ನವದೆಹಲಿ: 1992 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಸ್ಥಳದಲ್ಲಿ ದೇವಾಲಯವೊಂದನ್ನು ನಿರ್ಮಿಸಬಹುದೇ ಎನ್ನುವ ವಿಚಾರವಾಗಿ ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಅಲ್ಲದೆ ಈಗಾಗಲೇ 1994 ರಲ್ಲಿ ನೀಡಿರುವ ತೀರ್ಪನ್ನು ಮತ್ತೆ ಪರಿಶೀಲಿಸುವುದಿಲ್ಲ ಎಂದು ಸುಪ್ರೀಂ ಹೇಳಿದೆ. ಅಯೋಧ್ಯೆಯಲ್ಲಿ ವಿವಾದಿತ ಭೂಮಿ ವಿಚಾರವಾಗಿ ಅಕ್ಟೋಬರ್ 29 ರಿಂದ ನಿರಂತರ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.ಆ ಮೂಲಕ ಇಂದಿನ ತೀರ್ಪು ಮುಂದಿನ ಮುಖ್ಯ ತೀರ್ಪಿಗೆ ದಿಕ್ಸೂಚಿಯಾಗಲಿದೆ ಎನ್ನುವುದನ್ನು ಹಲವು ಕಾನೂನು ತಜ್ಞರು ತಿಳಿಸಿದ್ದಾರೆ.
- ಮುಸ್ಲಿಂ ಅರ್ಜಿದಾರರು 1994 ರ ತೀರ್ಪು ಪ್ರಕಾರ, ನಮಾಜ್ ನ್ನು ಎಲ್ಲಿ ಬೇಕಾದಲ್ಲಿಯೂ ಕೂಡ ಮಾಡಬಹುದು ಎನ್ನುವ ಸಂಗತಿಯು ಅಯೋಧ್ಯೆಯಲ್ಲಿನ ವಿವಾದಿತ ಪ್ರದೇಶದಲ್ಲಿನ ವಾದದಲ್ಲಿ ತಮ್ಮ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎನ್ನುವ ಆತಂಕವಿದೆ. ಹಲವು ದಶಕಗಳ ಈ ವಿವಾದವನ್ನು ಬಗೆ ಹರಿಸುವ ಮೊದಲು ಅದನ್ನು ಪರಿಶೀಲಿಸಬೇಕೆಂದು ಮುಸ್ಲಿಂ ಅರ್ಜಿದಾರರು ವಾದಿಸಿದ್ದಾರೆ.ಇನ್ನೊಂದೆಡೆ ಹಿಂದೂ ಅರ್ಜಿದಾರರು ಇದು ಮುಖ್ಯ ಪ್ರಕರಣದಲ್ಲಿ ವಿಚಾರಣೆಯನ್ನು ವಿಳಂಬ ಮಾಡುವ ಒಂದು ಪ್ರಯತ್ನ, ಏಕೆಂದರೆ ಮುಸ್ಲಿಂ ಅರ್ಜಿದಾರರು ಉನ್ನತ ನ್ಯಾಯಾಲಯವು ಅವರ ವಿರುದ್ಧ ತೀರ್ಪನ್ನು ನೀಡಲಿದೆ ಎನ್ನುವ ಆತಂಕದಿಂದ ಈ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
- 1994 ರ ತೀರ್ಪು ಮುಖ್ಯ ಅಯೋಧ್ಯಾ ಪ್ರಕರಣದ ಮೇಲೆ ಪ್ರಭಾವ ಬೀರುವುದಿಲ್ಲ ಮತ್ತು ಇಸ್ಲಾಂಗೆ ಮಸೀದಿಯ ಅಗತ್ಯವಿಲ್ಲ ಎನ್ನುವ ವಿಚಾರ ಸರ್ಕಾರವು ಜಾಗವನ್ನು ವಶಪಡಿಸಿಕೊಳ್ಳುವ ದೃಷ್ಟಿಕೋನದಿಂದಲ್ಲ ಅಭಿಪ್ರಾಯಪಟ್ಟಿದ್ದಾರೆ. ಇಂದಿನ ತೀರ್ಪು ಪ್ರಮುಖ ಅಯೋಧ್ಯೆಯ ವಿಚಾರಣೆ ಅಕ್ಟೋಬರ್ ಅಂತ್ಯದ ವೇಳೆಗೆ ನಡೆಯುವ ವಿಚಾರಣೆಗೆ ಒಂದು ರೀತಿ ದಿಕ್ಸೂಚಿಯಾಗಿದೆ.
- ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಕಾನೂನಿನ ಪ್ರಕಾರ ನಿರ್ಮಿಸಲಾಗುವುದು ಎಂದು ತನ್ನ ಭರವಸೆ ನೀಡಿರುವ ಆಡಳಿತ ಪಕ್ಷ ಬಿಜೆಪಿಗೆ ಇದು ಲಾಭದಾಯಕವಾಗಲಿದೆ; ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗೂ ಮುನ್ನ ಸುಪ್ರೀಂ ಕೋರ್ಟ್ನಿಂದ ಅನುಕೂಲಕರವಾದ ತೀರ್ಪನ್ನು ಬಿಜೆಪಿ ನಿರೀಕ್ಷಿಸುತ್ತದೆ.
- 1992 ರಲ್ಲಿ ರಾಮನು ಹುಟ್ಟಿದ ಸ್ಥಳದಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು 16 ನೇ ಶತಮಾನದ ಮಸೀದಿ ಲಕ್ಷಾಂತರ ಬಲಪಂಥೀಯ ಕರಸೇವಕರಿಂದ ನಾಶಪಡಿಸಲಾಯಿತು. 2010 ರಲ್ಲಿ, ಅಲಹಾಬಾದ್ ಕೋರ್ಟ್ ಮುಸ್ಲಿಂ ಮತ್ತು ಹಿಂದು ಧರ್ಮಗಳ ನಡುವೆ ಮೂರು ಭಾಗವಾಗಿ ವಿಂಗಡಿಸಲಾಯಿತು. ಇದರಲ್ಲಿ ಪ್ರಮುಖ ಭಾಗ ಹಿಂದುಗಳಿಗೆ ದೊರೆತರು ಸಹಿತ,ಎಲ್ಲಾ ಪಕ್ಷಗಳು ಸುಪ್ರೀಂ ಕೋರ್ಟ್ನಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿವೆ.