ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೋದಿಗೆ ಆಹ್ವಾನ: ಸಚಿವ ಮುರುಗೇಶ್ ನಿರಾಣಿ

ಕರ್ನಾಟಕ ಸಂಘದ ವತಿಯಿಂದ ಇಲ್ಲಿನ ಗುಜರಾತ್ ವಿಶ್ವವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಮೃತ ಮಹೋತ್ಸದಲ್ಲಿ ಮಾತನಾಡಿದರು.

Written by - Bhavishya Shetty | Last Updated : Oct 8, 2022, 07:30 PM IST
    • ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ
    • ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ತೀರ್ಮಾನ
    • ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿಕೆ
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೋದಿಗೆ ಆಹ್ವಾನ: ಸಚಿವ ಮುರುಗೇಶ್ ನಿರಾಣಿ title=
Minister Murugesh Nirani

ನವೆಂಬರ್ 2ರಿಂದ 4ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.

ಕರ್ನಾಟಕ ಸಂಘದ ವತಿಯಿಂದ ಇಲ್ಲಿನ ಗುಜರಾತ್ ವಿಶ್ವವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಮೃತ ಮಹೋತ್ಸದಲ್ಲಿ ಮಾತನಾಡಿದರು.

ಇದನ್ನೂ ಓದಿ: ಬೆಟ್ಟಿಂಗ್ ಹೆಸರಲ್ಲಿ ಸುಲಿಗೆ : ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರು ಅಮಾನತು

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಆಹ್ವಾನಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಸಲಹೆ ನೀಡಿದ್ದಾರೆ. ಶೀಘ್ರದಲ್ಲೇ ಸರ್ಕಾರದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಅಂದಾಜು 5 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ಹಾಗೂ 5 ಲಕ್ಷ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಳೆದ ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ ( ಎಫ್ ಡಿಐ ) ಯಲ್ಲಿ ಕ‌ರ್ನಾಟಕ ಮೊದಲ ಸ್ಥಾನದಲ್ಲಿದೆ. ಇದು ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ತೋರಿಸುತ್ತದೆ ಎಂದು ನಿರಾಣಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟಪಿತ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಸೇರಿದಂತೆ ಅನೇಕ ನಾಯಕರನ್ನು ದೇಶಕ್ಕೆ ನೀಡಿದ ರಾಜ್ಯ ಗುಜರಾತ್ ಎಂದು ಪ್ರಶಂಶಿದರು.

ಕರ್ನಾಟಕ- ಗುಜರಾತ್ ಸೋದರ ಬಾಂಧವ್ಯ‌ ಹೊಂದಿದೆ. ಆಚಾರ, ವಿಚಾರ, ಉಡುಗೆ ತೊಡುಗೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಎರಡೂ ರಾಜ್ಯಗಳ ನಡುವೆ ಬಹಳಷ್ಟು ಸಾಮ್ಯತೆ ಎಂದು ನಿರಾಣಿ ಅವರು ಹೇಳಿದರು.

4-5 ಲಕ್ಷ ಕನ್ನಡಿಗ ಸಹೋದರರು ಗುಜರಾತ್ ನಲ್ಲಿರುವಂತೆ ಅಷ್ಟೇ ಪ್ರಮಾಣದ ಗುಜರಾತಿಗಳು ಕರ್ನಾಟಕದಲ್ಲೂ ಇದ್ದಾರೆ. ಇಲ್ಲಿರುವ 5 ಲಕ್ಷ ಜನರು ಮುಂದಿನ ಚುನಾವಣೆಯಲ್ಲಿ 50 ಲಕ್ಷ ಮತ ತರುವ ಮೂಲಕ ಪ್ರಧಾನಿ ಮೋದಿಯ ಕೈ ಬಲಪಡಿಸಬೇಕು ಎಂದು ಸ್ಥಳೀಯ ಕನ್ನಡಿಗರಿಗೆ ಮನವಿ ಮಾಡಿದರು.

ಇದನ್ನೂ ಓದಿ:  ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿ ʼರೇಮೊʼ ನ. 25ರಂದು ಬಿಡುಗಡೆ

ವಿಶ್ವದಲ್ಲೇ ಅತ್ಯಂತ ಎರಡನೇ ಶ್ರೀಮಂತ ವ್ಯಕ್ತಿ ಅದಾನಿ ಅವರು ಇದೇ ಗುಜರಾತ್  ರಾಜ್ಯಕ್ಕೆ ಸೇರಿದವರು. ಹಿಂದುಜ ಸಮೂಹದ ಅಗರ್ ವಾಲ್ ಅವರು ಲಂಡನ್ ನಲ್ಲಿ ಬಂಗ್ಲೆ ಖರೀದಿಸಿದರು. ಸುಧಾ ಮೂರ್ತಿ ಅಳಿಯ ಪ್ರಧಾನಿ ಆಗುವ ಹಂತ‌ ತಲುಪಿದ್ದರು. ಇದು ನರೇಂದ್ರ ಮೋದಿ ಅವರ ಕಾಲದಲ್ಲಿ ಭಾರತ ಸಾಧಿಸುತ್ತಿರುವ ಯಶೋಗಾಥೆ ಎಂದು ನಿರಾಣಿ ಅವರು ಬಣ್ಣಿಸಿದರು. ಅಹಮದಾಬಾದ್ ನಲ್ಲಿ ಕನ್ನಡ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಕನ್ನಡ ಭವನ ನಿರ್ಮಾಣ ಮಾಡಿದರೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡುವ ಆಶ್ವಾಸನೆಯನ್ನು ನೀಡಿದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News