ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿದ್ದು ಪ್ರತಿರೋಧದ ಕಾರಣಕ್ಕಲ್ಲ-ಸುಪ್ರೀಂಕೋರ್ಟ್

ಕೊರೆಗಾಂವ್-ಭೀಮಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಐವರು ಮಾನವ ಹಕ್ಕು ಕಾರ್ಯಕರ್ತರು ಮತ್ತೆ ನಾಲ್ಕು ವಾರಗಳವರೆಗೆ ಗೃಹ ಬಂಧನದಲ್ಲಿಯೇ ಉಳಿಯುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ  ವಿಶೇಷ ತನಿಖಾ ತಂಡ ಅಥವಾ ಸಿಐಟಿಯ ತನಿಖೆಗಾಗಿ ಸಲ್ಲಿಸಿದ್ದ ಮನವಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

Last Updated : Sep 28, 2018, 12:45 PM IST
ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿದ್ದು ಪ್ರತಿರೋಧದ ಕಾರಣಕ್ಕಲ್ಲ-ಸುಪ್ರೀಂಕೋರ್ಟ್ title=

ನವದೆಹಲಿ: ಕೊರೆಗಾಂವ್-ಭೀಮಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಐವರು ಮಾನವ ಹಕ್ಕು ಕಾರ್ಯಕರ್ತರು ಮತ್ತೆ ನಾಲ್ಕು ವಾರಗಳವರೆಗೆ ಗೃಹ ಬಂಧನದಲ್ಲಿಯೇ ಉಳಿಯುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ  ವಿಶೇಷ ತನಿಖಾ ತಂಡ ಅಥವಾ ಸಿಐಟಿಯ ತನಿಖೆಗಾಗಿ ಸಲ್ಲಿಸಿದ್ದ ಮನವಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ನ್ಯಾಯಾಲಯವು ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.ಈ ಕೇಸ್ ಭಿನ್ನಾಭಿಪ್ರಾಯದ ಕಾರಣದಿಂದ ಬಂಧಿಸಿರುವ ಪ್ರಕರಣವಲ್ಲ ಎಂದು ಜಸ್ಟಿಸ್ ಎಎಮ್ ಖಾನ್ವಿಲ್ಕರ್ ಹೇಳಿದ್ದಾರೆ.

ಪೊಲೀಸರ ಆಪಾದನೆಗೆ ಯಾವುದೇ ರೀತಿಯ ಆಧಾರವಿಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದ್ದಾರೆ. ವರಾವರ್ ರಾವ್, ಅರುಣ್ ಫೆರೀರಾ, ವರ್ನಾನ್ ಗೊನ್ಸಾಲ್ವ್ಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವಲಾಖಾ ಎಂಬವರ ಐವರು ಮಾನವ ಕಾರ್ಯಕರ್ತರು ಆಗಸ್ಟ್ 29 ರಿಂದ ಗೃಹ ಬಂಧನದಲ್ಲಿದ್ದಾರೆ. ಮಹಾರಾಷ್ಟ್ರ ಪೊಲೀಸರು 'ಎಲ್ಗಾರ್ ಪರಿಷತ್' ಸಭೆ ಮೂಲಕ ಈ ಮಾನವ ಹಕ್ಕು ಕಾರ್ಯಕರ್ತರು ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಪೋಲಿಸರು ಮಾನವ ಹಕ್ಕು ಹೋರಾಟಗಾರರ ಬಂಧನದ ವಿಚಾರವಾಗಿ ಮಾಧ್ಯಮವನ್ನು ಬಳಸಿಕೊಂಡಿರುವ ನಡೆ ನೇರವಾಗಿ ಪ್ರಶ್ನಿಸಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ಖಾನ್ವಿಲ್ಕರ್  ಪೊಲೀಸರು ತಮ್ಮ ತನಿಖೆಯ ವಿಚಾರವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಬಳಸಿಕೊಂಡಿರುವು ನಿಜಕ್ಕೂ ಗಂಭಿರವಾಗಿ ಚಿಂತಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಜಸ್ಟಿಸ್ ಖಾನ್ವಿಲ್ಕರ್ ಹೇಳಿದ್ದಾರೆ

Trending News