ಮಧುಮೇಹದ ಗಂಭೀರ ಕಾಯಿಲೆಗೆ ಕಾರಣವಾಗುವ ಅಂತಹ ಕೆಲವು ಅಭ್ಯಾಸಗಳ ಬಗ್ಗೆ ನಾವು ಇಲ್ಲಿ ಬರೆಯುತ್ತಿದ್ದೇವೆ ಮತ್ತು ಈ ಅಭ್ಯಾಸಗಳನ್ನು ತಪ್ಪಿಸುವುದರಿಂದ ಮಧುಮೇಹದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.
ಬೆಂಗಳೂರು : ಮಧುಮೇಹದ ಲಕ್ಷಣಗಳು ಮತ್ತು ಪರಿಣಾಮಗಳು ತ್ವರಿತವಾಗಿ ಕಂಡುಬರುವುದಿಲ್ಲ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು ಕಳವಳಕಾರಿ ವಿಷಯವಾಗಿದೆ. ಮಧುಮೇಹವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮಧುಮೇಹದ ಸಮಸ್ಯೆ ಕಾಡಲು ಅನೇಕ ಕಾರಣಗಳಿರಬಹುದು. ಆದರೆ, ನಾವು ಅನುಸರಿಸುವ ಕೆಲವು ಅಭ್ಯಾಸಗಳೇ ಈ ರೋಗಕ್ಕೆ ಮುಖ್ಯವಾಗಿ ಆಹ್ವಾನ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧೂಮಪಾನದ ಮೂಲಕ ಹಾನಿಕಾರಕ ರಾಸಾಯನಿಕಗಳು ದೇಹವನ್ನು ತಲುಪಲು ಕಾರಣವಾಗುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ.
ಬಯೋಲಾಜಿಕಲ್ ಸೈಕಲ್ ಸರಾಗವಾಗಿ ಕಾರ್ಯನಿರ್ವಹಿಸುವಂತಾಗಲು ದೇಹದಲ್ಲಿ ಕೆಲವು ವಿಶೇಷ ರೀತಿಯ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ವ್ಯಕ್ತಿಯು ನಿದ್ರೆಯ ಕೊರತೆಯಿಂದ ಬಳಲುತ್ತಿದ್ದರೆ ಅಥವಾ ಸರಿಯಾಗಿ ನಿದ್ರೆ ಮಾಡದಿದ್ದರೆ, ಅದು ಬಯೋಲಾಜಿಕಲ್ ಸೈಕಲ್ ಅನ್ನು ಸಂಪೂರ್ಣವಾಗಿ ಕೆಡಿಸುತ್ತದೆ. ಇದು ಮಧುಮೇಹದಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ಕೇಕ್, ಸಿಹಿತಿಂಡಿಗಳು, ಐಸ್ ಕ್ರೀಮ್, ಬಿಸ್ಕತ್ತುಗಳು ಮತ್ತು ಕೇಕ್ ಗಳಂಥ ಸಿಹಿ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಮಧುಮೇಹದ ಕಾರಣಗಳಲ್ಲಿ ಒಂದಾಗಿದೆ.
ಸೋಮಾರಿತನ ಅಥವಾ ಕೆಲವು ಕೆಲಸಗಳಲ್ಲಿ ನಿರತರಾಗಿ ಅನೇಕ ಜನರು ವ್ಯಾಯಾಮ ಮಾಡುವುದಿಲ್ಲ. ವಾಸ್ತವವಾಗಿ, ವ್ಯಾಯಾಮವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಅನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.