ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ತೂಕ ನಷ್ಟದವರೆಗೆ ಈ ಎಲೆಗಳು ಪ್ರಯೋಜನಕಾರಿಯಾಗಿದೆ.
ಬೆಂಗಳೂರು : ಪೇರಳೆ ಹಣ್ಣು ತಿನ್ನಲು ಬಲು ರುಚಿಕರ. ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ ಈ ಹಣ್ಣು. ಪೇರಳೆ ಹಣ್ಣು ಮಾತ್ರವಲ್ಲ ಇದರ ಎಳೆಗಳು ಕೂಡಾ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇದರಲ್ಲಿ ಔಷಧೀಯ ಗುಣಗಳು ಕಂಡು ಬರುತ್ತವೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ತೂಕ ನಷ್ಟದವರೆಗೆ ಈ ಎಲೆಗಳು ಪ್ರಯೋಜನಕಾರಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪೇರಳೆ ಎಲೆಗಳನ್ನು ಮಧುಮೇಹ ಚಿಕಿತ್ಸೆಗಾಗಿ ಸಾಂಪ್ರದಾಯಿಕ ಔಷಧಿಯಲ್ಲಿ ಬಳಸಲಾಗುತ್ತದೆ. ಪೇರಳೆ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಫೀನಾಲಿಕ್ ಸಂಯುಕ್ತಗಳನ್ನು ಒಳಗೊಂಡಿದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆಗೆ ಅಡ್ಡಿಪಡಿಸುವ ಫ್ರೀ ರಾಡಿಕಲ್ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ.
ಅತಿಸಾರ, ಭೇದಿ ಮತ್ತು ಅಜೀರ್ಣದಂತಹ ಅನೇಕ ಸಮಸ್ಯೆಗಳಿಗೆ ಪೇರಳೆ ಎಲೆಗಳು ಪ್ರಯೋಜನಕಾರಿಯಾಗಿದೆ. ಪೇರಳೆ ಎಲೆಯ ರಸವು ಬ್ಯಾಕ್ಟೀರಿಯಾ ಮತ್ತು ವೈರಸ್ ವಿರುದ್ದ ಹೋರಾಡುವಲ್ಲಿ ಶಕ್ತವಾಗಿದೆ. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಸಂಯುಕ್ತವು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ತಡೆಯುತ್ತದೆ.
ಪೇರಳೆ ಎಲೆಗಳು ಅದರ ಆಂಟಿ-ಆಕ್ಸಿಡೆಂಟ್ ಮತ್ತು ಫ್ಲೇವನಾಯ್ಡ್ ಸಮೃದ್ಧ ಪ್ರೊಫೈಲ್‌ನೊಂದಿಗೆ ಪಾರ್ಶ್ವವಾಯು, ಅಪಧಮನಿಗಳಲ್ಲಿನ ಬ್ಲಾಕ್‌ಗಳು ಮುಂತಾದ ಹೃದಯ ಸಂಬಂಧಿತ ಸಮಸ್ಯೆಗಳನ್ನು ಸಹ ತಡೆಯುತ್ತದೆ. ಎಲ್‌ಡಿಎಲ್ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಕೆಂಪು ಪೇರಲದ ಎಲೆಗಳ ರಸವು ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಪ್ರಬಲ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಪೇರಳೆ ಎಲೆಗಳು ಸ್ತನದಲ್ಲಿನ ಕ್ಯಾನ್ಸರ್ ಕೋಶಗಳಿಗೆ ಚಿಕಿತ್ಸೆ ನೀಡಲು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಕಾರಿ. ಪೇರಳೆ ಎಲೆಯ ರಸವು ಮೇದೋಜ್ಜೀರಕ ಗ್ರಂಥಿ, ಯಕೃತ್ತು ಮತ್ತು ಮೂತ್ರಪಿಂಡದ ಅಂಗಾಂಶಗಳನ್ನು ಆಕ್ಸಿಡೇಟಿವ್‌ನಿಂದ ಹಾನಿಗೊಳಗಾಗದಂತೆ ರಕ್ಷಿಸುತ್ತದೆ. ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.