಡಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News