IAF Get LCH Helicopter: ಸ್ವದೇಶಿ ನಿರ್ಮಿತ್ ಲಘು ಯುದ್ಧ ಹೆಲಿಕಾಪ್ಟರ್ (LCH) ಅನ್ನು ಭಾರತೀಯ ವಾಯುಪಡೆ ಸೋಮವಾರ ಔಪಚಾರಿಕವಾಗಿ ತನ್ನ ಫ್ಲೀಟ್‌ಗೆ ಸೇರ್ಪಡೆಗೊಳಿಸಿದೆ. ವಾಯುಪಡೆಯ ಬಲ ಇದರಿಂದ ಭಾರಿ ಹೆಚ್ಚಾಗಲಿದೆ. ಈ ಹೆಲಿಕಾಪ್ಟರ್ ಅನೇಕ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೆಲಿಕಾಪ್ಟರ್ ಅನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರ ಸಮ್ಮುಖದಲ್ಲಿ ಜೋಧ್ ಪುರದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜೆ ಮತ್ತು ಮಂತ್ರ ಪಠಣ ಮಾಡುವ ಮೂಲಕ ಎಲ್.ಸಿ.ಎಚ್. ಅನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ. 5.8 ಟನ್ ತೂಕ ಮತ್ತು ಎರಡು ಎಂಜಿನ್ ಹೊಂದಿರುವ ಈ ಹೆಲಿಕಾಪ್ಟರ್ ಅನ್ನು ಈಗಾಗಲೇ ಹಲವು ಶಸ್ತ್ರಾಸ್ತ್ರಗಳ ಬಳಕೆಗಾಗಿ ಪರೀಕ್ಷಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದ ಭದ್ರತೆಯಲ್ಲಿ ಭಾರತೀಯ ವಾಯುಪಡೆ ಪ್ರಮುಖ ಪಾತ್ರ ವಹಿಸಿದೆ. ಆಂತರಿಕ ಬೆದರಿಕೆಗಳು ಅಥವಾ ಬಾಹ್ಯ ಯುದ್ಧಗಳೇ ಆಗಲಿ, ಭಾರತೀಯ ವಾಯುಪಡೆಯು ಯಾವಾಗಲೂ ತನ್ನ ಧೈರ್ಯ ಮತ್ತು ಶೌರ್ಯದಿಂದ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ LCH ನ ಸೇರ್ಪಡೆ IAF ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇಲ್ಲಿವೆ LCH ಪ್ರಚಂಡನ 10 ಮಹತ್ವದ ಮಾಹಿತಿಗಳು
>> ಲಘು ಯುದ್ಧ ಹೆಲಿಕಾಪ್ಟರ್ ಅಂದರೆ LCH ಹೆಲಿಕಾಪ್ಟರ್ ಸುಮಾರು 6 ಟನ್ ತೂಗುತ್ತದೆ, ಈ ಕಾರಣದಿಂದಾಗಿ ಇದು ತುಂಬಾ ಹಗುರವಾಗಿದ್ದರೆ ಅಮೆರಿಕದಿಂದ ಬರಮಾಡಿಸಿಕೊಳ್ಳಲಾದ ಅಪಾಚೆ ಹೆಲಿಕಾಪ್ಟರ್ ಸುಮಾರು 10 ಟನ್ ತೂಗುತ್ತವೆ.
>> ಕಡಿಮೆ ತೂಕವಿರುವ ಕಾರಣ ಕಾರಣ, ಈ LCH ತನ್ನ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಎತ್ತರದ ಪ್ರದೇಶದಲ್ಲಿಯೂ ಸಹ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಬಹುದು.
>> LCH ದಾಳಿಯ ಹೆಲಿಕಾಪ್ಟರ್‌ನಲ್ಲಿ 'ಮಿಸ್ಟ್ರಲ್' ಏರ್-ಟು-ಏರ್ ಕ್ಷಿಪಣಿಗಳು ಮತ್ತು ವಿಶೇಷವಾಗಿ ಫ್ರಾನ್ಸ್‌ನಿಂದ ಬಂದಿರುವ ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಗಳನ್ನು ಅಳವಡಿಸಲಾಗಿದೆ.
>> LCH ಪ್ರತಿ 70 ಮಿಮೀ 12-12 ರಾಕೆಟ್‌ಗಳ ಎರಡು ಪಾಡ್‌ಗಳನ್ನು ಹೊಂದಿದೆ.
>> ಇದಲ್ಲದೆ, LCH ನ ನೋಸ್ ನಲ್ಲಿ 20 ಎಂಎಂ ಗನ್ ಅನ್ನು ಸ್ಥಾಪಿಸಲಾಗಿದೆ, ಇದು 110 ಡಿಗ್ರಿಗಳಲ್ಲಿ ಯಾವುದೇ ದಿಕ್ಕಿನಲ್ಲಿ ತಿರುಗುತ್ತದೆ.
>> ಕಾಕ್‌ಪಿಟ್‌ನ ಎಲ್ಲಾ ವೈಶಿಷ್ಟ್ಯಗಳನ್ನು ಪೈಲಟ್‌ನ ಹೆಲ್ಮೆಟ್‌ನಲ್ಲಿ ಡಿಸ್ಪ್ಲೇ ಮಾಡಲಾಗುತ್ತದೆ.
>> ಕಾರ್ಗಿಲ್ ಯುದ್ಧದ ನಂತರ ಭಾರತ ಸ್ಥಳೀಯವಾಗಿ LCH ಅಟ್ಯಾಕ್ ಹೆಲಿಕಾಪ್ಟರ್ ಅನ್ನು ಸಿದ್ಧಪಡಿಸಲು ಹೆಜ್ಜೆ ಇಟ್ಟಿತ್ತು. ಏಕೆಂದರೆ 15-16 ಸಾವಿರ ಅಡಿ ಎತ್ತರದಲ್ಲಿ ಹೋಗಿ ಶತ್ರುಗಳ ಬಂಕರ್ ಗಳನ್ನು ಧ್ವಂಸ ಮಾಡಬಲ್ಲಂಥ ದಾಳಿ ಹೆಲಿಕಾಪ್ಟರ್ ಆಗ ಭಾರತದ ಬಳಿ ಇರಲಿಲ್ಲ. ಈ ಯೋಜನೆಗೆ 2006 ರಲ್ಲಿ ಅನುಮೋದನೆ ನೀಡಲಾಗಿದೆ.
>> ಕಳೆದ 15 ವರ್ಷಗಳ ಕಠಿಣ ಪರಿಶ್ರಮದ ನಂತರ ಈ ಲಘು ಯುದ್ಧ ಹೆಲಿಕಾಪ್ಟರ್ ತಯಾರಾಗಿದೆ.
ಇದನ್ನೂ ಓದಿ-
>> ರಕ್ಷಣಾ ಸಚಿವಾಲಯದ ಪ್ರಕಾರ, ಈ ಹೆಲಿಕಾಪ್ಟರ್‌ಗಳು ಶೇ. 45 ರಷ್ಟು ಸ್ಥಳೀಯ ಉಪಕರಣಗಳನ್ನು ಹೊಂದಿದ್ದು, ನಂತರದ ಆವೃತ್ತಿಗಳಲ್ಲಿ ಇದನ್ನು 55% ಕ್ಕೆ ಹೆಚ್ಚಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-
>> ಹೆಲಿಕಾಪ್ಟರ್ ಹೆಚ್ಚು ಸಕ್ರಿಯ, ಕುಶಲ, ವಿಸ್ತೃತ ಶ್ರೇಣಿ, ಎತ್ತರದ ಮತ್ತು ಗಡಿಯಾರದ ಸುತ್ತಿನ ನಿಯೋಜನೆ, ಯುದ್ಧ ಹುಡುಕಾಟ ಮತ್ತು ಪಾರುಗಾಣಿಕಾ, ಶತ್ರುಗಳ ವಾಯು ರಕ್ಷಣೆಯ ಮೇಲೆ ದಾಳಿ ಮತ್ತು ಪ್ರತಿ ದಂಗೆಯ ಕಾರ್ಯಾಚರಣೆಗಳ ಪಾತ್ರವನ್ನು ನಿರ್ವಹಿಸಲು ಎಲ್ಲಾ ಹವಾಮಾನ ಯುದ್ಧಗಳಿಗೆ ಸಮರ್ಥವಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.