Modi Government: ದೇಶದ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಕೇಂದ್ರ ಸರ್ಕಾರ ಮಹತ್ವದ ಅವಕಾಶವನ್ನು ನೀಡುತ್ತಿದೆ. ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವಾಗ, ಕಳೆದ ದಶಕದಲ್ಲಿ ಬಂದಿರುವ ಬದಲಾವಣೆಗಳನ್ನು ಆಧಾರ್‌ನಲ್ಲಿ ನೀವು ಅಪ್ಡೇಟ್ ಮಾಡಬಹುದು. ಮಾರ್ಚ್ 31, 2021 ರ ಹೊತ್ತಿಗೆ, ಭಾರತದ ಒಟ್ಟು 128.99 ಕೋಟಿ ನಿವಾಸಿಗಳಿಗೆ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಪ್ರಕಾರ, 10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಪಡೆದವರು ಮತ್ತು ನಂತರದ ವರ್ಷಗಳಲ್ಲಿ ಎಂದಿಗೂ ಎಂದಿಗೂ ಕೂಡ ಅದನ್ನು ಅಪ್ಡೇಟ್ ಮಾಡದ ವ್ಯಕ್ತಿಗಳು, ಆಧಾರ್ ಸಂಖ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ನವೀಕರಿಸಲು ವಿನಂತಿಸಲಾಗಿದೆ.
ಈ ರೀತಿ ನವೀಕರಿಸಿ
ಕಳೆದ ಹತ್ತು (10) ವರ್ಷಗಳಲ್ಲಿ, ವ್ಯಕ್ತಿಯ ಗುರುತಿನ ಪುರಾವೆಯಾಗಿ ಆಧಾರ್ ಸಂಖ್ಯೆ ಹೊರಹೊಮ್ಮಿದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆ. ಈ ಯೋಜನೆಗಳು ಮತ್ತು ಸೇವೆಗಳನ್ನು ಪಡೆಯಲು, ಸಾಮಾನ್ಯ ಜನರು ಇತ್ತೀಚಿನ ವೈಯಕ್ತಿಕ ವಿವರಗಳೊಂದಿಗೆ ಆಧಾರ್ ಡೇಟಾವನ್ನು ನವೀಕರಿಸಬೇಕು. ಇದರಿಂದ ಆಧಾರ್ ದೃಢೀಕರಣ ಅಥವಾ ಪರಿಶೀಲನೆಯಲ್ಲಿ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ಯುಐಡಿಎಐ ಈ ನಿಟ್ಟಿನಲ್ಲಿ ಆಧಾರ್ ಸಂಖ್ಯೆ ಹೊಂದಿರುವವರಿಗೆ ನಿಗದಿತ ಶುಲ್ಕದೊಂದಿಗೆ ದಾಖಲೆಗಳನ್ನು ನವೀಕರಿಸುವ ಸೌಲಭ್ಯವನ್ನು ಒದಗಿಸಿದೆ. ಇದರ ಮೂಲಕ, ಆಧಾರ್ ಸಂಖ್ಯೆ ಹೊಂದಿರುವವರು ಆಧಾರ್ ಡೇಟಾದಲ್ಲಿ ವೈಯಕ್ತಿಕ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲೆಗಳನ್ನು ನವೀಕರಿಸಬಹುದು. ಈ ಸೌಲಭ್ಯಕ್ಕಾಗಿ ನನ್ನ ಆಧಾರ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಪ್ರವೇಶಿಸಬಹುದು ಅಥವಾ ನಾಗರಿಕರು ಈ ಸೇವೆಯನ್ನು ಪಡೆಯಲು ಯಾವುದೇ ಹತ್ತಿರದ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬಹುದು.
ಗಮನಾರ್ಹವಾಗಿ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನಬದ್ಧ ಪ್ರಾಧಿಕಾರವಾಗಿದೆ.
ಇದನ್ನೂ ಓದಿ-GDP Growth: ಆರ್ಥಿಕ ಹಿಂಜರಿತದ ಕರಿ ನೆರಳಿನಲ್ಲಿ ಭಾರತಕ್ಕೆ ಬಿಗ್ ಶಾಕ್ ನೀಡಿದ ಐಎಂಎಫ್... ಹೇಳಿದ್ದೇನು?
UIDAI ಅನ್ನು ಭಾರತದ ನಾಗರಿಕರಿಗೆ ಆಧಾರ್ ಎಂಬ ವಿಶಿಷ್ಟ ಗುರುತಿನ ಸಂಖ್ಯೆ (UID) ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ, ಇದರಿಂದಾಗಿ UID ಮೂಲಕ ಡುಪ್ಲಿಕೇಟ್ ಮತ್ತು ನಕಲಿ ಗುರುತನ್ನು ಪರಿಶೀಲಿಸಬಹುದು ಮತ್ತು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ದೃಢೀಕರಿಸಬಹುದು.
ಇದನ್ನೂ ಓದಿ-Free Hongkong Trip: ಉಚಿತವಾಗಿ ಹಾಂಕಾಗ್ ಸುತ್ತುವ ಅವಕಾಶ, 5 ಲಕ್ಷ ಟಿಕೆಟ್ ಗಳು ಉಚಿತ, ಈ ರೀತಿ ಅಪ್ಪ್ಲೈ ಮಾಡಿ
ಶಾಸನಬದ್ಧ ಪ್ರಾಧಿಕಾರವಾಗಿ ಸ್ಥಾಪನೆಯಾಗುವ ಮೊದಲು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 2009 ರ ಜನವರಿ 28 ರ ಗೆಜೆಟ್ ಅಧಿಸೂಚನೆಯ ಪ್ರಕಾರ ಯೋಜನಾ ಆಯೋಗದ (ಪ್ರಸ್ತುತ NITI ಆಯೋಗ್) ಲಗತ್ತಿಸಲಾದ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಮೊದಲ UID ಸಂಖ್ಯೆಯನ್ನು 2010 ರ ಸೆಪ್ಟೆಂಬರ್ 29 ರಂದು ಮಹಾರಾಷ್ಟ್ರದ ನಂದೂರ್ಬಾರ್ ನಿವಾಸಿಗೆ ನೀಡಲಾಯಿತು. ಸೆಪ್ಟೆಂಬರ್ 12, 2015 ರಂದು, ಸರ್ಕಾರವು ಕೆಲಸದ ಹಂಚಿಕೆ ನಿಯಮಗಳಲ್ಲಿನ ತಿದ್ದುಪಡಿ ಮಾಡುವ ಮೂಲಕ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ (DeitY) ವಿಲೀನಗೊಳಿಸಿತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.