ಬೆಂಗಳೂರು : ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಬಂಧನವಾಗಿರುವ ಪಿಎಫ್ ಐ ಸಂಘಟನೆಯ ಪ್ರಮುಖರ ಮನೆಯಲ್ಲಿ ಸಾವರ್ಕರ್ ಪುಸ್ತಕ ಸಿಕ್ಕಿದೆ. ಹೌದು ಸಾವರ್ಕರ್ ಸತ್ಯ ಎಷ್ಟು-ಮಿಥ್ಯ ಎಷ್ಟು ಪುಸ್ತಕ ದೊರೆತಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದರ ಜೊತೆಗೆ ಹಿಂದೂ ಟೆರರಿಸಮ್ ಆನ್ ಮೈನಾರಿಟಿ, ಕೋಮುವಾದ ಮತ್ತು ಭಯೋತ್ಫಾದನೆ, ಹೌ ಅಮೆರಿಕಾ ಗಾಟ್ ಡಿಫಿಟೆಡ್ ಇನ್ ವಾರ್ ಆನ್ ಟೆರರ್ ಪುಸ್ತಕಗಳು ಸಹ ದೊರೆತಿವೆ. ಈ ಪುಸ್ತಕಗಳ ಮೂಲಕ ಅನೇಕರಿಗೆ ಒಂದು ಕೋಮಿನ ಬಗ್ಗೆ ದ್ವೇಷ ಹುಟ್ಟಿಸಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದರು ಎಂಬ ಅನುಮಾನ ಶುರುವಾಗಿದೆ. ಇದರ ಜೊತೆಗೆ ಹಲವಾರು ಪೇಪರ್ ಗಳ ಕಾಲಂ ರೈಟಿಂಗ್ ಹಾಗೂ ಟಾಬ್ಲಾಯ್ಡ್ ಪತ್ರಿಕೆಗಳು ಲಭ್ಯವಾಗಿವೆ.
ಇದನ್ನೂ ಓದಿ : ರಾಜ್ಯದ ಜನತೆಗೆ ಕರೆಂಟ್ ಶಾಕ್ : 'ಯೂನಿಟ್ʼಗೆ 24 ರಿಂದ 43 ಪೈಸೆ ವಿದ್ಯುತ್ ದರ ಏರಿಕೆ
ಪ್ರಮುಖವಾಗಿ ಹಿಂದೂ ಸಂಘಟನೆಗೆ ವಿರೋಧವಾಗಿ ಬರೆದಿರುವ ಅನೇಕ ಬರವಣಿಗೆಗಳು ಪೊಲೀಸರ ಕೈ ಸೇರಿವೆ. ಇನ್ನು ಬಂಧನಕ್ಕೊಳಗಾಗಿರುವ ವ್ಯಕ್ತಿಗಳ ಮನೆಯಲ್ಲಿ 40 ಲಕ್ಷ ಲಭಿಸಿದ್ದು, ಈ ಹಣ ಎಲ್ಲಿಂದ ಬಂತು ಹೇಗೆ ಬಂತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಆರೋಪಿತರ ಬ್ಯಾಂಕ್ ಖಾತೆಯ ವಿವರಗಳನ್ನ ಕೂಡ ಕಲೆ ಹಾಕಲಾಗಿದೆ.
ಆರೋಪಿಗಳು ದುಬೈ, ಪಾಕಿಸ್ತಾನ, ಇರಾನ್ ನ ಕೆಲ ವ್ಯಕ್ತಿಗಳ ಜೊತೆಗೂ ಕೂಡ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿ ಸಹ ಲಭಿಸಿದೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ನಂತರ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದರೊಳಗೆ ವಿಧ್ವಂಸಕ ಕೃತ್ಯ ಎಸಗಲು ಬಂಧಿತರು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಪ್ರಮುಖವಾಗಿ ಎಸ್ ಎಸ್ ಎಲ್ ಸಿ, ಪಿಯುಸಿ ಮುಗಿಸದ ಹುಡುಗರಿಗೆ ವಿಧ್ವಂಸಕ ಕೃತ್ಯಗಳನ್ನು ಹೇಗೆ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡಲು ಮುಂದಾಗಿದ್ದರು. ಮತ್ತೊಂದು ಗಮನಿಸಬೇಕಾದ ಪ್ರಮುಖ ಅಂಶ ಎಂದರೆ, ಕೆಲ ರಾಜಕಾರಣಿಗಳ ಜೊತೆಯೂ ಆರೋಪಿಗಳು ನಿಕಟ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 70 ಲಕ್ಷ ರೂ. ಕಾಣಿಕೆ ಸಂಗ್ರಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.